»   » ಪ್ರೇಕ್ಷಕರ ಮುಂದೆ ಬರಲು 'ಆಸ್ಕರ್' ಸಿದ್ಧ

ಪ್ರೇಕ್ಷಕರ ಮುಂದೆ ಬರಲು 'ಆಸ್ಕರ್' ಸಿದ್ಧ

Posted By:
Subscribe to Filmibeat Kannada

ಕನ್ನಡ ಚಿತ್ರ'ಆಸ್ಕರ್' ಸಂಪೂರ್ಣ ಚಿತ್ರೀಕರಣ ಮುಗಿಸಿಕೊಂಡಿದೆ. ಅಶೋಕ್ ಕುಮಾರ್ ಮತ್ತು ಪ್ರಿಯಾಂಕ ಬುಲ್ಗಣ್ಣವರ್ ಚಿತ್ರದ ಮುಖ್ಯಪಾತ್ರಧಾರಿಗಳು. ಶಿವು ಬೆಳವಾಡಿ ನಿರ್ಮಿಸುತ್ತಿರುವ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಕೃಷ್ಣ.

ಹಾಸ್ಯ, ವಿಷಾದ, ಸಾಹಸ ಮತ್ತು ಸೆಂಟಿಮೆಂಟ್ ಗಳ ಮಿಳಿತವೇ 'ಆಸ್ಕರ್'. ಅಶೋಕ್ ಕುಮಾರ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರವಿದು. ಈ ಹಿಂದೆ ಇವರು ತಾಜ್ ಮಹಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಿಯಾಂಕ ಸಹ 'ಕಬಡ್ಡಿ' ಚಿತ್ರದಲ್ಲಿ ಅಭಿನಯಿಸಿದ್ದರು.

ಚಿತ್ರದ ತಾರಾಗಣದಲ್ಲಿ ರಾಜು ತಾಳಿಕೋಟೆ, ರಾಜೇಂದ್ರ ಕಾರಂತ್, ಸಂಗೀತ ಶೆಟ್ಟಿ ಇದ್ದಾರೆ. ಈ ಚಿತ್ರಕ್ಕೆ ಛಾಯಾಗ್ರಹಣ ನವೀನ್ ಸುವರ್ಣ, ಸಂಗೀತ ಜಿ.ಅಭಿಮನ್ ರಾಯ್, ಸಂಕಲನ ನಾಗೇಂದ್ರ ಅರಸ್, ನಿರ್ದೇಶನ ಸಹಾಯ, ಸತೀಶ್ ಕುಮಾರ್, ಅರುಣಂ ಲಕ್ಷ್ಮಣ್, ಕಲೆ ಹೊಸಮನೆ ಮೂರ್ತಿ, ನೃತ್ಯ ರಘು ಹೈಟ್ ಮಂಜು, ನಿರ್ವಹಣೆ ಹೊಸಳ್ಳಿ ಸುಧೀಂದ್ರ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada