»   » ಪ್ರಜ್ಞಾಹೀನ ಸ್ಥಿತಿಯಲ್ಲಿ ನಟ ಕೆ ಎಸ್ ಅಶ್ವತ್ಥ್

ಪ್ರಜ್ಞಾಹೀನ ಸ್ಥಿತಿಯಲ್ಲಿ ನಟ ಕೆ ಎಸ್ ಅಶ್ವತ್ಥ್

Subscribe to Filmibeat Kannada
No significant change in Ashwath’s health
ಗುರುವಾರವಷ್ಟೆ ಚೇತರಿಸಿಕೊಂಡಿದ್ದ ಕನ್ನಡದ ಹಿರಿಯ ನಟ ಕೆ ಎಸ್ ಅಶ್ವತ್ಥ್ ಅವರ ಆರೋಗ್ಯ ಮತ್ತೆ ಹದಗೆಟ್ಟಿದೆ. ಶುಕ್ರವಾರ ಅಶ್ವತ್ಥ್ ಅವರನ್ನು ಬಿ ಎಂ ಆಸ್ಪತ್ರೆಯ ತೀವ್ರ ನಿಗಾ ಘಟದಲ್ಲಿ ಇಡಲಾಗಿದೆ. ಅಶ್ವತ್ಥ್ ಅವರು ಬೆಳಗ್ಗೆ 11.15ರ ಹೊತ್ತಿಗೆ ಪ್ರಜ್ಞಾಹೀನ ಸ್ಥಿತಿಯನ್ನು ತಲುಪಿದರು. ವೈದ್ಯರು ಅಶ್ವತ್ಥ್ ಅವರನ್ನು ಕೂಡಲೆ ಐಸಿಯುಗೆ ವರ್ಗಾಯಿಸಿ ಆಮ್ಲಜನಕವನ್ನು ನೀಡಿದ್ದಾರೆ.

ಗೃಹಸಚಿವ ಡಾ.ವಿ ಎಸ್ ಆಚಾರ್ಯ ಆಸ್ಪತ್ರೆಗೆ ಭೇಟಿ ನೀಡಿ ಎಷ್ಟೇ ಪ್ರಯತ್ನಿಸಿದರೂ ಅಶ್ವತ್ಥ್ ಪ್ರತಿಕ್ರಿಯಿಸಲಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಕರೆದೊಯ್ಯಲು ಕುಟುಂಬ ವರ್ಗ ಪ್ರಯತ್ನಿಸಿತಾದರೂ ಈ ಪರಿಸ್ಥಿತಿಯಲ್ಲಿ ಕರೆದೊಯ್ಯುವುದು ಬೇಡ ಎಂಬ ವೈದ್ಯರ ಸಲಹೆ ಮೇರೆಗೆ ಕೈಬಿಟ್ಟರು.

ಬಸಪ್ಪ ಮೆಮೋರಿಯಲ್ ಆಸ್ಪತ್ರೆಗೆ ಬೆಂಗಳೂರಿನ ಕೆಲವು ವೈದ್ಯರನ್ನು ಕರೆಸಲಾಗಿದ್ದು, ಮೆದುಳಿನಲ್ಲಿ ಆಗಿರುವ ಸಮಸ್ಯೆಯನ್ನು ಸರಿಪಡಿಸುವಲ್ಲಿ ವೈದ್ಯರ ತಂಡ ಪ್ರಯತ್ನಿಸುತ್ತಿದೆ. ಕಳೆದ ಐದು ದಿನಗಳಲ್ಲಿ ತಮ್ಮ ತಂದೆಯವರು ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಇದೇ ಮೊದಲು ಎಂದು ಪುತ್ರ ಶಂಕರ್ ಅಶ್ವತ್ಥ್ ತಿಳಿಸಿದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada