»   »  ಪ್ರೇಮ್ ಕಹಾನಿಗೆ ಹೆಲಿಕಾಪ್ಟರ್ ನಲ್ಲಿ ಪ್ರಚಾರ

ಪ್ರೇಮ್ ಕಹಾನಿಗೆ ಹೆಲಿಕಾಪ್ಟರ್ ನಲ್ಲಿ ಪ್ರಚಾರ

Subscribe to Filmibeat Kannada

ಬಾಕ್ಸಾಫೀಸ್ ವರದಿಯ ಪ್ರಕಾರ 'ಪ್ರೇಮ್ ಕಹಾನಿ' ಚಿತ್ರದ ಕಲೆಕ್ಷನ್ ಆಶಾದಾಯಕವಾಗಿದೆ. ದಿನದಿಂದ ದಿನಕ್ಕೆ ಪ್ರೇಮ್ ಕಹಾನಿ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಸೆಳೆಯುತ್ತಿದೆ. ಮುಖ್ಯವಾಗಿ ಫ್ಯಾಮಿಲಿ ಪ್ರೇಕ್ಷಕ್ರರನ್ನು ಆಕರ್ಷಿಸುತ್ತಿದೆ. ಚಿತ್ರಕ್ಕೆ ಮತ್ತಷ್ಟು ಪುಶ್ ಕೊಡಲು ಪ್ರೇಮ್ ಕಹಾನಿ ಚಿತ್ರತಂಡ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದೆ. ಅದೂ ಹೆಲಿಕಾಪ್ಟರ್ ನಲ್ಲಿ ಎಂಬುದು ವಿಶೇಷ.

ಚಿತ್ರದ ನಿರ್ದೇಶಕ ಆರ್. ಚಂದ್ರು, ನಿರ್ಮಾಪಕರಾದ ವಿಶ್ವನಾಥ್, ನಟಿ ಶೀಲಾ ಹಲವರು ಈ ಚಿತ್ರದ ಪ್ರಚಾರಾರ್ಥ ಪ್ರವಾಸದಲ್ಲಿದ್ದಾರೆ. ಅಜಯ್ ರಾವ್ ಗೆ ಹುಶಾರಿಲ್ಲದ ಕಾರಣ ಅವರು ಭಾಗವಹಿಸುತ್ತಿಲ್ಲ. ಮೊದಲ ಹಂತದ ಕಾರ್ಯಕ್ರಮ ಗದಗ, ಹುಬ್ಬಳ್ಳಿಯಲ್ಲಿ ಸೆ.16ರಂದೇ ನಡೆದಿದೆ. ಹುಬ್ಬಳ್ಳಿಯ ಪ್ರೇಕ್ಷಕರೊಂದಿಗೆ ಕೂತು ಚಿತ್ರತಂಡ ಪ್ರೇಮ್ ಕಹಾನಿ ನೋಡಿದೆ.

ಗುರುವಾರ (ಸೆ.17)ನಿರ್ಮಾಪಕರ ತವರೂರಾದ ಬಳ್ಳಾರಿಯಲ್ಲಿ ಪ್ರೇಮ್ ಕಹಾನಿ ತಂಡ ದೊಡ್ಡ ಸಮಾರಂಭವನ್ನೇ ಮಾಡಲಿದ್ದಾರೆ. ಇದಕ್ಕಾಗಿ ಹಲವಾರು ಸಂಘ ಸಂಸ್ಥೆಗಳು ಸೇರಿ ದೊಡ್ಡ ಸಮಾರಂಭಕ್ಕೆ ಭರದ ಸಿದ್ಧತೆ ನಡೆಸಿವೆ. ಸುಮಾರು ಒಂದು ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎನ್ನುತ್ತವೆ ಮೂಲಗಳು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada