»   » ಹರ್ಷಿಕಾ ಪೂಣಚ್ಚ ಈಗ ಸಾಫ್ಟ್‌ವೇರ್ ಕಂಪನಿ ಉದ್ಯೋಗಿ

ಹರ್ಷಿಕಾ ಪೂಣಚ್ಚ ಈಗ ಸಾಫ್ಟ್‌ವೇರ್ ಕಂಪನಿ ಉದ್ಯೋಗಿ

Posted By:
Subscribe to Filmibeat Kannada

'ಪಿಯುಸಿ' ಚಿತ್ರದ ಮೂಲಕ ಕನ್ನಡ ಬೆಳ್ಳಿಪರದೆಗೆ ಅಡಿಯಿಟ್ಟ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಈಗ ಬಿ.ಇ (ಬ್ಯಾಚುಲರ್ ಆಫ್ ಇಂಜಿನಿಯರಿಂಗ್) ಪೂರೈಸಿದ್ದಾರೆ. ಕಳೆದ ವರ್ಷ ಅವರು ಬಿ.ಇ ಪರೀಕ್ಷೆಯನ್ನು ಡಿಸ್ಟಿಂಕ್ಷನ್‌ನಲ್ಲಿ ಪಾಸು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಓದಿನ ಜೊತೆಜೊತೆಗೆ ಅಭಿನಯದಲ್ಲೂ ಹರ್ಷಿಕಾ ಮಿಂಚಿದ್ದು ಮತ್ತೊಂದು ವಿಶೇಷ.

ಇತ್ತೀಚೆಗೆ ಹರ್ಷಿಕಾ ಪೂಣಚ್ಚ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಉದ್ಯೋಗಕ್ಕೂ ಸೇರಿದ್ದಾರೆ. ಹಾಗಿದ್ದರೆ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಾರಾ? ನೋ ನೋ. ಉದ್ಯೋಗದ ಜೊತೆಗೆ ನಟನೆಗೂ ಸಮಯ ಹೊಂದಾಣಿಕೆ ಮಾಡಿಕೊಂಡು ಎರಡರಲ್ಲೂ ಮುನ್ನುಗ್ಗುವ ಪ್ರಯತ್ನ ಅವರದು.

"ಚಲನಚಿತ್ರ ಕ್ಷೇತ್ರಕ್ಕೆ ಅನಿರೀಕ್ಷಿತವಾಗಿ ಅಡಿಯಿಟ್ಟೆ. ಪಿಯುಸಿ ಓದುವಾಗ ಟಿವಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೆ. ಆಗಲೇ ಸಿನಿಮಾಗಳಲ್ಲಿ ಅಭಿನಯಿಸುವ ಚಾನ್ಸ್ ಸಿಕ್ಕಿತು. ಓದಿಗೆ ತೊಂದರೆಯಾಗದಂತೆ ರಜಾ ದಿನಗಳಲ್ಲಿ, ಬಿಡುವಿನ ವೇಳೆಯಲ್ಲಿ ಮಾತ್ರ ಚಿತ್ರಗಳಲ್ಲಿ ಅಭಿನಯಿಸುತ್ತಾ ಬರುತ್ತಿದ್ದೇನೆ" ಎಂದಿದ್ದಾರೆ ಹರ್ಷಿಕಾ.

ಈ ವರ್ಷ ನನ್ನ ನಾಲ್ಕೈದು ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ. ಕೈತುಂಬ ಅವಕಾಶಗಳು ಇವೆ. ತಮಿಳು, ತೆಲುಗು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೇನೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದಿರುವ ಅವರು ಕನ್ನಡ ಚಿತ್ರರಂಗಳಲ್ಲೇ ಉಳಿದು ಎತ್ತರಕ್ಕೆ ಬೆಳೆಯುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಹರ್ಷಿಕಾರ ಲೇಟೆಸ್ಟ್ ಚಿತ್ರ 'ಕ್ರೇಜಿಲೋಕ' ಬಿಡುಗಡೆಗೆ ಸಿದ್ಧವಾಗಿದೆ. (ಒನ್‌ಇಂಡಿಯಾ ಕನ್ನಡ)

English summary
Kannada actress Harshika Poonacha is now software professional. The actress passed out B.E (Bachulor of Engineering) with Distinction and gets job in software company. Along with the job she continues to acting.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada