»   »  ಸಿನಿಮಾ ಪ್ರದರ್ಶನ ವೇಳೆ ಮೇ 22ರಿಂದ ಬದಲು

ಸಿನಿಮಾ ಪ್ರದರ್ಶನ ವೇಳೆ ಮೇ 22ರಿಂದ ಬದಲು

Subscribe to Filmibeat Kannada
Show timings changed in karnataka
ಚಿತ್ರ ಪ್ರದರ್ಶನದ ವೇಳಾಪಟ್ಟಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಮತ್ತು ಕನ್ನಡ ಚಿತ್ರರಂಗದ ನಡುವಿನ ಸಮರ ಸುಖಾಂತ್ಯ ಕಂಡಿದೆ. ಮೇ 15ಕ್ಕೆ ಬದಲಾಗಿ ಮೇ 22 ರಿಂದ ಹೊಸ ವೇಳಾಪಟ್ಟಿ ಜಾರಿಗೆ ಬರಲಿದೆ.

ಚಿತ್ರ ಪ್ರದರ್ಶನದ ಸಮಯ ಬದಲಾವಣೆಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಅವರು ಒಪ್ಪಿಗೆ ಸೂಚಿಸಿದ್ದಾರೆ. ಮೇ 22ರಿಂದ ಏಕರೂಪದ ಹೊಸ ವೇಳಾಪಟ್ಟಿ ಜಾರಿಗೆ ಬರಲಿದೆ . ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ವಾರದಿಂದ ಜಾರಿಗೆ ಬರಬೇಕಿದ್ದ ಹೊಸ ವೇಳಾಪಟ್ಟಿ ಮುಂದಿನ ವಾರದಿಂದ ಜಾರಿಗೆ ಬರಲಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಅಧ್ಯಕ್ಷೆ ಡಾ.ಜಯಮಾಲಾ ಅವರು ತಿಳಿಸಿದರು.

ಚಿತ್ರ ಪ್ರದರ್ಶನ ಸಮಯವನ್ನು ಬದಲಾಯಿಸುವುದರಿಂದ ಕಾನೂನು ಸುವ್ಯವಸ್ಥೆಗೆ ತೊಡಕಾಗುತ್ತದೆ ಎಂದು ಶಂಕರ ಬಿದರಿ ಅವರು ವಾಣಿಜ್ಯ ಮಂಡಳಿಯ ಮನವಿಯನ್ನು ತಳ್ಳಿಹಾಕಿದ್ದರು. ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸದೆ ಮಂಡಳಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದು ಸರಿಯಲ್ಲ ಎಂದಿದ್ದರು. ಈಗ ಮಂಡಳಿಯ ಮನವಿಯನ್ನು ಪರಿಶೀಲಿಸಿ ಬದಲಾವಣೆಗೆ ಒಪ್ಪಿಗೆ ನೀಡಿದ್ದಾರೆ. ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರದೇ ಇರಲು ಈಗಿರುವ ವೇಳಾಪಟ್ಟಿಯು ಒಂದು ಕಾರಣ ಎಂಬುದು ಮಂಡಳಿಯ ಅಭಿಪ್ರಾಯ.

ಕರ್ನಾಟದಲ್ಲಿ ಚಿತ್ರಮಂದಿರಗಳ ಪ್ರದರ್ಶನ ವೇಳೆ ಮೇ 22ರಿಂದ ಬದಲಾಗಲಿದೆ. ಈಗಿನ 10.30, 1.30, 4.30 ಮತ್ತು 7.30ರ ಬದಲಾಗಿ 11.15, 2.30, 6.15 ಮತ್ತು ರಾತ್ರಿ 9 ಗಂಟೆಗೆ ಸಿನಿಮಾ ಪ್ರದರ್ಶನ ನಡೆಯಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಬಿಬಿಎಂಪಿ ಚುನಾವಣಾ ಕಣಕ್ಕೆ ನಿರ್ಮಾಪಕ ಸುರೇಶ್!
ಜಗ್ಗೇಶ್ ವಿರುದ್ಧ ಬೆಂಗಳೂರಲ್ಲಿ ಕರವೇ ಪ್ರತಿಭಟನೆ
ಕಿರುತೆರೆ ನಟಿ ಅಭಿನಯಾ ವೈವಾಹಿಕ ಜೀವನಕ್ಕೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada