»   » ಖಳನಾಯಕನಿಂದ ನಾಯಕಿಯ ಅಪಹರಣ

ಖಳನಾಯಕನಿಂದ ನಾಯಕಿಯ ಅಪಹರಣ

Posted By:
Subscribe to Filmibeat Kannada
Engagement movie still
ಆತನದು ಹುಚ್ಚು ಪ್ರೀತಿ. ಪ್ರೀತಿಯನ್ನು ಹಿಂಸೆಯ ಮೂಲಕ ತಿಳಿಸುವ ಸ್ವಭಾವದವನು. ನಾಯಕಿಯನ್ನು ಕರೆ ತಂದು ಕೋಣೆಯೊಂದರಲ್ಲಿ ಕೂಡು ಹಾಕಿದ ಖಳನಟ ನಾಯಕಿಗೆ ಚಿತ್ರಹಿಂಸೆ ಕೊಡುತ್ತಿರುತ್ತಾನೆ. ಹಿಂಸೆಗೆ ತತ್ತರಿಸಿದ ನಾಯಕಿ ನನಗೆ ಏಕೆ ಇಷ್ಟು ಹಿಂಸೆ ನೀಡುತ್ತಿದ್ದೀಯಾ? ಎಂದು ಪ್ರಶ್ನಿಸಿದಾಗ ನೀನು ನನ್ನವಳು. ನಾನು ಸದಾ ನಿನ್ನ ನೋಡುತ್ತಿರಬೇಕು. ಬೇರೆ ಯಾರು ನಿನ್ನ ನೋಡಬಾರದು. ನನ್ನ ಅನುಮತಿ ಇಲ್ಲದೆ ನೀನು ಎಲ್ಲು ಹೋಗುವ ಹಾಗೂ ಇಲ್ಲ ಎಂದು ಮಾತಿನ ಬಾಣದಿಂದ ಚುಚ್ಚುತ್ತಾನೆ.

ಅಪರೂಪಕ್ಕೊಮ್ಮೆ ನಾಯಕಿಯನ್ನು ನಗರ ವೀಕ್ಷಣೆಗೆ ಕರೆದುಕೊಂಡು ಹೋಗುತ್ತಿದ ಈತ ಆಕೆಗೆ ಮುಸುಕು ಧರಿಸಿ ಬರುವಂತೆ ಸೂಚಿಸುತ್ತಿದ. ಈ ಸನ್ನಿವೇಶವನ್ನು ಬೆಂಗಳೂರಿನ ಸಂಕದಕಟ್ಟೆ ಬಳಿಯ ಖಾಸಗಿ ನಿವಾಸವೊಂದರಲ್ಲಿ 'ಎಂಗೇಜ್‌ಮೆಂಟ್' ಚಿತ್ರಕ್ಕಾಗಿ ನಿರ್ದೇಶಕ ಎಸ್.ಪಿ.ನಂಜುಂಡಿ ಚಿತ್ರೀಕರಿಸಿಕೊಂಡರು. ಚಂದನ್ ಹಾಗೂ ಆಶಾ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ಶ್ರೀಸತ್ಯನಾರಾಯಣ ಕಂಬೈನ್ಸ್ ಲಾಂಛನದಲ್ಲಿ ಎಂ.ಗೋಪಾಲಕೃಷ್ಣ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎಸ್.ಪಿ.ನಂಜುಂಡಿ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಎ.ಟಿ.ರವೀಶ್ ಅವರ ಸಂಗೀತ, ರೇಣುಕುಮಾರ್ ಛಾಯಾಗ್ರಹಣ, ದಾಮೋದರ್ ಸಂಕಲನ, ಶ್ರೀನಿವಾಸ್ ಕಲಾನಿರ್ದೆಶನ ಹಾಗೂ ದಾಡಿ ರಮೇಶ್ ನಿರ್ಮಾಣ ನಿರ್ವಹಣೆಯಿರುವ 'ಎಂಗೇಜ್‌ಮೆಂಟ್' ಚಿತ್ರದ ತಾರಾಬಳಗದಲ್ಲಿ ಪ್ರಶಾಂತ್, ಆಶಾ, ಚಂದನ್, ರಾಮಕೃಷ್ಣ, ರಮೇಶ್‌ಭಟ್, ಬ್ಯಾಂಕ್‌ಜನಾರ್ದನ್, ಜ್ಯೋತಿ, ಮೈಕಲ್‌ಮಧು, ಕಿಲ್ಲರ್‌ವೆಂಕಟೇಶ್, ಸತ್ಯಜಿತ್, ಮಾಸ್ಟರ್ ಅಭಿಷೇಕ್ ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada