twitter
    For Quick Alerts
    ALLOW NOTIFICATIONS  
    For Daily Alerts

    ಐ ಯಾಮ್ ಸಾರಿ ಈ ವಾರ ತೆರೆಗೆ ಮತ್ತೆ ಮೂರು

    By Rajendra
    |

    ಒಟ್ಟೊಟ್ಟಿಗೆ ಮೂರು, ನಾಲ್ಕು ಚಿತ್ರಗಳು ಚಿತ್ರಮಂದಿರಕ್ಕೆ ಲಗ್ಗೆ ಹಾಕುವುದು ಕನ್ನಡ ಚಿತ್ರೋದ್ಯಮದ ಮಟ್ಟಿಗೆ ಹೊಸದೂ ಅಲ್ಲ ಹಳೆಯದೂ ಅಲ್ಲ, ಇದ್ದದ್ದೆ. ಈ ವಾರವೂ (ಜೂ.17) ಒಟ್ಟಿಗೆ ಮೂರು ಚಿತ್ರಗಳು ತೆರೆಗೆ ಅಪ್ಪಳಿಸಿವೆ. ಆಸ್ಕರ್, ಮತ್ತೆ ಬನ್ನಿ ಪ್ರೀತ್ಸೋಣ ಹಾಗೂ ರಾಮ್ ಸೇತು ನಡುವೆ ಆಡಿಸಿ ನೋಡು ಬೀಳಿಸಿ ನೋಡು.

    ಐ ಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ: ಈ ಚಿತ್ರದ ಆರಂಭದಿಂದಲೂ ಕೂತೂಹಲ ಕೆರಳಿಸಿದೆ. ಚಿತ್ರದ ಹಾಡುಗಳು ಈಗಾಗಲೆ ಸಾಕಷ್ಟು ಜನಪ್ರಿಯವಾಗಿವೆ. ಪ್ರೇಮ್ ಕುಮರ್ ಅಭಿನಯದ ಮೋಸ್ಟ್ ಕಾಂಟ್ರೊವರ್ಸಲ್ ಚಿತ್ರವಿದು. ಕರೀಷ್ಮಾ ತನ್ನಾ, ಪ್ರೇಮ್ ಹಾಟ್ ದೃಶ್ಯಗಳು ಚಿತ್ರದ ಪ್ರಮುಖ ಆಕರ್ಷಣೆ. ಉತ್ತರ ಕರ್ನಾಟಕದ 28 ಚಿತ್ರಮಂದಿರ ಸೇರಿದಂತೆ ರಾಜ್ಯದಾದ್ಯಂತೆ ಒಟ್ಟು 60 ಚಿತ್ರಮಂದಿರಗಳಲ್ಲಿ ಮತ್ತೆ ಬನ್ನಿ ಪ್ರೀತ್ಸೋಣ ಬಿಡುಗಡೆಯಾಗಿದೆ.

    ರಾಮ್ ಸೇತು: ಸ್ನೇಹ ಸಂಬಂಧದ ಹಿರಿಮೆಯನ್ನು ಸಾರುವ ಚಿತ್ರ ರಾಮ್ ಸೇತು. ಈ ಚಿತ್ರಕ್ಕೆ ರಾಂರೆಡ್ಡಿ ಅವರು ಕಥೆ ಬರೆದಿದ್ದಾರೆ. ಬಿ.ಎಂ.ಪಿ ಅಣ್ಣಯ್ಯ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮಂಗಳೂರು, ಉಡುಪಿ, ಮಲ್ಪೆ ಹಾಗೂ ಕಾಪು ಸಮುದ್ರ ತೀರ, ಇನ್ನೋವೆಟಿವ್ ಫಿಲಂ ಸಿಟಿ, ಮೈಸೂರು, ಶ್ರೀರಂಗಪಟ್ಟಣ್ಣ ಹಾಗೂ ಬಲಮುರಿ ಫಾಲ್ಸ್‌ನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.

    ಆಸ್ಕರ್: ಅಶೋಕ್ ಕುಮಾರ್ ಮತ್ತು ಪ್ರಿಯಾಂಕ ಬುಲ್ಗಣ್ಣವರ್ ಚಿತ್ರದ ಮುಖ್ಯಪಾತ್ರಧಾರಿಗಳು. ಶಿವು ಬೆಳವಾಡಿ ನಿರ್ಮಿಸುತ್ತಿರುವ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಕೃಷ್ಣ.ಹಾಸ್ಯ, ವಿಷಾದ, ಸಾಹಸ ಮತ್ತು ಸೆಂಟಿಮೆಂಟ್ ಗಳ ಮಿಳಿತವೇ 'ಆಸ್ಕರ್'. ಅಶೋಕ್ ಕುಮಾರ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರವಿದು. ಈ ಹಿಂದೆ ಇವರು ತಾಜ್ ಮಹಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಿಯಾಂಕ ಸಹ 'ಕಬಡ್ಡಿ' ಚಿತ್ರದಲ್ಲಿ ಅಭಿನಯಿಸಿದ್ದರು.(ದಟ್ಸ್‌ಕನ್ನಡ ಸಿನಿವಾರ್ತೆ)

    English summary
    Mathe Banni Preethsona, Ram Sethu and Oscar three Kannada movie are released on June 17th all over Karnataka. Lovely Star Premkumar lead film ‘I am Sorry Mathe Banni Prithsona’ is much expected movie.
    Friday, June 17, 2011, 12:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X