»   »  ಬಾಸ್ ದರ್ಶನ್ ಗೆ ಹುಟ್ಟುಹಬ್ಬದ ಶುಭಾಶಯಗಳು!

ಬಾಸ್ ದರ್ಶನ್ ಗೆ ಹುಟ್ಟುಹಬ್ಬದ ಶುಭಾಶಯಗಳು!

Subscribe to Filmibeat Kannada
Happy birthday to Challenging star Darshan
ಕನ್ನಡ ಚಿತ್ರ ಪ್ರೇಮಿಗಳ ಹೃದಯ ಗೆದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್(32) ತಮ್ಮ ಹುಟ್ಟು ಹಬ್ಬವನ್ನು ಫೆಬ್ರವರಿ 16ರಂದು ಸರಳ ಸುಂದರವಾಗಿ ಆಚರಿಸಿಕೊಂಡರು. ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆಯ ಮುಂದೆ ದರ್ಶನ್ ಅಭಿಮಾನಿಗಳು ನೆರೆದಿದ್ದದ್ದು ಸಾಮಾನ್ಯ ದೃಶ್ಯವಾಗಿತ್ತು. ಈ ವಿಶೇಷ ಸಂದರ್ಭದಲ್ಲಿ ದರ್ಶನ್ ರ ಯಾವ ಹೊಸ ಚಿತ್ರವೂ ಸೆಟ್ಟೇರಲಿಲ್ಲ. ಹಾಗಾಗಿ ಅಭಿಮಾನಿಗಳು ಕೊಂಚ ನಿರಾಶರಾಗಿದ್ದರು.

ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ ದರ್ಶನ್ ರ ಇನ್ನೂ ಹೆಸರಿಡದ 'ಪ್ರೊಡಕ್ಷನ್ ನಂ.22' ಚಿತ್ರೀಕರಣ ನಡೆಯುತ್ತಿದೆ. ಹುಟ್ಟುಹಬ್ಬದ ಹಿಂದನ ದಿನವೇ ದರ್ಶನ್ ಕೆಲವು ಸಾಹಸ ದೃಶ್ಯಗಳಲ್ಲಿ ನಟಿಸಿದರು. ಚಿತ್ರೀಕರಣ ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿ ಫೆ.15ರಂದು ನಡೆಯಿತು.

ದರ್ಶನ್ ರ ಮತ್ತೊಂದು ಚಿತ್ರ 'ಬಾಸ್' ಚಿತ್ರೀಕರಣ ಮುಗಿದಿದೆ. ನಿರ್ಮಾಣ ನಂತರದ ಕಾರ್ಯಗಳಲ್ಲಿ ನಿರ್ದೇಶಕ ರಮೇಶ್ ಯಾದವ್ ತಲ್ಲೀನರಾಗಿದ್ದಾರೆ. ರಾಕ್ ಲೈನ್ ವೆಂಕಟೇಶ್ ರ ಪ್ರೊಡಕ್ಷನ್ ನಂ.22 ಸೇರಿದಂತೆ ಹಲವಾರು ಚಿತ್ರಗಳು ದರ್ಶನ್ ರ ಕೈಯಲ್ಲಿವೆ. ರಾಮು ಎಂಟರ್ ಪ್ರೈಸಸ್ ನ 'ಭೀಮ ', ಭಾನುಶ್ರೀ ದತ್ತ ಮತ್ತು ಎಲ್. ದತ್ತಾತ್ರೇಯ ಬಚ್ಚೇಗೌಡ ನಿರ್ಮಿಸುತ್ತಿರುವ 'ಪೊರ್ಕಿ', ಆರ್.ಎಸ್.ಪ್ರೊಡಕ್ಷನ್ಸ್ ನ ಪ್ರೊಡಕ್ಷನ್ ನಂ.11, ಸೀತಿ ಭೈರವೇಶ್ವರ ಪ್ರೊಡಕ್ಷನ್ಸ್ ನ ಪ್ರೊಡಕ್ಷನ್ ನಂ.5 ಚಿತ್ರಗಳು ಅವುಗಳಲ್ಲಿ ಪ್ರಮುಖವಾದವು.

ದರ್ಶನ್ ಹುಟ್ಟುಹಬ್ಬ ಸಂಭ್ರವನ್ನು ಸವಿಯಲು ಅವರ ಅಪಾರ ಅಭಿಮಾನಿ ಬಳಗ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆ ಮುಂದೆ ಜಮಾಯಿಸಿದ್ದರು. ಈ ಬಾರಿಯ ಹುಟ್ಟುಹಬ್ಬದ ವಿಶೇಷವೆಂದರೆ, ದರ್ಶನ್ ರ ಪುಟ್ಟ ಮಗು ಜತೆಯಾಗಿದ್ದು. ದಟ್ಸ್ ಕನ್ನಡ ಸಿನಿ ತಂಡದ ಕಡೆಯಿಂದ ಬರ್ತ್ ಡೇ ಬಾಯ್ ದರ್ಶನ್ ಗೆ ಹುಟ್ಟುಹಬ್ಬದ ಶುಭಾಶಯಗಳು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಹಳೆ ಜಿಂಕೆ ಮರಿನ ಸೆರೆಹಿಡಿದ ಬಾಸ್ ದರ್ಶನ್
ಗುಂಡು ಪಾರ್ಟಿ ನಿಷೇಧ ಚಿತ್ರಾನ್ನ! ಚಿತ್ರಾನ್ನ?

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada