»   »  ಗಿಲ್ಲಿಯ ಹುಚ್ಚು ಪ್ರೇಮಿ ಗುರುರಾಜ್ ಜಗ್ಗೇಶ್

ಗಿಲ್ಲಿಯ ಹುಚ್ಚು ಪ್ರೇಮಿ ಗುರುರಾಜ್ ಜಗ್ಗೇಶ್

Subscribe to Filmibeat Kannada

ಜೆ.ಎನ್.ವಿ.ಕೆ. ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಪಾಗಲ್ ಪ್ರೇಮಿಯ ನೈಜ ಕಥೆ ಆಧಾರಿತ ಚಿತ್ರ 'ಗಿಲ್ಲಿ' ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಾಘವ್-ಲೋಕಿ ಮರಸೂರು ನಿರ್ದೇಶಿಸಿರುವ ಈ ಚಿತ್ರ ತಮಿಳಿನ ಸೂಪರ್ ಹಿಟ್ '7 ಜಿ ರೈನ್‌ಬೋ ಕಾಲೋನಿ'ಯ ರೀಮೇಕ್.

ಕಥೆಯ ಎಳೆಯನ್ನು ಮಾತ್ರ ತೆಗೆದುಕೊಂಡು ಕನ್ನಡ ಪ್ರೇಕ್ಷಕನಿಗೆ ಇಷ್ಟವಾಗುವ ಅಂಶಗಳನ್ನು ಸೇರಿಸಿಕೊಂಡು ಈ ಚಿತ್ರವನ್ನು ನಿರ್ಮಿಸಿದವರು ಅಣಜಿ ನಾಗರಾಜ್, ಜಯಣ್ಣ ಎನ್ ಹಾಗೂ ವಿಜಯಕಿರಣ್. ನಟ ಜಗ್ಗೇಶ್ ಮಗ ಗುರುರಾಜ್ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುವುದರ ಮೂಲಕ ಬೆಳ್ಳಿತೆರೆ ಅಲಂಕರಿಸಲಿದ್ದಾರೆ. ಉತ್ತರ ಭಾರತ ಮೂಲದ ರಾಕುಲ್ ಪ್ರೀತ್ ಸಿಂಗ್ ನಾಯಕಿಯಾಗಿದ್ದಾರೆ.

ಯುವನ್ ಶಂಕರ್ ರಾಜ ಸಂಗೀತ ಸಂಯೋಜನೆ, ಎಸ್. ಕೃಷ್ಣಾರ ಕ್ಯಾಮೆರಾ ಕಮಾಲ್, ರಾಮ್‌ನಾರಾಯಣ್‌ರ ಸಾಹಿತ್ಯ, ಪಳನಿರಾಜ್‌ರ ಸಾಹಸ ಸಂಯೋಜನೆ ಈ ಚಿತ್ರಕ್ಕಿದ್ದು, ಸುಧಾ ಬೆಳವಾಡಿ, ವೀಣಾ ವೆಂಕಟೇಶ್, ಶ್ರೀನಿವಾಸ್ ಅಲ್ಲದೇ ಜಗ್ಗೇಶ್‌ರ ಇನ್ನೋರ್ವ ಪುತ್ರ ಯತಿರಾಜ್ ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಮನಮಿಡಿಯುವ ದುರಂತ ಪ್ರೇಮ ಕಥೆಯನ್ನು ಹೊಂದಿರುವ ಈ ಚಿತ್ರದ ಬಹುಭಾಗ ನಂದಿನಿ ಲೇ ಔಟ್‌ನಲ್ಲಿ ಚಿತ್ರೀಕರಣಗೊಂಡಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada