»   »  ವರ್ಮಾರ ಫೂಂಕ್ ಭಾಗ 2ರಲ್ಲಿ ಸುದೀಪ್

ವರ್ಮಾರ ಫೂಂಕ್ ಭಾಗ 2ರಲ್ಲಿ ಸುದೀಪ್

Subscribe to Filmibeat Kannada
Sudeep to act in Phoonk 2
ನಟ ಸುದೀಪ್ ಬಾಲಿವುಡ್ ಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಈ ಹಿಂದೆ ಅವರು ರಾಮ್ ಗೋಪಾಲ್ ವರ್ಮಾರ 'ಫೂಂಕ್' ಚಿತ್ರದಲ್ಲಿ ನಟಿಸಿ ಸುದ್ದಿ ಮಾಡಿದ್ದರು. ಆದರೆ ಆ ಚಿತ್ರ ಅಷ್ಟಾಗಿ ಓಡಲಿಲ್ಲ ಎಂಬುದು ಬೇರೆ ಮಾತು. ಈಗ ಫೂಂಕ್ ಭಾಗ 2ರನ್ನು ರಾಮ್ ಗೋಪಾಲ್ ವರ್ಮಾ ಕೈಗೆತ್ತಿಕೊಂಡಿದ್ದಾರೆ. ಆ ಚಿತ್ರದಲ್ಲೂ ನಟಿಸುವ ಅವಕಾಶ ಸುದೀಪ್ ಗೆ ಸಿಕ್ಕಿದೆ.

ಬಾಲಿವುಡ್ ನಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟಿಸಿದ್ದ 'ಫೂಂಕ್' ಸೋತ ನಂತರ ರಾಮ್ ಗೋಪಾಲ್ ವರ್ಮ ಕಂಗೆಟ್ಟಿದ್ದಾರೆ. ಇದರಿಂದ ಹೊರಬರಲು ಅವರು ಮತ್ತೊಂದು ಸಾಹಸ ಮಾಡಲೇ ಬೇಕಾಗಿದೆ. ಹಾಗಾಗಿ ಮತ್ತಷ್ಟು ಕುತೂಹಲ ಹುಟ್ಟಿಸುವ ಫೂಂಕ್ ಭಾಗ 2ಕ್ಕೆ ಕೈಹಾಕಿದ್ದಾರೆ. ಇಲ್ಲೂ ತಮ್ಮ ನೆಚ್ಚ್ಚಿನ ಶಿಷ್ಯ ಸುದೀಪ್ ರನ್ನು ನಾಯಕ ನಟನನ್ನಾಗಿಸಿಕೊಂಡು ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.

ವರ್ಮಾ ನಿರ್ದೆಶಿಸುತ್ತಿರುವ ಮತ್ತೊಂದು ಹಿಂದಿ ಚಿತ್ರ 'ರಣ್'ನಲ್ಲೂ ಸುದೀಪ್ ಗೆ ಅವಕಾಶ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಹಿಂದಿ ಚಿತ್ರರಂಗದಲ್ಲಿ ಸುದೀಪ್ ಗೆ ಒಂದು ಭದ್ರ ನೆಲೆ ಕಲ್ಪಿಸಲು ವರ್ಮಾ ನಿರ್ಧರಿಸಿದಂತಿದೆ. 'ವೀರ ಮದಕರಿ' ಚಿತ್ರದಲ್ಲಿ ಮುಳಿಗಿರುವ ಸುದೀಪ್ ಆ ಚಿತ್ರ ಬಿಡುಗಡೆಯಾದ ನಂತರ ರಾಮ್ ಗೋಪಾಲ್ ವರ್ಮಾರ ಬಸ್ ಹತ್ತುವುದು ಗ್ಯಾರಂಟಿಯಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)
ವೀರ ಮದಕರಿ ಶೀರ್ಷಿಕೆ ವಿವಾದಕ್ಕೆ ಮತ್ತೆ ಜೀವ
ಚೋರ ಗುರು ಮದಕರಿಗೆ ಸಿಕ್ತು ಗೋದಾಮು

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada