For Quick Alerts
  ALLOW NOTIFICATIONS  
  For Daily Alerts

  ಉಪ್ಪಿ 'ಆರಕ್ಷಕ' ಚಿತ್ರಕ್ಕೆ ಬಾಟಲ್‌ನಲ್ಲಿ ವಿನೂತನ ಪ್ರಚಾರ

  By Rajendra
  |

  ಪಿ.ವಾಸು ನಿರ್ದೇಶನದಲ್ಲಿ ಸೂಪರ್‌ಸ್ಟಾರ್ ಉಪೇಂದ್ರ ನಾಯಕರಾಗಿ ಅಭಿನಯಿಸಿರುವ 'ಆರಕ್ಷಕ' ಚಿತ್ರ ಮಾಸಾಂತ್ಯಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬಿಡುಗಡೆ ಪೂರ್ವದಲ್ಲಿ ನಿರ್ಮಾಪಕರು ವಿನೂತನಪ್ರಚಾರಕ್ಕೆ ಮುಂದಾಗಿದ್ದಾರೆ. ಇಪ್ಪತ್ತೈದು ಅಡಿ ಉದ್ದ, ಹತ್ತು ಅಡಿ ಅಗಲವಿರುವ ಬಾಟಲ್‌ನಲ್ಲಿ ಉಪೇಂದ್ರರ ಭಾವಚಿತ್ರವಿರಿಸಿ ಬೆಂಗಳೂರಿನ ಸಾಗರ್ ಚಿತ್ರಮಂದಿರದ ಮುಂದೆ ನಿಲ್ಲಿಸುತ್ತಾರೆ. ಈ ಬಾಟಲ್ ತಯಾರಿಕೆಗೆ ಲಕ್ಷಾಂತರ ರೂಪಾಯಿ ಖರ್ಚಾಗಿರುವುದಾಗಿ ನಿರ್ಮಾಪಕ ಕೃಷ್ಣಪ್ರಜ್ವಲ್ ತಿಳಿಸಿದ್ದಾರೆ.

  ಉದಯರವಿ ಫಿಲಂಸ್ ಲಾಂಛನದಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಕೇರಳ, ಮೈಸೂರು, ಚೆನ್ನಪಟ್ಟಣ, ಬೆಂಗಳೂರು ಹಾಗೂ ಇಂಡೊನೇಷಿಯಾದಲ್ಲಿ ಚಿತ್ರೀಕರಣ ನಡೆದಿದೆ. 'ಆಪ್ತಮಿತ್ರ', 'ಆಪ್ತರಕ್ಷಕ'ದಂತಹ ಯಶಸ್ವಿ ಚಿತ್ರಗಳ ನಿರ್ದೇಶಕರಾದ ವಾಸು ಅವರ ನಿರ್ದೇಶನದ 'ಆರಕ್ಷಕ' ಚಿತ್ರದ ಬಗ್ಗೆ ಕನ್ನಡ ಚಿತ್ರ ರಸಿಕರಲ್ಲಿ ಉತ್ತಮ ನಿರೀಕ್ಷೆಯಿದೆ.

  ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಗುರುಕಿರಣ್ ಸಂಗೀತವಿರುವ ಚಿತ್ರಕ್ಕೆ ಪಿ.ಕೆ.ಎಚ್ ದಾಸ್ ಅವರ ಛಾಯಾಗ್ರಹಣವಿದೆ. ಸುರೇಶ್ ಅರಸ್ ಸಂಕಲನ, ವೇಣು ಕಲಾ ನಿರ್ದೇಶನ, ಡಿಫ಼ರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮತ್ತು ಚಂಪಕಧಾಮ ಬಾಬು ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ಸೀತಾ, ಸದಾ, ರಾಗಿಣಿ, ಶಯಾಜಿ ಶಿಂಧೆ, ಶರಣ್ ಮುಂತಾದವರಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  A different kind of publicity has been witnessed in Sandalwood for the first time. A huge bottle of 25 feet height and 10 feet width is used for Arakshaka publicity in front of Bangalore Sagar theater said the producer of the film Krishna Prajwal. Arakshaka is Psychological thriller action film starring Superstar Upendra, Ragini Dwivedi and Sadha in the lead roles and is one of the most awaited Kannada films of 2012.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X