»   » ಗಗನಯಾತ್ರಿಯಾದ ಸಚಿವ ರಾಮಚಂದ್ರ ಗೌಡ

ಗಗನಯಾತ್ರಿಯಾದ ಸಚಿವ ರಾಮಚಂದ್ರ ಗೌಡ

Posted By:
Subscribe to Filmibeat Kannada

ಗಗನಯಾತ್ರಿಗಳನ್ನು ಚಂದ್ರಮಂಡಲಕ್ಕೆ ಕಳುಹಿಸುವ ಭಾರತದ ಕನಸು ಇನ್ನೂ ಕೈಗೂಡಿಲ್ಲ. ಆದರೆ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ಅವರು ಆಗಲೆ ಗಗನಯಾತ್ರಿಯಾಗಿದ್ದಾರೆ. ಅವರು ಗಗನಯಾತ್ರಿಯ ದಿರಿಸಿನಲ್ಲಿ ಬೆಂಗಳೂರು ಇಸ್ಕಾನ್ ಮಂದಿರದ ದ್ವಾರಕಾಪುರಿಗೆ ಬಂದಿಳಿದರು.

'ಬಿಲಿಯನ್ ಡಾಲರ್ ಬೇಬಿ' ಎಂಬ ಕನ್ನಡ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭಕ್ಕೆ ರಾಮಚಂದ್ರ ಗೌಡರು ಅಂತರಿಕ್ಷಗಾಮಿಯಾಗಿ ಶುಕ್ರವಾರ ಆಗಮಿಸಿದರು. ರಾಮಚಂದ್ರ ಗೌಡರನ್ನು ನೋಡಿದ ಸಭಿಕರು ಒಂದು ಕ್ಷಣ ಅವಾಕ್ಕಾದರು. ಒಮ್ಮೆಯಾದರೂ ಜೀವನದಲ್ಲಿ ಗಗನಯಾತ್ರಿಯಾಗಬೇಕು ಎಂಬ ಕನಸು ಹೊತ್ತ ಪುಟ್ಟ ಬಾಲಕಿಯ ಕಥಾ ಹಂದರವನ್ನು ಈ ಚಿತ್ರ ಒಳಗೊಂಡಿದೆಯಂತೆ.

ಒಟ್ಟಿನಲ್ಲಿ ರಾಮಚಂದ್ರ ಗೌಡರ ಈ ಗೆಟಪ್ ಹಲವರನ್ನು ಉಬ್ಬೇರಿಸುವಂತೆ ಮಾಡಿತು. ಗಗನಯಾತ್ರಿಯ ಮುಸುಕನ್ನು ತೆಗೆದು ಆದಿಚುಂಚನಗಿರು ಮಠಾಧೀಶ ಡಾ.ಬಾಲಗಂಗಾಧರ ಸ್ವಾಮಿ ಅವರ ಸನ್ನಿಧಿಯಲ್ಲಿ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿದರು. ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ವೆಂಕಾಟಲ, ನಟಿ ನೀತೂ ಹಾಗೂ ನಟ ಅನಿರುದ್ಧ್ ಸಹ ಉಪಸ್ಥಿತರಿದ್ದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada