»   »  ರಾಜ್ ಮುಖ್ಯಮಂತ್ರಿಯಾಗಬಹುದಿತ್ತು:ಜಿಟಿಡಿ

ರಾಜ್ ಮುಖ್ಯಮಂತ್ರಿಯಾಗಬಹುದಿತ್ತು:ಜಿಟಿಡಿ

Posted By:
Subscribe to Filmibeat Kannada
Dr. Raj ‘Jeevanadhare’ DVD released
ವಿವಿಧ ಕಾರ್ಯಕ್ರಮಗಳಲ್ಲಿ ಡಾ.ರಾಜ್ ಕುಮಾರ್ ಭಾಗವಹಿಸಿದ್ದು, ಚರ್ಚಿಸಿದ್ದ ದೃಶ್ಯಗಳನ್ನು ಒಳಗೊಂಡ 'ಡಾ.ರಾಜ್ ಜೀವನಧಾರೆ' ಡಿವಿಡಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಡಿವಿಡಿಯ ಐದು ಆವೃತ್ತಿಗಳನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಪಾರ್ವತಮ್ಮ ರಾಜ್ ಕುಮಾರ್ ಬಿಡುಗಡೆ ಮಾಡಿದರು.

ಜನಪ್ರಿಯ ರಾಜಕಾರಣಿ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ ಟಿ ದೇವೇಗೌಡ ಮಾತನಾಡುತ್ತಾ, ರಾಜ್ ಕುಮಾರ್ ಅವರು ಒಂದು ವೇಳೆ ರಾಜಕೀಯಕ್ಕೆ ಅಡಿಯಿಟ್ಟಿದ್ದರೆ 1983ರಲ್ಲಿ ಅವರು ಮುಖ್ಯಮಂತ್ರಿಯಾಗಬಹುದಿತ್ತು. ಆದರೆ ಅವರು ರಾಜಕೀಯದಿಂದ ದೂರ ಉಳಿದರು. ಡಾ.ರಾಜ್ ಅವರ ಜೀವನ ಮೌಲ್ಯಗಳು ನನಗೆ ಸದಾ ಆದರ್ಶ. ಅವರ 'ಬಂಗಾರದ ಮನುಷ್ಯ' ಚಿತ್ರ ನನ್ನ ಜೀವನದಲ್ಲಿ ಉನ್ನತ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಕಾರಣವಾಗಿದೆ ಎಂದರು.

ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಕೆಸಿಎನ್ ಚಂದ್ರಶೇಖರ್ ಮಾತನಾಡುತ್ತಾ, ಪ್ರತಿಯೊಬ್ಬರು ಅಸಲಿ ಡಿವಿಡಿಯನ್ನೇ ಖರೀದಿಸಿ. ಕನ್ನಡ ಚಲನ ಚಿತ್ರಗಳನ್ನು ಚಿತ್ರಮಂದಿರಗಳಿಗೆ ಬಂದು ವೀಕ್ಷಿಸಿ ಎಂದರು. ಡಿವಿಡಿ ಹೊರತಂದಿರುವ ವರ್ಷಾ ಕ್ರಿಯೇಷನ್ಸ್ ನ ಕೃಷ್ಣ ಅವರಿಂದ ಡಿವಿಡಿಯೊಂದನ್ನು ಖರೀದಿಸಿದರು.

ಸಂಗೀತ ನಿರ್ದೇಶಕ ಗುರುಕಿರಣ್, ಸಾ ರಾ ಗೋವಿಂದು, ಬಿಎಸ್ ಎನ್ ಎಲ್ ಪ್ರಾಂತೀಯ ಮುಖ್ಯಸ್ಥ ಎಸ್ ಘೋಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 'ಭಾವ ಸಂಗಮ' ಸ್ಮರಣ ಸಂಚಿಕೆ ಸಹ ಬಿಡುಗಡೆಯಾಯಿತು. ವರ್ಷ ಕ್ರಿಯೇಷನ್ಸ್ ಮತ್ತು ಬಿಎಸ್ ಎನ್ ಎಲ್ ಸಂಯುಕ್ತವಾಗಿ 'ಡಾ.ರಾಜ್ ಜೀವನಧಾರೆ' ಮತ್ತು 'ಭಾವಸಂಗಮ' ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದ್ದವು.

(ದಟ್ಸ್ ಕನ್ನಡ ಚಿತ್ರವಾರ್ತೆ)

ನನ್ನ ಒಲುಮೆಯ ವ್ಯಕ್ತಿ ಡಾ.ರಾಜ್: ಅಮಿತಾಬ್
ರಾಜ್ ಪುಣ್ಯಭೂಮಿಯಲ್ಲಿ ಅಮೃತ ಮಹೋತ್ಸವ
ಕಡೆಗೂ ಡಾ.ರಾಜ್ ಅಂಚೆ ಚೀಟಿಗೆ ಠಸ್ಸೆ ಒತ್ತಿದ ಕೇಂದ್ರ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada