»   » ಗುರುಪ್ರಸಾದ್ ಡೈರೆಕ್ಟರ್ಸ್ ಸ್ಪೆಷಲ್ ಭರ್ಜರಿ ಮಾರಾಟ

ಗುರುಪ್ರಸಾದ್ ಡೈರೆಕ್ಟರ್ಸ್ ಸ್ಪೆಷಲ್ ಭರ್ಜರಿ ಮಾರಾಟ

By: * ಉದಯರವಿ
Subscribe to Filmibeat Kannada

'ಮಠ' ಗುರುಪ್ರಸಾದ್ ಅವರ 'ಸಿನಿಮಾ ಮಾಡಲಾಗದ ಕಥೆಗಳು ಮತ್ತಿತರ ಲೇಖನಗಳು' ಪುಸ್ತಕದ ಪ್ರತಿಗಳು ಸಂಪೂರ್ಣ ಖರ್ಚಾಗಿವೆ. ಈಗ ಇದೇ ಪುಸ್ತಕ ಎರಡನೇ ಮುದ್ರಣ ಕಂಡಿದ್ದು, ಪುಸ್ತಕ ಮಳಿಗೆಗಳಲ್ಲಿ ಸೋಮವಾರದಿಂದ (ಫೆ.14) ಲಭ್ಯವಾಗಲಿದೆ. ಕೆಂಗುಲಾಬಿಗೆ ಬದಲಾಗಿ ಪ್ರೇಮಿಗಳು ಈ ಪುಸ್ತಕವನ್ನು ವಿನಿಮಯ ಮಾಡಿಕೊಳ್ಳಬಹುದು.

"ಮೊದಲ ಮುದ್ರಣದಲ್ಲಿ 3,000 ಪ್ರತಿಗಳನ್ನು ಅಚ್ಚುಹಾಕಲಾಗಿತ್ತು. ಎರಡನೇಮುದ್ರಣದಲ್ಲಿ 5,000 ಪ್ರತಿಗಳನ್ನು ಮುದ್ರಿಸಲಾಗಿದೆ.ನನ್ನ ಪುಸ್ತಕ ಒಂದು ಹೆಣ್ಣು ಇದ್ದಂತೆ.ಓದುಗರಿಗೆ ಈ ಪುಸ್ತಕ ಇಷ್ಟವಾಗಿದೆ" ಎಂದು ದಟ್ಸ್‌ಕನ್ನಡಕ್ಕೆ ಗುರುಪ್ರಸಾದ್ ತಿಳಿಸಿದ್ದಾರೆ.

'ಡೈರಕ್ಟರ್ಸ್ ಸ್ಪೆಷಲ್' ಚಿತ್ರ ಸೆಟ್ಟೇರಿದ ಸಂದರ್ಭದಲ್ಲಿ (ಆ.27, 2010) ಈ ಪುಸ್ತಕ ಲೋಕಾರ್ಪಣೆಯಾಗಿತ್ತು. ಪುಸ್ತಕ ಬಿಡುಗಡೆಯಾದ ಆರು ತಿಂಗಳಲ್ಲೇ ಎಲ್ಲಾ ಪ್ರತಿಗಳು ಮಾರಾಟವಾಗಿರುವುದು ವಿಶೇಷ. ಇನ್ನು ಮುಂದೆ ಗುರುಪ್ರಸಾದ್ ಅವರ ಲೇಖನಿ ಮತ್ತಷ್ಟು ಹರಿತವಾಗಲಿ ಎಂದು ಆಶಿಸೋಣ.

ಗುರು ಬರೆದಿರುವ 18 ಸಣ್ಣ ಕತೆಗಳ ಸಂಕಲನವೇ 'ಸಿನಿಮಾ ಮಾಡಲಾಗದ ಕಥೆಗಳು'. ಇಲ್ಲಿ ತಮ್ಮ ವಿಭಿನ್ನ ಶೈಲಿಯಿಂದ ಗುರು ಓದುಗರನ್ನು ಹಿಡಿದಿಡುತ್ತಾರೆ. ಇಲ್ಲಿನ ಒಂದೊಂದು ಕತೆಯೂ ಅಚ್ಚರಿ ಮೂಡಿಸುತ್ತಾ ಸಾಗುತ್ತದೆ. ಓದುಗನಿಗೆ ವಿಭಿನ್ನ ಅನುಭವ ನೀಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಸ್ಯಾಂಪಲ್‌ಗಾಗಿ ಒಂದೆರಡು ಕತೆಗಳು ಇಲ್ಲಿವೆ ಓದಿ ನೋಡಿ. ಒಬ್ಬನೇ ಕೂತು ಎಣ್ಣೆ ಹಾಕೋವಾಗ ಹೊಳೆದ ಕಥೆ ಹಾಗೂ ನರಕದಲ್ಲಿ ಇಂದು : ಎಲ್ಲೂ ಕೇಳಿರದ ಪ್ರೇಮಕಥೆ.

English summary
Cinema Madalagada Kathegalu, a collection of short story by Kannada movie Director Guruprasad, second edition is out. The second edition of the book is now available in stories. The book contains 18 short stories.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada