»   » ಮಾ.ಕಿಶನ್‌ಗೆ ಎಂಎ ನೇರ ಪ್ರವೇಶ ಕೊಡಬೇಕೆ ಬೇಡವೆ?

ಮಾ.ಕಿಶನ್‌ಗೆ ಎಂಎ ನೇರ ಪ್ರವೇಶ ಕೊಡಬೇಕೆ ಬೇಡವೆ?

Posted By: * ಎಸ್ ಮನೋಜ್ ಕುಮಾರ, ಚಳ್ಳಕೆರೆ
Subscribe to Filmibeat Kannada

ಕಿರಿಯ ವಯಸ್ಸಿನ ನಿರ್ದೇಶಕ ಮಾ.ಕಿಶನ್ ಎಸ್ ಎಸ್ ಎಲ್ ಸಿಯಲ್ಲಿ 577 ಅಂಕ ಪಡೆದು ಪಾಸಾಗಿದ್ದಾನೆ. ಆತನಿಗೆ ಸರ್ಕಾರ ಎಸ್ ಎಸ್ ಎಲ್ ಸಿಯಿಂದ ನೇರ ಮಾಸ್ಟರ್ ಡಿಗ್ರಿಗೆ (ಮಲ್ಟಿ ಮೀಡಿಯಾ ಮತ್ತು ಅನಿಮೇಷನ್) ಸೇರಿಕೊಳ್ಳಲು ಅನುಮತಿಸಿದೆ. ಈ ಕೋರಿಕೆಯನ್ನು ಸ್ವತಃ ಕಿಶನ್ ಸರ್ಕಾರಕ್ಕೆ ಸಲ್ಲಿಸಿದ್ದರಂತೆ.

ಇದೊಂದು ಸಿನಿಮೀಯ ನ್ಯಾಯದಂತೆ ಕಾಣುತ್ತಿದೆ. ಕರ್ನಾಟಕದಲ್ಲಿ ಕಿಶನ್‌ಗಿಂತ ಹೆಚ್ಚು ಅಂಕ ಗಳಿಸಿದ, ಆತನಿಗಿಂತಲೂ ಬುದ್ಧಿವಂತರಾದ ನೂರಾರು ವಿದ್ಯಾರ್ಥಿಗಳಿದ್ದಾರೆ. ಅವರುಗಳಿಗೆಲ್ಲಾ ನೇರವಾಗಿ ಎಂಎಸ್ಸಿಗೋ, ಪಿಎಚ್‌ಡಿಗೋ ಅನುಮತಿ ಕೋರಿದರೆ ಸರ್ಕಾರ ಅನುಮತಿ ನೀಡುತ್ತದೆಯೇ? ಹೀಗೆ ಸರ್ಕಾರ ಎಸ್ ಎಸ್ ಎಲ್ ಸಿಯಿಂದ ಮಾಸ್ಟರ್ ಡಿಗ್ರಿಗೆ ನೇರ ಪ್ರವೇಶ ಕೊಡಲು ಯಾವ ಕಾನೂನುಗಳಿವೆ? ಇದನ್ನು ಸರ್ಕಾರದ ಸ್ಪಷ್ಟಪಡಿಸ ಬೇಕಿದೆ.

ಸರ್ಕಾರದಲ್ಲಿ ಕಿಶನ್‌ಗೊಂದು ನ್ಯಾಯ, ಇತರರಿಗೊಂದು ನ್ಯಾಯವೆ? ಆತ ಪ್ರತಿಭಾವಂತನಿರಬಹುದು. ಆದರೆ ನಿಯಮಾನುಸಾರ ಓದುವುದೇ ಸಮಾಜದ ನಿಯಮ. ಕಿಶನ್ ಪ್ರತಿಭಾವಂತನಾದರೂ ಸರ್ಕಾರದ ಸಾರ್ವತ್ರಿಕ ನಿಯಮಕ್ಕೆ ತಲೆಬಾಗಲೇಬೇಕು. ಈ ಅನುಮತಿಯನ್ನು ಸರ್ಕಾರ ಕೂಡಲೇ ವಾಪಸು ಪಡೆಯಲಿ. ಸಿನಿಮಾಕ್ಕೂ ವಾಸ್ತವಕ್ಕೂ ತುಂಬಾ ಅಂತರವಿದೆ ಎಂಬುದನ್ನು ಸರ್ಕಾರ ಅರಿತುಕೊಳ್ಳಲಿ.

English summary
Recently Youngest Director of India Master Kishan (15) passed Karnataka SSLC exam with distinction. The government of Karnataka to write the Masters degree in Multi Media as he has passed out with 93 percent in SSLC examination has come in for discussion at the academic circle.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada