»   » 'ಯಕ್ಷ'ನಿಗಾಗಿ ಬೆಳಗಾವಿಗೆ ಬಂದ ನಾನಾ ಪಾಟೇಕರ್

'ಯಕ್ಷ'ನಿಗಾಗಿ ಬೆಳಗಾವಿಗೆ ಬಂದ ನಾನಾ ಪಾಟೇಕರ್

Posted By:
Subscribe to Filmibeat Kannada

ಬಾಲಿವುಡ್ ನಟ ನಾನಾ ಪಾಟೇಕರ್ ನಟಿಸುತ್ತಿರುವ ಮೊದಲ ಕನ್ನಡ ಚಿತ್ರ 'ಯಕ್ಷ'. ಈ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲು ನಾನಾ ಪಾಟೇಕರ್ ಬೆಳಗಾವಿಗೆ ಆಗಮಿಸಿದ್ದರು. ದುನಿಯಾ ಚಿತ್ರವನ್ನು ನಿರ್ಮಿಸಿದ್ದ ಟಿ ಪಿ ಸಿದ್ಧರಾಜು 'ಯಕ್ಷ'ನಿಗೆ ಬಂಡವಾಳ ಹೂಡುತ್ತಿದ್ದಾರೆ.

ಲೂಸ್ ಮಾದ ಎಂದೇ ಖ್ಯಾತನಾದ ಯೋಗೀಶ್ ಚಿತ್ರದ ನಾಯಕ. ನವದೆಹಲಿಯ ರೂಬಿ ಚಿತ್ರದ ನಾಯಕಿ. 'ಯಕ್ಷ' ಕನ್ನಡದಲ್ಲಿ ರೂಬಿಗೆ ಚೊಚ್ಚಲ ಚಿತ್ರ. ಐತಿಹಾಸಿಕ ಕಿತ್ತೂರು ಕೋಟೆ ಬಳಿ ನಾನಾ ಪಾಟೇಕರ್ ಅವರ ಸಾಹಸ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಯಿತು.

ಬೆಳಗಾವಿ ಮತ್ತು ಸುತ್ತಲಿನ ಐತಿಹಾಸಿಕ ಸ್ಥಳಗಳನ್ನು ಯಕ್ಷ ಚಿತ್ರ ಬಯಸುತ್ತದೆ. ಹಾಗಾಗಿ ಈ ಚಿತ್ರವನ್ನು ಇಲ್ಲಿ ಚಿತ್ರೀಕರಿಸುತ್ತಿದ್ದೇವೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ರಮೇಶ್ ಭಾಗವತ್. ಮಾಸ್ಟರ್ ಹಿರಣ್ಣಯ್ಯ, ಅತುಲ್ ಕುಲಕರ್ಣಿ ಚಿತ್ರದ ಉಳಿದ ತಾರಾಗಣದಲ್ಲಿದ್ದಾರೆ. ಚಂದ್ರಶೇಖರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada