»   »  ರೀಮೇಕ್ ಚಿತ್ರದಲ್ಲಿ ರಾಮ್ ನಾಗಿ ಪುನೀತ್

ರೀಮೇಕ್ ಚಿತ್ರದಲ್ಲಿ ರಾಮ್ ನಾಗಿ ಪುನೀತ್

Subscribe to Filmibeat Kannada
Puneeth Rajkumar
ತೆಲುಗು ಚಿತ್ರರಂಗದ ಮತ್ತೊಂದು ಸೂಪರ್ ಹಿಟ್ ಚಲನಚಿತ್ರ 'ರೆಡಿ' ಕನ್ನಡಕ್ಕೆ ರೀಮೇಕ್ ಆಗಲು ರೆಡಿಯಾಗಿದೆ. ಕನ್ನಡದಲ್ಲಿ 'ರಾಮ್' ಎಂದು ಹೆಸರಿಡಲಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ರಾಮ್' ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

2007-08ನೇ ಸಾಲಿನ ಕರ್ನಾಟಕ ಚಲನಚಿತ್ರ ಪ್ರಶಸ್ತಿಗಳಲ್ಲಿ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ವರಿಸಿದೆ. ಅತ್ಯುತ್ತಮ ನಟ ಪ್ರಶಸ್ತಿಯನ್ನು ನಾಯಕನಟ ಪುನೀತ್ ರಾಜ್ ಕುಮಾರ್ ಮಿಲನ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಪಡೆದಿದ್ದಾರೆ. ಈ ಎಲ್ಲ ಸಂಭ್ರಮಗಳ ನಡುವೆ ಪುನೀತ್ 'ರಾಮ್' ಗೆ ರೆಡಿಯಾಗಿದ್ದಾರೆ.

'ಅಂತು ಇಂತು ಪ್ರೀತಿ ಬಂತು' ಚಿತ್ರದ ನಿರ್ಮಾಪಕ ಆದಿತ್ಯ ಬಾಬು ರಾಮ್ ಚಿತ್ರವನ್ನ್ನು ನಿರ್ಮಿಸುತ್ತಿದ್ದಾರೆ. ಆದಿತ್ಯ ಆರ್ಟ್ಸ್ ಬ್ಯಾನರಿನಡಿ ಶಿವರಾಜ್ ಕುಮಾರ್ ನಾಯಕ ನಟನಾಗಿದ್ದ 'ಪರಮೇಶ ಪಾನ್ ವಾಲಾ' ಚಿತ್ರಕ್ಕೂ ಅವರೆ ನಿರ್ಮಾಪಕರು. 'ಗಜ' ಚಿತ್ರವನ್ನು ನಿರ್ದೇಶಿಸಿದ್ದಮಾದೇಶ್ ಅವರು 'ರಾಮ್' ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಪ್ರಸ್ತುತ ಪುನೀತ್ ರಾಜ್ ಕುಮಾರ್ 'ರಾಜ್-ದಿ ಷೊ ಮ್ಯಾನ್' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

(ದಟ್ಸ್ ಕನ್ನ್ನಡ ಚಿತ್ರವಾರ್ತೆ)
ರಾಜ್ ನಲ್ಲಿ ಬೆಳ್ಳಿತೆರೆಯ ಬಂಗಾರಿಯರ ಥೈಥೈ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada