»   » ಸ್ಟೈಲ್ ಕಿಂಗ್ ರಜನಿಕಾಂತ್‌ಗೆ ಅಭೂತಪೂರ್ವ ಸ್ವಾಗತ

ಸ್ಟೈಲ್ ಕಿಂಗ್ ರಜನಿಕಾಂತ್‌ಗೆ ಅಭೂತಪೂರ್ವ ಸ್ವಾಗತ

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಚೆನ್ನೈ ಏರ್‌ಪೋರ್ಟ್‌ಗೆ ಬುಧವಾರ ರಾತ್ರಿ ಬಂದಿಳಿಯುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ, ಸಡಗರ ಮುಗಿಲು ಮುಟ್ಟಿತು. ರಜನಿ ಪತ್ನಿ ಲತಾ ಹಾಗೂ ಮಗಳು ಐಶ್ವರ್ಯ ಲ್ಯಾಂಡ್ ಆಗುತ್ತಿದ್ದಂತೆ ಅಭಿಮಾನಿಗಳ ಪಟಾಕಿ ಸಿಡಿಸಿ ತಮ್ಮ ನೆಚ್ಚಿನ ನಟನನ್ನು ಬರಮಾಡಿಕೊಂಡರು.

ಭದ್ರತಾ ಕಾರಣಗಳಿಗಾಗಿ ರಜನಿ ಆಗಮನವನ್ನು ಪೊಲೀಸರು ರಾತ್ರಿ 9.30ರವರೆಗೂ ಬಾಯ್ಬಿಟ್ಟಿರಲಿಲ್ಲ. ಅವರು ಬಂದಿಳಿದ ಮೇಲಷ್ಟೆ ರಜನಿಕಾಂತ್ ಆಗಮನವನ್ನು ತಿಳಿಸಿದರು. ಸುಮಾರು ರಾತ್ರಿ10.45ಕ್ಕೆ ಬಂದಿಳಿದ ರಜನಿಕಾಂತ್ ಅವರು ವಿಐಪಿ ಎಕ್ಸಿಟ್ ಮೂಲಕ ಹೊರನಡೆದರು.

ಅಭಿಮಾನಿಗಳನ್ನು ನಿರಾಸೆಪಡಿಸದೆ ಅವರ ಕಡೆಗೆ ಎರಡು ಕೈಗಳನ್ನು ಜೋಡಿಸಿ ಕೈ ಮುಗಿದರು. ಬ್ಲೂ ಜೀನ್ಸ್ ಹಾಗೂ ಬಿಳಿ ಬಣ್ಣದ ಶರ್ಟ್ ಧಾರಿಯಾಗಿದ್ದ ರಜನಿಕಾಂತ್ ಕಪ್ಪು ಕನ್ನಡದಲ್ಲಿ ಕಂಗೊಳಿಸುತ್ತಿದ್ದನ್ನು ಕಂಡು ಅಭಿಮಾನಿಗಳ ಕೇಕೆ ಶಿಳ್ಳೆಗಳು ತಾರಕಕ್ಕೇರಿತು. (ಏಜೆನ್ಸೀಸ್)

English summary
Fans of Rajinikanth burst crackers, screamed with joy and cheered with new enthusiasm, as Rajinikanth arrived Chennai last night. The superstar was accompanied by his wife Latha Rajinikanth, daughters Aishwarya Dhanush and other family members.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada