»   » ಚಿತ್ರ ಮಂಥನಕ್ಕೆ ಆಸಕ್ತರಿಂದ ಅರ್ಜಿ ಆಹ್ವಾನ

ಚಿತ್ರ ಮಂಥನಕ್ಕೆ ಆಸಕ್ತರಿಂದ ಅರ್ಜಿ ಆಹ್ವಾನ

Posted By:
Subscribe to Filmibeat Kannada

ಚಲನಚಿತ್ರ ಸಾಹಿತ್ಯ ಕುರಿತಂತೆ ಚಲನಚಿತ್ರ ಅಕಾಡೆಮಿ 'ಚಿತ್ರಮಂಥನ' ಕಮ್ಮಟವನ್ನು ಮೇ ತಿಂಗಳಲ್ಲಿ ಹಮ್ಮಿಕೊಂಡಿದೆ. ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಬಿಸಿಬಿಸಿ ಚರ್ಚೆಗಳು ಚಿತ್ರಮಂಥನದಲ್ಲಿ ನಡೆಯಲಿವೆ. ಚಿತ್ರ ರಚನೆ, ಚಿತ್ರಗಳ ಪ್ರದರ್ಶನ, ಹೆಸರಾಂತ ನಿರ್ದೇಶಕ, ಚಿತ್ರ ಕಥಾ ಲೇಖಕರ ಉಪನ್ಯಾಸ ಹೀಗೆ ಹಲವಾರು ಕಾರ್ಯಕ್ರಮಗಳು ಶಿಬಿರದಲ್ಲಿ ನಡೆಯಲಿವೆ.

ಚಿತ್ರಕಥೆಯಲ್ಲಿ ಆಸಕ್ತಿ ಉಳ್ಳವರು ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಗಳು ಕರ್ನಾಟಟ ಚಲನಚಿತ್ರ ಅಕಾಡೆಮಿ ಕಚೇರಿ, ಬಾದಾಮಿ ಕಟ್ಟಡ, ಬಿಬಿಎಂಪಿ ಎದುರು, ಬೆಂಗಳೂರು; ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ರೇಸ್ ಕೋರ್ಸ್ ರಸ್ತೆ, ಬೆಂಗಳೂರು ಹಾಗೂ ಚಲನಚಿತ್ರ ನಿರ್ದೇಶಕರ ಸಂಘ, ರಾಜಾಜಿನಗರ, 6ನೇ ಬ್ಲಾಕ್ ನಲ್ಲಿ ದೊರೆಯುತ್ತವೆ.

ಭರ್ತಿ ಮಾಡಿದ ಅರ್ಜಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಕಚೇರಿ ವಿಳಾಸಕ್ಕೆ ಏ.24ರೊಳಗೆ ಕಳುಹಿಸಬೇಕು ಎಂದು ಅಕಾಡೆಮಿ ಅಧ್ಯಕ್ಷ ಟಿ ಎಸ್ ನಾಗಾಭರಣ ತಿಳಿಸಿದ್ದಾರೆ. ಬೇಸಿಗೆ ರಜಾ ದಿನಗಳಲ್ಲಿ ಸಿನಿಮಾ ತಂತ್ರಗಳನ್ನು ಕಲಿಯಲು 'ಸಿನಿಮಾ ಮಂಥನ' ಶಿಬಿರ ಉಪಯುಕ್ತವಾಗಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada