For Quick Alerts
  ALLOW NOTIFICATIONS  
  For Daily Alerts

  ಸಾರಥಿ ಶತದಿನೋತ್ಸವ ಸಮಾರಂಭದಲ್ಲಿ ಸುದೀಪ್

  By * ಶ್ರೀರಾಮ್ ಭಟ್
  |

  ಸ್ಯಾಂಡಲ್ ವುಡ್ ನಲ್ಲಿ ಈ ವರ್ಷದ ಮೊದಲ ಶತದಿನೋತ್ಸವ ಸಮಾರಂಭ 'ಸಾರಥಿ' ಚಿತ್ರದ ಮೂಲಕ ನಡೆಯಿತು. ನಿನ್ನೆ (ಜನವರಿ 16, 2012) ಬೆಂಗಳೂರಿನ ವಿಜಯನಗರದ 'ಬಂಟರ ಸಂಘ'ದಲ್ಲಿ ಸಾರಥಿ ಚಿತ್ರದ ನಿರ್ಮಾಪಕ ಕೆ ವಿ ಸತ್ಯಪ್ರಕಾಶ್, ಗೆಲುವಿಗೆ ಕಾರಣಕರ್ತರಾದ ಚಿತ್ರತಂಡದ ಎಲ್ಲ ಸದಸ್ಯರನ್ನು ವೇದಿಕೆಗೆ ಕರೆದು ಸನ್ಮಾನಿಸುವ ಮೂಲಕ ಸಂಭ್ರಮಿಸಿದರು.

  ದರ್ಶನ್ ಜೊತೆ ಕಿಚ್ಚ ಸುದೀಪ್ ಕೂಡ ವೇದಿಕೆಯಲ್ಲಿದ್ದದ್ದು ಹೆಚ್ಚಿನ ರೋಮಾಂಚನಕ್ಕೆ ಕಾರಣವಾಯಿತು. ನಿರ್ದೇಶಕ, ದರ್ಶನ್ ತಮ್ಮ ದಿನಕರ್, ದರ್ಶನ್ ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್ ಹಾಗೂ ತಾಯಿ ಮೀನಾ ತೂಗುದೀಪ ಕೂಡ ಸಮಾರಂಭದಲ್ಲಿ ಹಾಜರಾಗಿದ್ದು ವಿಶೇಷವೆನಿಸಿತು. ಜೊತೆಗೆ ನಟ ಶರತ್ ಕುಮಾರ್ ಹಾಜರಿದ್ದರು. ಸುದೀಪ್, ಬಹಳಷ್ಟು ಮಂದಿಗೆ ನೆನಪಿನ ಕಾಣಿಕೆ ನೀಡಿ ಚಿತ್ರತಂಡಕ್ಕೆ ವಿಶೇಷ ವ್ಯಕ್ತಿ ಎನಿಸಿದರು.

  ಚಿತ್ರದ ನಾಯಕಿ ದೀಪಾ ಸನ್ನಿಧಿ ಕೂಡ ಆಗಮಿಸಿ ವೇದಿಕೆಗೆ ಗ್ಲಾಮರ್ ಕಳೆ ನೀಡಿದರು. ನಟಿಸಿದ ಮೊದಲ ಚಿತ್ರವೇ ಶತದಿನೋತ್ಸವ ಆಚರಿಸಿದ್ದು ಸಹಜವಾಗಿಯೇ ದೀಪಾಗೆ ಖುಷಿತಂದಿತ್ತು. ಖುಷಿಖುಷಿಯಾಗಿ ವೇದಿಕೆಯಲ್ಲಿ ಎಲ್ಲರ ಗಮನ ಸೆಳೆದ ದೀಪಾ, ಹೆಚ್ಚೇನೂ ಮಾತನಾಡಲಿಲ್ಲ. ಒಟ್ಟಿನಲ್ಲಿ ಎರಡು ಸಾರಿ ಮುಂದೂಡಲ್ಪಟ್ಟಿದ್ದ ಸಾರಥಿ ಶತದಿನೋತ್ಸವ ಸಮಾರಂಭ ಕೊನೆಗೂ ನಡೆದು ಚಿತ್ರತಂಡ ಧನ್ಯತಾಭಾವ ಅನುಭವಿಸಿತು. (ಒನ್ ಇಂಡಿಯಾ ಕನ್ನಡ)

  English summary
  Producer K V Satyaprakash arranged Sarathi movie 100 days function at Bantara Sangh, Vijayanagar yesterday, Jan. 16, 2012.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X