»   » 'ಖಡಕ್' ಹುಡುಗಿ ಪದ್ಮಾವತಿ ಬರ್ತಾವ್ಳೆ ಹುಷಾರು!

'ಖಡಕ್' ಹುಡುಗಿ ಪದ್ಮಾವತಿ ಬರ್ತಾವ್ಳೆ ಹುಷಾರು!

Posted By:
Subscribe to Filmibeat Kannada

ಗಗನಸಖಿಯಾಗಿ ಎಲ್ಲೋ ವಿಮಾನಗಳಲ್ಲಿ ವಿಹರಿಸಬೇಕಿದ್ದ ಪದ್ಮಾವತಿ ಎಂಬ ಹುಡುಗಿ ಅನಾಮತ್ತಾಗಿ ಬಣ್ಣದ ಬದುಕಿಗೆ ಕಾಲಿಟ್ಟಿದ್ದಾರೆ. ಬಣ್ಣದ ಬದುಕಿನ ಸೆಳೆತವೇ ಹಾಗೆ ಅನ್ನಿಸುತ್ತದೆ. ಬೆಂಗಳೂರಿನಲ್ಲಿ ಗನಗಸಖಿ ತರಬೇತಿ ಮುಗಿಸಿದ ಪದ್ಮಾವತಿ ಇದೀಗ ಮತ್ತೊಂದು ಕನ್ನಡ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ.

ಸುಮಂಗಲಿ ಸೀರೆಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಪದ್ಮಾವತಿ ಈಗ 'ಖಡಕ್' ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಈಕೆ 'ಕೋಲ್ಮಿಂಚು' ಎಂಬ ಚಿತ್ರದಲ್ಲಿ ನಟಿಸಿದ್ದರು. ಮಲ್ಲೇಶ್ವರಂನ ಅಮ್ಮಣ್ಣಿ ಕಾಲೇಜಿನಲ್ಲಿ ಪಿಯುಸಿ ಓದಿರುವ ಪದ್ಮಾವತಿ ಈಗ ನಟಿಸುತ್ತಿರುವ ಎರಡನೇ ಚಿತ್ರ 'ಖಡಕ್'.

ಮಧ್ಯಮ ವರ್ಗದಿಂದ ಬಂದಿರುವ ಪದ್ಮಾವತಿ ಅದೇ ತರಹದ ಪಾತ್ರವನ್ನು ಖಡಕ್ ಚಿತ್ರದಲ್ಲಿ ಪೋಷಿಸಿದ್ದಾರೆ. ಚಿತ್ರದ ನಾಯಕ ನಟನ ಹೆಸರು ಜಿತೇಶ್.ಅಂಬೇಡ್ಕರ್ ಜಯಂತಿಯಂದು 'ಖಡಕ್' ಧ್ವನಿಸುರುಳಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಸುಮಾರು ಒಂದು ಕೋಟಿ ರು. ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಿರುವುದಾಗಿ ನಿರ್ಮಾಪಕ ದೇವರಾಜ್ ತಿಳಿಸಿದ್ದಾರೆ. ಚಿತ್ರಕ್ಕೆ ಆಕ್ಷನ್, ಕಟ್ ಹೇಳಿದವರು ಜಿ ಕೆ ಮುದ್ದುರಜ್. ಇದು ಅವರ ನಿರ್ದೇಶನದ 37ನೇ ಚಿತ್ರ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada