»   » ಸನುಷಾ ಸಂತೋಷ್‌ಗೆ ಗೇಟ್ ಪಾಸ್ ಭಾಮಾಗೆ ವೆಲ್‌ಕಮ್

ಸನುಷಾ ಸಂತೋಷ್‌ಗೆ ಗೇಟ್ ಪಾಸ್ ಭಾಮಾಗೆ ವೆಲ್‌ಕಮ್

Posted By:
Subscribe to Filmibeat Kannada

ಕಲಾ ಸಾಮ್ರಾಟ್ ಎಸ್ ನಾರಾಯಣ್ ನಿರ್ದೇಶಿರುತ್ತಿರು 'ಶೈಲೂ' ಚಿತ್ರದಲ್ಲಿ ಒಂದು ಮಹತ್ತರ ಬದಲಾವಣೆಯಾಗಿದೆ. ಈ ಮುಂಚೆ ಬುಕ್ ಆಗಿದ್ದ ಮಲ್ಲು ಬೆಡಗಿ ಸನುಷಾ ಸಂತೋಷ್‌ಗೆ ಗೇಟ್‌ಪಾಸ್ ನೀಡಲಾಗಿದೆ. ಅದೇ ಜಾಗಕ್ಕೆ ಮತ್ತೊಬ್ಬ ಮಲ್ಲು ಬೆಡಗಿ ಭಾಮಾಗೆ ಅವಕಾಶ ನೀಡಿದ್ದಾರೆ ನಾರಾಯಣ್.

ಆದರೆ ಚಿತ್ರದ ನಾಯಕನಟರಾಗಿ ಗೋಲ್ಡನ್ ಸ್ಟಾರ್ ಗಣೇಶ್‌ ಅವರೇ ಮುಂದುವರಿಯಲಿದ್ದಾರೆ. ಸನುಷಾ ಅವರನ್ನು ಹಾಕಿಕೊಂಡು ಕೆಲದಿನಗಳ ಚಿತ್ರೀಕರಣವೂ ನಡೆದಿತ್ತು. ತಮ್ಮ ಬೇಡಿಕೆ ಪ್ರಕಾರ ಸನುಷಾ ಕಾಲ್‌ಶೀಟ್ ಕೊಡಲು ತಯಾರಿರಲಿಲ್ಲ. ಹಾಗಾಗಿ ಆಕೆಯನ್ನು ಕೈಬಿಡಲಾಗಿದೆ ಎನ್ನಲಾಗಿದೆ.

ಇನ್ನು ಭಾಮಾ ವಿಚಾರಕ್ಕೆ ಬರುವುದಾದರೆ, ಈಕೆ ಈ ಹಿಂದೆ ಯಶ್ ಜೊತೆ 'ಮೊದಲಾಸಲ' ಚಿತ್ರದಲ್ಲಿ ಅಭಿನಯಿಸಿದ್ದರು. ಈಗ 'ಶೈಲೂ' ಆಗಿ ಮತ್ತೊಮ್ಮೆ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಕೆ ಮಂಜು ನಿರ್ಮಿಸುತ್ತಿರುವ ಶೈಲೂ ಚಿತ್ರ ತಮಿಳಿನ ಯಶಸ್ವಿ ಮೈನಾ ಚಿತ್ರದ ರೀಮೇಕ್ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಂದಹಾಗೆ ದಿನೇಶ್ ಬಾಬು ನಿರ್ದೇಶಿಸುತ್ತಿರುವ ಒಂದು ಕ್ಷಣದಲ್ಲಿ ಚಿತ್ರದಲ್ಲೂ ಭಾಮಾ ಅಭಿನಯಿಸುತ್ತಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Malayalam actress Sanusha Santosh replaced by another Malayalam actress Bhama for Shyloo directing by S Narayan. The reason for change is, Sanusha Santosh has not ready to give the call sheet as required by director.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada