Just In
Don't Miss!
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Sports
ಐಎಸ್ಎಲ್: ಪ್ಲೇ ಆಫ್ ನಿರೀಕ್ಷೆಯಲ್ಲಿ ಜೆಮ್ಷೆಡ್ಪುರ, ನಾರ್ಥ್ ಈಸ್ಟ್
- News
ಭಾರತದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆದವರೆಷ್ಟು ಮಂದಿ?
- Lifestyle
ಆರೋಗ್ಯಕರ ಋತುಚಕ್ರಕ್ಕೆ ಇಲ್ಲಿವೆ ಕೆಲವೊಂದು ಯೋಗಾಸನಗಳು
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕನ್ನಡದ ಪ್ರಪ್ರಥಮ 2ಡಿ ಚಿತ್ರ ಚಿಂಟೂ ಸ್ಕೂಲ್!
ಹಾಲಿವುಡ್‌ನಲ್ಲಿ 2ಡಿ, ತ್ರಿಡಿ ಚಿತ್ರಗಳೆಂದರೆ 'ಅವತಾರ್', 'ಹ್ಯಾರಿಪಾಟರ್' ಚಿತ್ರಗಳು ನೆನಪಾಗುತ್ತವೆ. ಆದರೆ ಕನ್ನಡದಲ್ಲಿ ಇದುವರೆಗೂ ಆ ರೀತಿಯ ಚಿತ್ರಗಳನ್ನು ನಿರ್ಮಿಸುವ ಸಾಹಸಕ್ಕೆ ಯಾರೂ ಕೈಹಾಕಿರಲಿಲ್ಲ. ಶೇಷಗಿರಿ ಯಾಲಮೇಲಿ ಆ ಸಾಹಸವನ್ನು ಮಾಡಿ ತೋರಿಸಿದ್ದಾರೆ 'ಚಿಂಟೂ ಸ್ಕೂಲ್' ಚಿತ್ರದ ಮೂಲಕ.
'ಚಿಂಟೂ ಸ್ಕೂಲ್' ಚಿತ್ರವನ್ನು ರು.3.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಶ್ರೀಮಹಾಲಕ್ಷ್ಮಿ ಕಂಬೈನ್ಸ್ ಮತ್ತು ಕಲರ್ಸ್ ಎನ್ ಮೋಷನ್ ಸ್ಟುಡಿಯೋ ಪ್ರೈ.ಲಿ ಜಂಟಿ ನಿರ್ಮಾಣದಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಇತ್ತೀಚೆಗೆ ಈ ಚಿತ್ರದ ಕೆಲವು ಕ್ಲಿಪ್ಪಿಂಗ್ ಹಾಗೂ ಮೂರು ಹಾಡುಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ತೋರಿಸಲಾಯಿತು.
ಸುಮಾರು 90 ನಿಮಿಷಗಳ ಕಾಲಾವಧಿಯ 'ಚಿಂಟೂ ಸ್ಕೂಲ್' ಚಿತ್ರಕ್ಕಾಗಿ 30 ತಂತ್ರಜ್ಞರು ಶ್ರಮಿಸಿದ್ದಾರೆ. ರಚನೆ, ಪರಿಕಲ್ಪನೆ, ಚಿತ್ರಕತೆ ಹೀಗೆ ಸಮಸ್ತ ಜವಾಬ್ದಾರಿ ಹೊತ್ತವರು ಶೇಷಾದ್ರಿ. ಚಿತ್ರದ ನಿರ್ಮಾಣೇತರ ಕೆಲಸಗಳು ಭರದಿಂದ ಸಾಗುತ್ತಿದ್ದು ಜನವರಿ ಹೊತ್ತಿಗೆ 'ಚಿಂಟೂ ಸ್ಕೂಲ್' ಸಿದ್ಧವಾಗಲಿದೆ. 2011ರ ಬೇಸಿಗೆ ರಜೆಗಳಲ್ಲಿ ಚಿತ್ರ ತೆರೆಕಾಣುವ ಸಾಧ್ಯತೆಗಳಿವೆ.
ಮನರಂಜನೆ ಹಾಗೂ ಸಂದೇಶಾತ್ಮಕ ಚಿತ್ರ ಇದಾಗಿದ್ದು ಗ್ರಾಮೀಣ ಭಾರತವನ್ನು ದೃಷ್ಟಿಯಲ್ಲಿಟ್ಟುಕೊಂಡು ಚಿತ್ರವನ್ನು ರೂಪಿಸಲಾಗಿದೆ. ಮುಂದೊಂದು ದಿನ 'ಮಾಲ್ಗುಡಿ ಡೇಸ್' ಕತೆಗಳನ್ನೂ ಆನಿಮೇಷನ್‌ನಲ್ಲಿ ತರುವ ಆಲೋಚನೆ ಶೇಷಾದ್ರಿ ಅವರಿಗಿದೆ. 'ಎ ಟೈಗರ್ ಫಾರ್ ಮಾಲ್ಗುಡಿ' ಮತ್ತು 'ಅಜ್ಜಿ ಕತೆ' ಎಂಬ ಎರಡು ಚಿತ್ರಗಳು ಸದ್ಯಕ್ಕೆ ಶೇಷಾದ್ರಿ ಅವರ ತಲೆಯಲ್ಲಿವೆ.
ರಮೇಶ್ ಅರವಿಂದ್, ಚಿದಾನಂದ, ರಂಜಿತಾ, ಬಿ ಎಂ ವೆಂಕಟೇಶ್, ಅನಿರುದ್ಧ್, ನಿಶಾ ಮುಂತಾದವರು 'ಚಿಂಟೂ ಸ್ಕೂಲ್' ಚಿತ್ರಕ್ಕೆ ತಮ್ಮ ಕಂಠವನ್ನು ದಾನ ಮಾಡಿದ್ದಾರೆ. ಜೆ ಎಂ ಪ್ರಹ್ಲಾದ್ ಮತ್ತು ಎಂ ಎನ್ ವ್ಯಾಸರಾವ್ ಅವರ ಸಾಹಿತ್ಯ, ವಿ ಮನೋಹರ್ ಅವರ ಸಂಗೀತ ಚಿತ್ರಕ್ಕಿದೆ. ಕನ್ನಡದ ಪ್ರಪ್ರಥಮ 2ಡಿ ಚಿತ್ರ ಎಂಬ ಹೆಗ್ಗಳಿಕೆಗೆ 'ಚಿಂಟೂ ಸ್ಕೂಲ್' ಪಾತ್ರವಾಗಿದೆ.