»   »  ಸದ್ದಿಲ್ಲದ ಸಮಾಜ ಸೇವಕಿ ನಟಿ ಲೀಲಾವತಿ

ಸದ್ದಿಲ್ಲದ ಸಮಾಜ ಸೇವಕಿ ನಟಿ ಲೀಲಾವತಿ

Subscribe to Filmibeat Kannada
Kannada actress Leelavathi takes up social work
ನಟಿ ಡಾ.ಲೀಲಾವತಿ ಮತ್ತು ವಿನೋದ್ ರಾಜ್ ಸದ್ದಿಲ್ಲದಂತೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ನೆಲಮಂಗಲ ಸುತ್ತಮುತ್ತ ವಾಸಿಸುವ ಜನರ ಆರೋಗ್ಯ ರಕ್ಷಣೆಗಾಗಿ ಸೋಲದೇವನಹಳ್ಳಿಯಲ್ಲಿ ಆಸ್ಪತ್ರೆಯೊಂದನ್ನು ಕಟ್ಟಿಸಿದ್ದಾರೆ. ಇದಕ್ಕಾಗಿ ಮ್ಯುಚುವಲ್ ಫಂಡ್ ನಿಂದ ಬಂದ ಒಂದಷ್ಟು ಲಾಭವನ್ನು ಈ ಆಸ್ಪತ್ರೆಗಾಗಿ ವಿನಿಯೋಗಿಸಿದ್ದಾರೆ.

ಸೋಲದೇವನಹಳ್ಳಿಯ ಜನ ಕಾಯಿಲೆ ಕಸಾಲೆ ಬಿದ್ದರೆ 19 ಕಿ.ಮೀ ದೂರದ ನೆಲಮಂಗಲಕ್ಕೆ ಹೋಗಬೇಕು. ಅಲ್ಲಿನ ಜನರ ಕಷ್ಟ ನೋಡಿ ಲೀಲಾವತಿ ಮನಕರಗಿತು. ಒಂದೂವರೆ ವರ್ಷದ ಹಿಂದೆ ಒಂದಷ್ಟು ಹಣ ಹಾಕಿ 100x100 ವಿಸ್ತೀರ್ಣದ ಜಾಗದಲ್ಲಿ ಆಸ್ಪತ್ರೆ ಕಟ್ಟಿಸಿದರು. ಈಗ ಆ ಆಸ್ಪತ್ರೆ ಸಂಪೂರ್ಣವಾಗಿ ಸಮಾಜಸೇವೆಗೆ ಮುಡಿಪಾಗಿದೆ. ಇನ್ನೊಂದು ತಿಂಗಳಲ್ಲಿ ಈ ಆಸ್ಪತ್ರೆಯನ್ನು ತಹಸೀಲ್ದಾರ್ ವಶಕ್ಕೆ ಒಪ್ಪಿಸುತ್ತಿದ್ದಾರೆ.

ಆರು ಬೆಡ್ಡಿನ ಈ ಆಸ್ಪತ್ರೆಯನ್ನು ಲೀಲಾವತಿ ಅವರು ಬಹಳ ಮುತುವರ್ಜಿಯಿಂದ ಕಟ್ಟಿಸಿದ್ದರು.ಸಾರ್ವಜನಿಕರಿಂದ ನಯಾಪೈಸೆಯನ್ನೂ ತೆಗೆದುಕೊಂಡಿಲ್ಲ.ಚೆನ್ನೈನ ಮನೆ ಮಾರಾಟದಿಂದ ಬಂದ ಹಣ, ಮ್ಯುಚುವಲ್ ಫಂಡ್ ನಿಂದ ಬಂದಿದ್ದ ಲಾಭವನ್ನು ಇದಕ್ಕಾಗಿ ವಿನಿಯೋಗಿಸಿದ್ದಾರೆ. ಒಂದು ವರ್ಷ ಕಾಲ ಕಷ್ಟಪಟ್ಟು ಈ ಆಸ್ಪತ್ರೆಯನ್ನು ನಿರ್ಮಿಸಿದ್ದರು. ಈ ಆಸ್ಪತ್ರೆಯನ್ನು ತಹಸೀಲ್ದಾರ್ ವಶಕ್ಕೆ ಒಪ್ಪಿಸಿದ ನೆಮ್ಮದಿ ಲೀಲಾವತಿ ಅವರಿಗಿದೆ.

ಅಂದಹಾಗೆ ಇದು ಬರೀ ಜನಗಳ ಆಸ್ಪತ್ರೆ ಅಲ್ಲ ಇಲ್ಲಿ ದನಗಳಿಗೂ ಚಿಕಿತ್ಸೆ ಮಾಡಲಾಗುತ್ತದೆ. ರೋಟರಿ ಸಂಸ್ಥೆಯ ಸಹಯೋಗದೊಂದಿಗೆ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ. ಸದ್ದಿಲ್ಲದಂತೆ ಸಮಾಜಸೇವೆ ಮಾಡುತ್ತಿರುವ, ಎಂಟು ಸಲ ರಾಜ್ಯ ಪ್ರಶಸ್ತಿ ಪಡೆದ ಕನ್ನಡದ ಹಿರಿಯ ನಟಿಗೆ ಇನ್ನೂ ಬಿಡಿಎ ನಿವೇಶನ ಸಿಕ್ಕಿಲ್ಲ ಎಂದರೆ ಆಶ್ಚರ್ಯವಾಗುತ್ತದೆ. ಸರ್ಕಾರ ಇನ್ನೂ ಮೀನಾಮೇಷ ಎಣಿಸುತ್ತಿರುವುದು ಸೋಜಿಗವಲ್ಲವೆ?

(ದಟ್ಸ್ ಕನ್ನಡ ಚಿತ್ರವಾರ್ತೆ)

ಪೂರಕ ಓದಿಗೆ
ಲೀಲಾವತಿಗೆ ತುಮಕೂರು ವಿವಿಯ ಡಾಕ್ಟರೇಟ್
ಲೀಲಾವತಿ ಮತ್ತು ವಿನೋದ್ ರಾಜ್ ಕೊಲೆಗೆ ಯತ್ನ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada