»   » ಇವನು ಇನಿಯನಲ್ಲ, ತುಂಬ ಸನಿಹ ಬಂದಿಹನಲ್ಲ

ಇವನು ಇನಿಯನಲ್ಲ, ತುಂಬ ಸನಿಹ ಬಂದಿಹನಲ್ಲ

Subscribe to Filmibeat Kannada

'ಮುಂಗಾರು ಮಳೆ" ಗಣೇಶ್‌ನನ್ನು ಆಯ್ಕೆ ಮಾಡಿಕೊಳ್ಳಲು, ಅವನ ನಗುವೇ ಕಾರಣ ಎಂದು ನಿರ್ದೇಶಕ ಯೋಗರಾಜ್‌ ಭಟ್‌ ಹೇಳಿದ್ದಾರೆ. ಚಿತ್ರ ನೋಡಿದವರು, ಹೌದು ಹೌದು ಎನ್ನುತ್ತಿದ್ದಾರೆ... ಚಿತ್ರದ ನಾಯಕಿ ಸಂಜನಾ ಬಗ್ಗೆ ಸಹಾ ಮೆಚ್ಚುಗೆ ವ್ಯಕ್ತವಾಗಿದೆ.

ಗಾಯಕಿ :ಶ್ರೇಯಾ ಗೋಶಲ್‌
ಸಾಹಿತ್ಯ :ಶಿವ

ಇವನು ಗೆಳೆಯನಲ್ಲ, ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲ, ತುಂಬ ಸನಿಹ ಬಂದಿಹನಲ್ಲ
ನೋವಿನಲ್ಲೂ ನಗುತಿಹನಲ್ಲ, ಯಾಕೆ ಈ ಥರ
ಜಾಣ ಮನವೇ ಕೇಳು, ಜಾರಬೇಡ ಇವನ ಕಡೆಗೆ
ಯಾಕೆ ನಿನಗೆ ಸಲ್ಲದ ಸಲಿಗೆ, ಇರಲಿ ಅಂತರ

ಇವನು ಗೆಳೆಯನಲ್ಲ, ಗೆಳತಿ ನಾನು ಮೊದಲೇ ಅಲ್ಲ

ಒಲವ ಹಾದಿಯಲ್ಲಿ, ಇವನು ನನಗೆ ಹೂವು ಮುಳ್ಳು
ಮನದ ಕಡಲಿನಲ್ಲಿ, ಇವನು ಅಲೆಯಾ ಭೀಕರ ಸುಳಿಯಾ
ಅರಿಯದಂಥ ಹೊಸ ಕಂಪನವೊ, ಯಾಕೋ ಕಾಣೆನು
ಅರಿತ ಮರೆತ ಜೀವ, ವಾಲದಂತೆ ಇವನ ಕಡೆಗೆ
ಸೋಲದಂತೆ ಕಾಯೆ ಮನವೆ, ಉಳಿಸು ನನ್ನನು

ಇವನು ಇನಿಯನಲ್ಲ, ತುಂಬ ಸನಿಹ ಬಂದಿಹನಲ್ಲ

ಓ ತಿಳಿದು ತಿಳಿದು ಇವನು, ತನ್ನ ತಾನೆ ಸುಡುತಿಹನಲ್ಲ
ಒಲುಮೆ ಎಂಬ ಸುಳಿಗೆ, ಈಜು ಬರದೆ ಇಳಿದಿಹನಲ್ಲ
ಸಾವಿನಲ್ಲು ನಗುವುದ ಬಲ್ಲ, ಏನು ಕಳವಳ
ಮುಳುಗುವವನ ಕೂಗು, ಚಾಚುವಂತೆ ಮಾಡಿದೆ ಕೈಯ
ಜಾರಿ ಬಿಡುವುದೀ ಹೃದಯ, ಏನೋ ತಳಮಳ

ಇವನು ಇನಿಯನಲ್ಲ, ತುಂಬ ಸನಿಹ ಬಂದಿಹನಲ್ಲ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada