»   » ಪ್ರೇಕ್ಷಕರ ಮೆದುಳಿಗೆ ಕೈಹಾಕಿದ ರಿಯಲ್ ಸ್ಟಾರ್ ಉಪ್ಪಿ!

ಪ್ರೇಕ್ಷಕರ ಮೆದುಳಿಗೆ ಕೈಹಾಕಿದ ರಿಯಲ್ ಸ್ಟಾರ್ ಉಪ್ಪಿ!

Posted By:
Subscribe to Filmibeat Kannada

ಸರಿ ಸುಮಾರು ಹತ್ತು ವರ್ಷಗಳ ಬಳಿಕ ರಿಯಲ್ ಸ್ಟಾರ್ ಉಪೇಂದ್ರಆಕ್ಷನ್, ಕಟ್ ಹೇಳುತ್ತಿರುವ ಚಿತ್ರ 'ಸೂಪರ್'. ಬಹುನಿರೀಕ್ಷಿತ ಈ ಚಿತ್ರ ಡಿಸೆಂಬರ್ ತಿಂಗಳಲ್ಲಿ ತೆರೆಕಾಣುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿ ಗೋಚರಿಸುತ್ತಿವೆ. ನಿರ್ದೇಶನದ ಜೊತೆಗೆ ಉಪೇಂದ್ರ ಅಭಿನಯಿಸಿದ್ದು ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಇಮ್ಮಡಿಸಿದೆ.

ಚಿತ್ರದ ಸಂಕಲನದ ಬಗ್ಗೆ ಉಪೇಂದ್ರ ವಿಶೇಷ ಕಾಳಜಿ ವಹಿಸಿದ್ದು, ಚಿತ್ರ ಅದ್ಭುತವಾಗಿ ತೆರೆಗೆ ತರುವ ಎಲ್ಲ ಪ್ರಯತ್ನಗಳನ್ನು ಉಪೇಂದ್ರ ಮಾಡುತ್ತಿದ್ದಾರೆ. ಚಿತ್ರ ಖಂಡಿತ ಪ್ರೇಕ್ಷಕರ ನಿರೀಕ್ಷೆಯಂತೆಯೇ ಇರುತ್ತದೆ ಎಂಬ ಮಾತುಗಳು ಚಿತ್ರೋದ್ಯಮ ಮೂಲಗಳಿಂದ ಕೇಳಿಬಂದಿವೆ.

'ಸೂಪರ್' ಚಿತ್ರದ ಸಂಕಲನಕ್ಕಾಗಿ ಉಪೇಂದ್ರ ಈಗಾಗಲೆ ಹಲವಾರು ಬಾರಿ ಚೆನ್ನೈಗೆ ಅಲೆದಾಡಿದ್ದಾರೆ. ಪ್ರತಿಯೊಂದು ಅಂಶದ ಬಗ್ಗೆಯೂ ಉಪೇಂದ್ರ ಸಾಕಷ್ಟು ಜಾಗ್ರತೆ ವಹಿಸಿ ಚಿತ್ರವನ್ನು ಒಂದು ಅದ್ಭುತ ದೃಶ್ಯಕಾವ್ಯವಾಗಿ ತೆರೆಗೆ ತರಲು ಶ್ರಮಿಸಿದ್ದಾರೆ. ಚಿತ್ರದ ಪ್ರಮುಖ ಆಕರ್ಷಣೆಯಾಗಿ ನಯನತಾರಾ ಈಗಾಗಲೆ ಪ್ರೇಕ್ಷಕರ ಗಮನಸೆಳೆದಿದ್ದಾರೆ.

ಸೂಪರ್ ಚಿತ್ರದ ಧ್ವನಿಸುರುಳಿ ನವೆಂಬರ್ 19ರಂದು ಮಾರುಕಟ್ಟೆಗೆ ಅಪ್ಪಳಿಸಲಿದೆ. ಧ್ವನಿಸುರುಳಿಯನ್ನು ಆಕಾಶ್ ಆಡಿಯೋ ಹೊರತರುತ್ತಿದೆ. ಆಡಿಯೋ ಬಿಡುಗಡೆಗೂ ಮುನ್ನವೇ ವಿ ಹರಿಕೃಷ್ಣ ಸಂಗೀತದ ಬಗ್ಗೆ ಕುತೂಹಲ ಮನೆ ಮಾಡಿದೆ.

ಚಿತ್ರದ ಪ್ರಚಾರ ತಂತ್ರವೂ ಜೋರಾಗಿದ್ದು, ಪತ್ರಿಕೆಗಳಲ್ಲಿ ಸೂಪರ್ ಚಿತ್ರದ ಜಾಹೀರಾತು ಆಹಾ ಎಂಬುವಂತಿದೆ! "ಬುದ್ಧಿ ಇದ್ರೆ ಆಹಾ...ಮುಂದೆ ನೋಡು...ಆಹಾ...ಬುದ್ಧು ಆದ್ರೆ ಆಹಾ...ಹಿಂದೆ ನೋಡು...ಆಹಾ...ಎಡವಟ್ಟಾದ್ರೆ ಆಹಾ...ಕೆಳಗೆ ನೋಡು...ಆಹಾ...ಯಕ್ಕುಟ್ಟೋದ್ರೆ ಆಹಾ...ಮೇಲೆ ನೋಡು...ಆಹಾ..." ಹೀಗೆ ಏನೂ ಅರ್ಥವಾಗದಂತೆ ಉಪೇಂದ್ರ ಪ್ರೇಕ್ಷಕರ ಮೆದುಳಿಗೆ ಕೈಹಾಕಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada