»   » ಸಿನಿಮಾ ನೋಡುವುದು ಗೊತ್ತು ಓದುವುದು ಹೇಗೆ?

ಸಿನಿಮಾ ನೋಡುವುದು ಗೊತ್ತು ಓದುವುದು ಹೇಗೆ?

Posted By:
Subscribe to Filmibeat Kannada

ಕ್ರೆಡಿಟ್ ಕಾರ್ಡ್ ಅಥವಾ ನಗದಿನ ಮೂಲಕ ಸಿನಿಮಾ ಟಿಕೆಟ್ ಖರೀದಿಸುತ್ತೇವೆ. ಸಿನೆಮಾ ನೋಡಿ ಹೊರಬರುತ್ತೇವೆ. ನೋಡಿದ ಸಿನೆಮಾ ಬಗ್ಗೆ ಎರಡು ಮಾತನಾಡಿ ಒಂದು ಕಡೆ ಸರಾಸರಿ ಪ್ರೇಕ್ಷಕನಾಗಿ ಉಳಿದು, ನಾವು ಆಡಿದ ಮಾತುಗಳೆಲ್ಲ ಆಳವಾದ ವಿಮರ್ಶೆ ಎಂದೇ ಭಾವಿಸಿ ಬಿಡುತ್ತೇವೆ. ಇದು ಅಹಂಕಾರ ಎಂದು ಕೂಡ ನಮ್ಮ ಅರಿವಿಗಿರುವುದಿಲ್ಲ.

ಇದು ನಮ್ಮಲ್ಲಿ ಅನೇಕರ, ಬಹುಸಂಖ್ಯಾತರ ಸತ್ಯ. ಹೆಚ್ಚಿನ ಮಟ್ಟಿಗೆ ಯುವ ಪ್ರೇಕ್ಷಕನನ್ನು ವ್ಯಾಖ್ಯಾನಿಸಲು ಬಳಸಬಹುದಾದ ಸಾರ್ವತ್ರಿಕಗೊಂಡಿರುವ ಸತ್ಯ. ಸಿನೆಮಾ ನೋಡಲು ಬೇಕಾಗಿರುವ ನಮ್ರತೆ, ವಿನಯ, ಸಿನೆಮಾ ನಿಶ್ಯಬ್ದವಾಗಿ, ಉಳಿದು ಹೇಳುತ್ತಾ, ಹೋಗುವುದನ್ನು ಗ್ರಹಿಸಲು ಬೇಕಾಗಿರುವ ಶಿಸ್ತು ಇಲ್ಲವಾಗಿವೆ ಎಂಬ ಕೊರತೆ ನಮ್ಮಲ್ಲಿ ಬಹಳಷ್ಟು ಜನರನ್ನ ಕಾಡುತ್ತಿದೆ. ಆ ಕೊರತೆ ನೀಗಿಸುವ ನಿಟ್ಟಿನಲ್ಲಿ ಸಂವಾದ ಡಾಟ್ ಕಾಂ ಒಂದು ಶಿಬಿರದ ಆಯೋಜನೆ ಮಾಡುತ್ತಿದೆ.

ಸಿನಿಮಾ ಕುರಿತಾದ ಪಠ್ಯ ಮತ್ತು ಚಟುವಟಿಕೆಗಳಿಂದಾಗಿ ಕನ್ನಡ ಅಂತರ್ಜಾಲ ಪ್ರಪಂಚದಲ್ಲಿ ಗಮನ ಸೆಳೆಯುವಂತೆ ಕಾರ್ಯ ನಿರ್ವಹಿಸುತ್ತಿರುವ ಸಂವಾದ ಡಾಟ್ ಕಾಂ ಮೂರು ದಿನಗಳ ರಸಗ್ರಹಣ ಶಿಬಿರನ್ನು ಆಯೋಜಿಸಿದೆ. 'ಟೂರಿಂಗ್ ಟಾಕೀಸ್ : ಸಿನಿಮಾ ಓದುವುದು ಹೇಗೆ?' ಎಂಬ ಶೀರ್ಷಿಕೆಯ ಚಲನಚಿತ್ರ ರಸಗ್ರಹಣ ಶಿಬಿರ ಆಗಸ್ಟ್ 27, 28 ಮತ್ತು 29ರಂದು ತುಮಕೂರು ಬಳಿಯ ಓದೇಕರ್ ಫಾರಂನಲ್ಲಿ ನಡೆಯಲಿದೆ.

ಶಿಬಿರದಲ್ಲಿ ಯಾರ‌್ಯಾರು ಭಾಗವಹಿಸಲಿದ್ದಾರೆ: ಪಿ. ಶೇಷಾದ್ರಿ , ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರು; ಗುರು ಪ್ರಸಾದ್, ಮಠ ಖ್ಯಾತಿಯ ನಿರ್ದೇಶಕರು; ಶಶಾಂಕ್, ಮೊಗ್ಗಿನ ಮನಸು ಖ್ಯಾತಿಯ ನಿರ್ದೇಶಕರು; ಪುಟ್ಟಸ್ವಾಮಿ ಕೆ ಎಸ್, 'ಸಿನಿಮಾ ಯಾನ' ಕೃತಿ ಕರ್ತೃ, ವಿಮರ್ಶಕರು; ಡೇವಿಡ್ ಬಾಂಡ್, ಫ್ರೆಂಚ್ ಸಿನೆಮಾ ವಿಮರ್ಶಕರು; ಡಾ.ಸಿ ಸೋಮಶೇಖರ್, ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ. ಶೇಖರ್ ಪೂರ್ಣ, ಕನ್ನಡ ಸಾಹಿತ್ಯ ಡಾಟ್ ಕಾಂನ ಸಂಪಾದಕರು. ಹೆಚ್ಚಿನ ಮಾಹಿತಿಗೆ ಅರೇಹಳ್ಳಿ ರವಿ : 99004 39930, ಕಿರಣ್ ಎಂ: 97317 55966 ಸಂಪರ್ಕಿಸಬಹುದು.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X