ಅಜಯ್ ದೇವಗನ್ ಸಂಬಳ ರು.18 ಕೋಟಿ ಕಣ್ರಿ!
ಬಾಲಿವುಡ್ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಅಜಯ್ ದೇವಗನ್ (42) ವಯಸ್ಸಿನ ಜೊತೆಗೆ ಅವರ ಸಂಭಾವನೆಯಲ್ಲ್ಲೂ ಭಾರಿ ಏರಿಕೆ ಕಂಡುಬಂದಿದೆ. ವಶು ಭಗ್‌ನಾನಿ ಅವರ ಮುಂದಿನ ಚಿತ್ರಕ್ಕೆ ಅಜಯ್ ದೇವಗನ್ ರು.18 ಕೋಟಿ ಸಂಭಾವನೆ ಎಣಿಸಿದ್ದಾರೆ. 1983ರಲ್ಲಿ ತೆರೆಕಂಡ 'ಹಿಮ್ಮತ್‌ವಾಲಾ' ಚಿತ್ರದ ರೀಮೇಕ್ ಚಿತ್ರವಿದು.
ಅಜಯ್ ದೇವಗನ್ ಹೇಳಿಕೊಳ್ಳುವಂತಹ ಹಿಟ್ ಚಿತ್ರಗಳು ಕೊಡದಿದ್ದರೂ ಇತ್ತೀಚೆಗೆ ತೆರೆಕಂಡ 'ಸಿಂಗಂ' ಚಿತ್ರ ಮಾತ್ರ ಬಾಕ್ಸಾಫೀಸಲ್ಲಿ ಥೈತಕ ಎಂದು ಕುಣಿದಿದೆ. 'ಸಿಂಗಂ' ಚಿತ್ರ ಹಿಟ್ ಆದದ್ದೇ ತಡ ಅಜಯ್ ತಮ್ಮ ಸಂಭಾವನೆಯನ್ನು ಸಿಕ್ಕಾಪಟ್ಟೆ ಏರಿಸಿಕೊಂಡಿದ್ದಾರೆ. ಅವರ ಚಿತ್ರಗಳು ಬಾಕ್ಸಾಫೀಸರಲ್ಲಿ ಮಕಾಡೆ ಮಲಗುತ್ತಿದ್ದ ಸಮಯದಲ್ಲಿ ರು.6-8 ಕೋಟಿ ಎಣಿಸುತ್ತಿದ್ದರು.
ಅಂದಹಾಗೆ 'ಸಿಂಗಂ' ಚಿತ್ರ ಬಾಕ್ಸಾಫೀಸಲ್ಲಿ ರು.100 ಕೋಟಿ ಬಾಚಿದೆ ಎಂದು ಬಾಲಿವುಡ್ ಬೊಂಬಡಾ ಬಜಾಯಿಸುತ್ತಿದೆ. ಇದು ನಿಜವೇ ಅಥವಾ ಅಜಯ್ ದೇವಗನ್ ಏನಾದರು ಕೇಳುವವರ ಕಿವಿಗೆ ದಾಸವಾಳ ಹೂವು ಇಟ್ಟರೆ ಎಂದು ಅವರ ಮ್ಯಾನೇಜರ್ ಅವರನ್ನು ಕೇಳಿದರೆ ನಂಗ್ ಗೊತ್ತಿಲ್ಲಪ್ಪ ಎನ್ನುತ್ತಾರೆ ಅವರು. (ಏಜೆನ್ಸೀಸ್)


Click it and Unblock the Notifications











