»   » ಗೆಲುವಿನ ಬಾವುಟ ಹಾರಿಸಿದ ಯೋಗೇಶ್ ಅಲೆಮಾರಿ

ಗೆಲುವಿನ ಬಾವುಟ ಹಾರಿಸಿದ ಯೋಗೇಶ್ ಅಲೆಮಾರಿ

Posted By:
Subscribe to Filmibeat Kannada

ಯೋಗೇಶ್ ಹಾಗೂ ರಾಧಿಕಾ ಪಂಡಿತ್ ಅಭಿನಯದ 'ಅಲೆಮಾರಿ' ಚಿತ್ರ ಬಿಡುಗಡೆಯಾದ 108 ಕೇಂದ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿದೆ. ಮಾಧ್ಯಮದವರ ಪ್ರೋತ್ಸಾಹದಿಂದಲೇ ಈ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವುದು ಎಂದಿದ್ದಾರೆ ಚಿತ್ರದ ನಿರ್ಮಾಪಕ ಬಿಕೆ ಶ್ರೀನಿವಾಸ್.

ಚಿತ್ರ ಸ್ವಲ್ಪ ಲ್ಯಾಗ್ ಇದ್ದ ಕಾರಣ 12 ನಿಮಿಷಗಳಷ್ಟು ಮೊಟಕು ಮಾಡಲಾಗಿದ್ದು ಈಗ ಸರಿಹೋಗಿದೆ ಎಂದಿದ್ದಾರೆ ಚಿತ್ರದ ನಿರ್ದೇಶಕ ಸಂತು. ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಅವರು ಗೆಲುವಿನ ನಗೆ ಬೀರಿದ್ದಾರೆ. ಚಿತ್ರ ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ದುಡ್ಡು ಬಾಚುತ್ತಿದ್ದು ಶ್ರೀನಿವಾಸ್ ಮುಖದಲ್ಲೂ ಮಂದಹಾಸ ಮೂಡಿಸಿದೆ.

ಚಿತ್ರದಲ್ಲಿ ನಿಮ್ಹಾನ್ಸ್ ಸೂರಿ ಪಾತ್ರ ಪೋಷಿಸಿರುವ ರಾಕೇಶ್‌ಗೆ ಚಾಕೋಲೇಟ್ ಹೀರೋ ಇಮೇಜ್‌ನಿಂದ ಹೊರಬಂದ ಖುಷಿ. ಮಂಜು ಮಾಂಡವ್ಯ ಅವರು ಯಥಾವತ್ ಘಟನೆಗಳನ್ನಿಟ್ಟುಕೊಂಡು ಸಂಭಾಷಣೆ ಹೆಣೆದಿದ್ದಾಗಿ ತಿಳಿಸಿದರು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರಿಗೂ ಅಲೆಮಾರಿ ಖುಷಿ ಕೊಟ್ಟಿದೆ. (ಒನ್‌ಇಂಡಿಯಾ ಕನ್ನಡ)

English summary
Loose Mada Yogesh and Radhika Pandit lead Kannada movie Alemari running successfully all over Karnataka. The movie showing successfully in 108 centres said the producer BK Srinivas.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X