»   » ಕಸಾಪ ಅಧ್ಯಕ್ಷಗಿರಿಗೆ ಹಿರಿಯ ನಟ ಅಶೋಕ್ ಕಸರತ್ತು

ಕಸಾಪ ಅಧ್ಯಕ್ಷಗಿರಿಗೆ ಹಿರಿಯ ನಟ ಅಶೋಕ್ ಕಸರತ್ತು

Posted By:
Subscribe to Filmibeat Kannada

ಶೀಘ್ರದಲ್ಲೇ ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಹಿರಿಯ ನಟ ಅಶೋಕ್ ಕಣಕ್ಕಿಳಿದಿದ್ದಾರೆ. ಈ ಸಂಬಂಧ ಅವರು ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದು ತಮ್ಮ ಪರ ಪ್ರಚಾರ ಕೈಗೊಂಡಿದ್ದಾರೆ.

ಸಿನೆಮಾ ಮತ್ತು ಸಾಹಿತ್ಯ ಒಂದೇ ವೇದಿಕೆಗೆ ಬಂದಾಗ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಅಶೋಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಸಾಪ ಸ್ಥಾಪನೆಯಾಗಿ 2015ಕ್ಕೆ ನೂರು ವರ್ಷ ತುಂಬುತ್ತದೆ. ಆದರೆ ಇದುವರೆಗೂ ಕಸಾಪ ಕೈಗೊಂಡಿರುವ ಕಾರ್ಯಕ್ರಮಗಳು ಪೂರ್ಣವಾಗಿಲ್ಲ ಎಂದು ಖೇದ ವ್ಯಕ್ತಪಡಿಸಿದ್ದಾರೆ.

ನೂರು ವರ್ಷಗಳ ಇತಿಹಾಸದಲ್ಲಿ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸಿನೆಮಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದು ಇದೇ ಮೊದಲು ಎಂದಿರುವ ಅಶೋಕ್, ಮಾತೃಭಾಷೆಯ ಅಭಿವೃದ್ಧಿಗೆ ಕೃಷಿ ಮಾಡುವ ಭರವಸೆಯ ಮಾತುಗಳನ್ನು ಆಡಿದ್ದಾರೆ. ಕಸಾಪ ಮಾಜಿ ಅಧ್ಯಕ್ಷ ಪ್ರೊ. ಚಂದ್ರಶೇಖರ್ ಪಾಟೀಲರು ಕೂಡಾ ಈ ಬಾರಿ ಸ್ಪರ್ಧೆಗೆ ಇಳಿದಿದ್ದಾರೆ. (ಒನ್‌ಇಂಡಿಯಾ ಕನ್ನಡ)

English summary
Kannada Actor Ashok all set to contest president position of Kannada Sahitya Parishat Election, which should be held soon. The actor is now busy in election campaign. He is touring all over Karnataka.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X