»   »  ಹಾಡಿನ ಸಂಭ್ರಮದಲ್ಲಿ ಯೋಗೀಶ್ ಪ್ರೀತ್ಸೆ ಪ್ರೀತ್ಸೆ

ಹಾಡಿನ ಸಂಭ್ರಮದಲ್ಲಿ ಯೋಗೀಶ್ ಪ್ರೀತ್ಸೆ ಪ್ರೀತ್ಸೆ

Posted By:
Subscribe to Filmibeat Kannada
Yogish
ಹಿಂದೆ ಬಂದ ಜನಪ್ರಿಯ ಗೀತೆಗಳ ಪಲ್ಲವಿ ನೂತನ ಚಿತ್ರದ ಶೀರ್ಷಿಕೆಯಾಗಿ ಹೊರಹೊಮ್ಮುತ್ತಿರುವುದು ಕನ್ನಡ ಚಿತ್ರರಂಗದಲ್ಲಿ ಸಾಮಾನ್ಯವಾಗಿದೆ. ಈಗ ಆ ಸಾಲಿಗೆ ಮತ್ತೊಂದು ಸೇರ್ಪಡೆ 'ಪ್ರೀತ್ಸೆ ಪ್ರೀತ್ಸೆ'.

'ದುನಿಯಾ' ಚಿತ್ರದಲ್ಲಿ ಲೂಸ್‌ಮಾದ ಎಂಬ ಪಾತ್ರದಿಂದ ಗುರುತಿಸಿಕೊಂಡು ಜನಪ್ರಿಯನಾದ ನಟ ಯೋಗೀಶ್. 'ನಂದಾ ಲವ್ಸ್ ನಂದಿತಾ ಚಿತ್ರದಿಂದ ಪೂರ್ಣಪ್ರಮಾಣದ ನಾಯಕನಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಇವರು ಸದ್ಯದ ಬೇಡಿಕೆ ನಟರಲ್ಲೊಬ್ಬರಾಗಿದ್ದಾರೆ. ಪ್ರಸ್ತುತ ಚಿತ್ರದಲ್ಲೂ ನಾಯಕರಾಗಿ ಅಭಿನಯಿಸುತ್ತಿದ್ದಾರೆ.

ಮೋಹನ್ ಕುಮಾರ್.ಎನ್ ಅರ್ಪಿಸಿ, ಮೋಹನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿತ್ತಿರುವ 'ಪ್ರೀತ್ಸೆಪ್ರೀತ್ಸೆ ಚಿತ್ರಕ್ಕೆ ನಗರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಎರಡು ಗೀತೆಗಳ ಚಿತ್ರೀಕರಣ ಪೂರೈಸಿಕೊಂಡು ಬಂದಿರುವ ಚಿತ್ರಕ್ಕೆ ನಗರದ ಅಭಿಮಾನ್ ಸ್ಟೂಡಿಯೋದಲ್ಲಿ ನಾಗೇಂದ್ರ ಪ್ರಸಾದ್ ಗೀತರಚನೆಯ 'ಊರಿಗೆ ಬಾರೆ ನೀರಿಗೆ ಬಾರೆ ತುಳುಕುತ ಬಾರೆ ಬಳಕುತ ಬಾರೆ- ತುಳುಕುವ ಬಳಕುವ ನನ್ ಈ ಹೃದಯದಲ್ಲಿ' ಎಂಬ ಗೀತೆಯ ಚಿತ್ರೀಕರಣ ನಡೆದಿದೆ. ನಾಯಕ ಯೋಗೀಶ್, ನಾಯಕಿ ಉದಯತಾರಾ ಹಾಗೂ 40ಕ್ಕೂ ಅಧಿಕ ನೃತ್ಯಗಾರರು ಅಭಿನಯಿಸಿದ ಈ ಗೀತೆಗೆ ಇಮ್ರಾನ್ ನೃತ್ಯ ಸಂಯೋಜಿಸಿದ್ದಾರೆ. ಮತ್ತೊಂದು ಗೀತೆಯ ಚಿತ್ರೀಕರಣಕ್ಕಾಗಿ ಚಿತ್ರತಂಡ ಈ ವಾರ ಬ್ಯಾಂಕಾಕ್‌ಗೆ ಪ್ರಯಾಣ ಬೆಳಸಲಿದೆ ಎಂದು ನಿರ್ಮಾಪಕ ಕೃಷ್ಣಯ್ಯ ತಿಳಿಸಿದ್ದಾರೆ.

ದರ್ಶನ್ ಅಭಿನಯದ 'ಗಜ ಚಿತ್ರದ ನಿರ್ದೇಶಕರಾದ ಕೆ.ಮಾದೇಶ್ ಈ ಚಿತ್ರಕ್ಕೆ ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅನುಪ್ ಸೀಳಿನ್ ಸಂಗೀತ, ವೀನಸ್ ಮೂರ್ತಿ ಛಾಯಾಗ್ರಹಣ, ತ್ರಿಭುವನ್, ಇಮ್ರಾನ್ ನೃತ್ಯ, ತಿರುಪತಿ ರೆಡ್ಡಿ ಸಂಕಲನ, ಕೆ.ವಿ.ರಾಜು ಸಂಭಾಷಣೆ, ಸುರೇಶ್ ಗೋಸ್ವಾಮಿ ಕಥೆ-ಸಹನಿರ್ದೇಶನ ಹಾಗೂ ಚಂದ್ರಪ್ಪನವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಯೋಗೀಶ್, ಉದಯ ತಾರಾ, ಪ್ರಜ್ಞ, ಜೈಜಗದೀಶ್, ಸಂಗೀತಾ, ರಮೇಶ್ ಭಟ್, ಪಿ.ಎನ್.ಸತ್ಯ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಯೋಗೀಶ್ ಸಂಭಾವನೆ ದಿನಕ್ಕೆ ಸಾವಿರ ರುಪಾಯಿ!
ಎಲ್ಲ ಯೋಗೀಶನ ಮಹಿಮೆ, ಶತಕದತ್ತ ಅಂಬಾರಿ
ಚಿತ್ರವಿಮರ್ಶೆ: ನಂದಾ ಲವ್ಸ್ ನಂದಿತಾ
ದುನಿಯಾದ 'ಲೂಸ್ ಮಾದನ' ಬಗ್ಗೆ ಒಂದಿಷ್ಟು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada