»   »  ಎಲ್ಲಾ ಓಕೆ ಮೀಸೆ ಯಾಕೆ ಎಂದ ದುಬೈ ಬಾಬು!

ಎಲ್ಲಾ ಓಕೆ ಮೀಸೆ ಯಾಕೆ ಎಂದ ದುಬೈ ಬಾಬು!

Posted By:
Subscribe to Filmibeat Kannada

ದುಬೈ ಬಾಬು ಚಿತ್ರದಲ್ಲಿ ಎಲ್ಲಾ ಓಕೆ ಮೀಸೆ ಯಾಕೆ? ಎಂದು ಉಪೇಂದ್ರ ಮೀಸೆ ಬೋಳಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಉಪೇಂದ್ರ 16 ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಲಿದ್ದಾರೆ. ನಿರ್ಮಾಪಕ ಶೈಲೇಂದ್ರ ಬಾಬು ಅವರ ಮಗಳ ಆರತಕ್ಷತೆ(ಫೆ.5)ಕಾರ್ಯಕ್ರಮಕ್ಕೆ ಮೀಸೆ ಇಲ್ಲದ ಉಪೇಂದ್ರ ಸಹ ಆಗಮಿಸಿದ್ದರು. ಮೀಸೆ ಇಲ್ಲದ ಮುಖ ನೋಡಿದ ಛಾಯಾಗ್ರಹಕರು ಉಪೇಂದ್ರನನ್ನು ತಮ್ಮ ಕ್ಯಾಮೆರಾಗಳಲ್ಲಿ ಬಂಧಿಸಿದರು.

ಜೊತೆಗೆ ಪ್ರಿಯಾಂಕರನ್ನು ಕರೆತಂದಿದ್ದ ಉಪೇಂದ್ರ ಛಾಯಾಗ್ರಾಹಕರಿಗೆ ವಿವಿಧ ಭಂಗಿಗಳ ಫೋಟೊ ತೆಗೆದುಕೊಳ್ಳಲು ಸಹಕರಿಸಿದರು. ಅರೆನಗ್ನ ವಿದೇಶಿ ಸುಂದರಿಯರೊಂದಿಗೆ ಉಪೇಂದ್ರ ಈ ಗೆಟಪ್ ನಲ್ಲಿ ಕುಣಿದಿದ್ದಾರಂತೆ. ಸಮುದ್ರ ತೀರ, ಅರನಗ್ನ ಸುಂದರಿಯರ ಆಕರ್ಷಕ ದೃಶ್ಯಗಳು ದುಬೈ ಬಾಬು ಚಿತ್ರದಲ್ಲಿ ದಂಡಿಯಾಗಿವೆಯಂತೆ.

ಈ ಹಿಂದೆ ಉಪೇಂದ್ರ ವಿದೇಶದ ಮಾದಕ ಬೆಡಗಿಯರೊಂದಿಗೆ 'ಸೂಪರ್ ಸ್ಟಾರ್' ಮತ್ತು 'ಹಾಲಿವುಡ್' ಚಿತ್ರಗಳಲ್ಲಿ ಕುಣಿದಿದ್ದರು. ಪ್ರೀತ್ಸೆ ಚಿತ್ರದಲ್ಲೂ ಮೋಹಕ ವಿದೇಶಿ ನಟಿಯರ ದರ್ಶನವಾಗಿತ್ತು. ಹಾಗಾಗಿ ಉಪೇಂದ್ರ ಅವರಿಗೆ ದುಬೈ ಬಾಬು ಚಿತ್ರದಲ್ಲಿ ವಿದೇಶಿಯರೊಂದಿಗೆ ಕುಣಿಯಲು ಸಮಸ್ಯೆ ಯೇನು ಆಗಲಿಲ್ಲವಂತೆ. ಕಣ್ಮನ ಸೆಳೆಯುವ ಹಾಡಿನ ದೃಶ್ಯಗಳು ನಿರ್ದೇಶಕರ ಆಣತಿಯಂತೆ ಬಂದಿವೆ ಎನ್ನುತ್ತಾರೆ ದುಬೈ ಬಾಬು ನಿರ್ಮಾಪಕರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ದುಬೈ ಬಾಬು ಉಪ್ಪಿಗೆ ಜೋಡಿಯಾದ ನಿಖಿತಾ
ದುಬೈ ಬಾಬುನಲ್ಲಿ ಒಂದಾದ ಉಪೇಂದ್ರ,ಗೋವಿಂದ
ಬುದ್ಧಿವಂತ ಯಶಸ್ಸು ದುಬೈ ಬಾಬುಗೆ ಲಾಭ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada