»   » ಸಾಹಿತಿ ಜಯಂತ್ ಕಾಯ್ಕಿಣಿಗೆ ಗೌರವ ಡಾಕ್ಟರೇಟ್

ಸಾಹಿತಿ ಜಯಂತ್ ಕಾಯ್ಕಿಣಿಗೆ ಗೌರವ ಡಾಕ್ಟರೇಟ್

Posted By:
Subscribe to Filmibeat Kannada
Jayant Kaikini
ಮುಂಗಾರು ಮಳೆಯಲ್ಲಿನ ಗೀತೆಯೊಂದರಲ್ಲಿ ಜಯಂತ್ ಕಾಯ್ಕಿಣಿ ಬಳಸಿದ 'ಮಧುರ ಯಾತನೆ" ಎಂಬ ಪದ ಪ್ರೇಮಿಗಳ ಭಾಷೆ ಹಾಗೂ ಭಾವನೆಯಲ್ಲಿ ಮಧುರ ಸಂಚಲನವನ್ನೇ ಸೃಷ್ಟಿಸಿತು. ಪ್ರೇಮ, 'ಇಷ್ಟಪಟ್ಟು ಅನುಭವಿಸುವ ಯಾತನೆ' ಎನ್ನುವ ಕಲ್ಪನೆಯೇ ಹೊಸತಾಗಿ ಕಂಡಿತ್ತು. ಅಲ್ಲಿಂದ ಜಯಂತ್ ಕಾಯ್ಕಿಣಿಯ ಸಿನಿಮಾ ಸಾಹಿತ್ಯದ ಪಯಣ ಯಶಸ್ಸಿನೊಂದಿಗೆ ಸಾಗಿದೆ.

ನವಿರು ಕಥೆಗಳು. ಅತಿ ನವಿರು ಕವಿತೆಗಳು. ನವಿರಾತಿನವಿರು ಅಂಕಣ ಬರಹಗಳು. ಜಿಲೇಬಿಯಂಥ ಮಾತುಗಳು. ಹೌದು, ಇವೆಲ್ಲ ಜಯಂತರ ಯಕ್ಷಸೃಷ್ಟಿಗಳೇ! ಆದರೆ, ಇವೆಲ್ಲ ಈಸ್ಟ್‌ಮನ್ ಕಲರ್ ನೆನಪುಗಳು. ಈಗ, ಜಯಂತ್ ಎಂದರೆ ಮುಂಗಾರುಮಳೆ. ಜಯಂತ್ ಎಂದರೆ ಮಿಲನ. ಜಯಂತ್ ಎಂದರೆ ಹಾಗೇ ಸುಮ್ಮನೆ, ಪಂಚರಂಗಿ, ಪರಮಾತ್ಮ! ಅವರ ಸಾಹಿತ್ಯಕ್ಕೆ ಎಲ್ಲರೂ 'ಪರವಶನಾದೆನು...' ಎನ್ನುವವರೇ.

ಕನ್ನಡ ಸಿನಿಮಾ ಹಾಡುಗಳಿಗೆ ಹೊಸ ನುಡಿಗಟ್ಟುಗಳನ್ನು, ಕನ್ನಡ ಪ್ರೇಮಿಗಳಿಗೆ ಹೊಸ ಹಾಡುಗಳನ್ನು ಕಟ್ಟಿಕೊಟ್ಟಿರುವ ಈ ಜಯಂತ್ ಕಾಯ್ಕಿಣಿಯವರನ್ನು ಹುಡುಕಿಕೊಂಡು ಇದೀಗ ಗೌರವ ಡಾಕ್ಟರೇಟ್ ಬಂದಿದೆ. ತುಮಕೂರು ವಿಶ್ವವಿದ್ಯಾಲಯ ಈ ಪ್ರಶಸ್ತಿಯನ್ನು ನೀಡಲಿರುವುದಾಗಿ ಸುದ್ದಿ ಬಂದಿದೆ. ಸಿನಿಮಾ ಉದ್ಯಮ ಹಾಗೂ ಸಿನಿಮಾ ಪ್ರಿಯರ ಸಂತಸಕ್ಕೆ ಇನ್ನೇನು ಬೇಕು? (ಒನ್ ಇಂಡಿಯಾ ಕನ್ನಡ)

English summary
One of the popular lyrics writer in the Kannada cinema industry, Jayanth Kaikini has been chosen to receive an honorary doctorate from the Tumkur University.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada