»   »  ಪೈರಸಿ ತಡೆಗೆ ಆನಂದ್ ಆಡಿಯೋ ಹೊಸ ತಂತ್ರಜ್ಞಾನ

ಪೈರಸಿ ತಡೆಗೆ ಆನಂದ್ ಆಡಿಯೋ ಹೊಸ ತಂತ್ರಜ್ಞಾನ

Posted By:
Subscribe to Filmibeat Kannada

ನವೀನ ತಂತ್ರಜ್ಞಾನವನ್ನು ಬಳಸಿಕೊಂಡು ಪೈರಸಿ ತಡೆಯಲು ಕರ್ನಾಟಕದ ಜನಪ್ರಿಯ ಆಡಿಯೋ ಸಂಸ್ಥೆ ಆನಂದ್ ಆಡಿಯೋ ಮುಂದಾಗಿದೆ. ಈ ತಂತ್ರಜ್ಞಾನವನ್ನು ಬಳಸಿಕೊಂಡು ಪೈರಸಿ ಪಿಡುಗನ್ನು ಕರ್ನಾಟಕದಿಂದ ಕಿತ್ತೊಗೆಯುವ ದೃಢ ಹೆಜ್ಜೆ ಇಟ್ಟಿದೆ ಆನಂದ್ ಆಡಿಯೋ.

'ಗ್ಲಾಸ್ ಮಾಸ್ಟರ್ ಲಾಕಿಂಗ್ ಸಿಸ್ಟಂ' ಎಂಬ ತಂತ್ರಜ್ಞಾನ ನಕಲಿ ಸೀಡಿ ದಂಧೆಗೆ ರಾಮಬಾಣವಾಗಲಿದೆ. ಕ್ಯಾಲಿಕಟ್ ಮೂಲದ ಸಂಗೀತ್ ಮೆನನ್ ಎಂಬುವರು ಈ ಹೊಸ ಮಾದರಿಯ ತಂತ್ರಜ್ಞಾನವನ್ನು ಪರಿಚಯಿಸಿದ್ದಾರೆ. ಇಳಯರಾಜ ಸಂಗೀತ ನಿರ್ದೇಶನದ 'ಭಾಗ್ಯದ ಬಳೆಗಾರ' ಸೀಡಿಗಳು ಈ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಲಿವೆ.

ಈ ತಂತ್ರಜ್ಞಾನದ ಕಾರಣ ಅಸಲಿ ಸೀಡಿಗಳನ್ನು ಕಾಪಿ ಮಾಡಲು ಸಾಧ್ಯವಾಗುವುದಿಲ್ಲ. ಆಡಿಯೋವನ್ನು ರೆಕಾರ್ಡ್ ಮಾಡಿ ನಕಲಿ ಸೀಡಿ ತಯಾರಿಸಿದರೂ ಮೂಲ ಗುಣಮಟ್ಟ ಉಳಿಯುವುದು ಕಷ್ಟ ಎನ್ನುತ್ತಾರೆ ಆನಂದ್ ಆಡಿಯೋದ ಮೋಹನ್ ಛಬ್ರಿಯಾ. ಇದರ ಬಳಕೆಯಿಂದ ಸೀಡಿಯೊಂದಕ್ಕೆ ಹೆಚ್ಚುವರಿಯಾಗಿ ರು.3 ಖರ್ಚಾಗುತ್ತದೆ ಎನ್ನುತ್ತಾರೆ ಮೋಹನ್ ರ ಕಿರಿಯ ಸಹೋದರ ಶ್ಯಾಮ್.

ಕಳೆದ ವರ್ಷ 5.1 ಹೈ ಕ್ಲಾಸ್ ತಂತ್ರಜ್ಞಾನದಲ್ಲಿ 'ಆ ದಿನಗಳು' ಡಿವಿಡಿಯನ್ನು ಆನಂದ್ ಆಡಿಯೋ ಬಿಡುಗಡೆ ಮಾಡಿತ್ತು. ಈ ಡಿವಿಡಿಗಳು ಗುಣಮಟ್ಟದಲ್ಲಿ ಉತ್ಕೃಷ್ಟವಾಗಿರುತ್ತವೆ. ಮುಂಗಾರು ಮಳೆ, ಮಿಲನ, ಹುಡುಗಾಟ, ಬಿಂದಾಸ್, ಸತ್ಯವಾನ್ ಸಾವಿತ್ರಿ ಮತ್ತು ಆಕ್ಸಿಡೆಂಡ್ ಚಿತ್ರಗಳು 5.1 ಹೈ ಕ್ಲಾಸ್ ತಂತ್ರಜ್ಞಾನದಲ್ಲಿ ಹೊರಬಂದಿವೆ.

ಪೈರಸಿಯನ್ನು ತಡೆಗಟ್ಟಲು ಗೂಂಡಾ ವಿರೋಧಿ ಕಾಯಿದೆಯನ್ನು ಜಾರಿಗೊಳಿಸಲು ಕನ್ನಡ ಚಿತ್ರೋದ್ಯಮ ಸರಕಾರವನ್ನು ಆಗ್ರಹಿಸುತ್ತಿದೆ. ಆದರೆ ಸರಕಾರ ಮಾತ್ರ ಜಾಣ ಮೌನವನ್ನು ಅನುಸರಿಸುತ್ತಿದ್ದು ಗೂಂಡಾ ವಿರೋಧಿ ಕಾಯಿದೆಯನ್ನು ಜಾರಿಗೊಳಿಸಲು ವಿಫಲವಾಗಿದೆ. ಆದರೆ ಆನಂದ್ ಆಡಿಯೋ ಸಂಸ್ಥೆ ಪೈರಸಿ ತಡೆಗಟ್ಟಲು ತಂತ್ರಜ್ಞಾನ ಬೇಲಿಯ ಮೊರೆಹೊಕ್ಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X