»   » ಮಾರುಕಟ್ಟೆಗೆ ಸೋನಿ ಬ್ಲೂ ರೇ ಡಿಸ್ಕ್ ಪ್ಲೇಯರ್

ಮಾರುಕಟ್ಟೆಗೆ ಸೋನಿ ಬ್ಲೂ ರೇ ಡಿಸ್ಕ್ ಪ್ಲೇಯರ್

Posted By:
Subscribe to Filmibeat Kannada

ಇನ್ನೇನಿದ್ದರೂ ಬ್ಲೂ ರೇ ಡಿಸ್ಕ್ ಗಳ(ಬಿಡಿ) ಜಮಾನಾ! ಸಿಂಹಾಸನದ ಮೇಲೆ ಮಹಾರಾಜನಂತೆ ಮೆರೆಯುತ್ತಿದ್ದ ಡಿವಿಡಿಗಳ ಸ್ಥಾನವನ್ನು ಇದೀಗ ಬ್ಲೂ ರೇ ಡಿಸ್ಕ್ ಗಳು ಆಕ್ರಮಿಸಿಕೊಂಡಿವೆ. ಬ್ಲೂ ರೇ ಡಿಸ್ಕ್ ಗಳ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡಿರುವ ಸೋನಿ ಇಂಡಿಯಾ ಶುಕ್ರವಾರ ಭಾರತದ ಮಾರುಕಟ್ಟೆಗೆ ಬ್ಲೂರೇ ಡಿಸ್ಕ್ ಪ್ಲೇಯರನ್ನು ಬಿಡುಗಡೆ ಮಾಡಿದೆ. ಬೆಲೆ ರು.9,990.

ಸೋನಿ ಇಂಡಿಯಾದ ಮುಖ್ಯಸ್ಥ(ಆಡಿಯೋ ಮತ್ತು ವಿಡಿಯೋ) ಕೆನಿಚಿ ಕವಮೋಟೊ ಮಾತನಾಡುತ್ತಾ, ನಮ್ಮ ಗ್ರಾಹಕರು ಡಿವಿಡಿಗಳಿಗೆ ಬದಲಾಗಿ ಬ್ಲೂರೇ ಡಿಸ್ಕ್ ಗಳನ್ನು ಬಯಸುತ್ತಿದ್ದಾರೆ. ಅವರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಬೆಲೆಯಲ್ಲಿ ಬ್ಲೂ ರೇ ಡಿಸ್ಕ್ ಪ್ಲೇಯರನ್ನು ಮಾರುಕಟ್ಟೆಗೆ ತಂದಿದ್ದೇವೆ. ಇದರಿಂದ ಗ್ರಾಹಕರಿಗೆ ಹೆಚ್ಚಿನಅನುಕೂಲವಾಗಲಿದೆ ಎಂದಿದ್ದಾರೆ.

ಭಾರತದಲ್ಲಿ ಬ್ಲೂ ರೇ ಡಿಸ್ಕ್ ಗಳ ಮಾರುಕಟ್ಟೆ 2012ಕ್ಕೆ 500,000 ದಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಶೇ.60ರಷ್ಟು ಗುರಿ ಮುಟ್ಟಲು ಸೋನಿ ಇಂಡಿಯಾ ಪ್ರಣಾಳಿಕೆ ರೂಪಿಸಿದೆ. 2012ಕ್ಕೆ ಮೂರು ಲಕ್ಷದಷ್ಟು ಬ್ಲೂ ರೇ ಡಿಸ್ಕ್ ಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿರುವುದಾಗಿ ಕವಮೋಟೊ ತಿಳಿಸಿದ್ದಾರೆ.

ಸೋನಿ ಇಂಡಿಯಾ ಮಾರಾಟದ ಭಾಗವಾಗಿ ಎರಡು ಹಾಲಿವುಡ್ ಚಿತ್ರಗಳ ಬ್ಲೂ ರೇ ಡಿಸ್ಕ್ ಗಳನ್ನು ನೀಡಲಾಗುತ್ತಿದೆ. ಹಾಲಿವುಡ್ ನ Legion ಹಾಗೂ ಮೈಕೇಲ್ ಜಾಕ್ಸನ್ ಅಭಿನಯದ This Is It ಚಿತ್ರಗಳ ಬ್ಲೂ ರೇ ಡಿಸ್ಕ್ ಗಳು ಮುಫತ್ತಾಗಿ ಲಭಿಸಲಿವೆ.

ಈ ಬ್ಲೂ ರೇ ಡಿಸ್ಕ್ ಪ್ಲೇಯರ್ ಗಳನ್ನು ನಿಸ್ತಂತು (wireless) ಸೌಲಭ್ಯದ ಮೂಲಕ ಇಂಟರ್ನೆಟ್ ಗೆ ಸಂಪರ್ಕಪಡಿಯಬಹುದು. ಇಂಟರ್ನೆಟ್ ವಿಡಿಯೋ ಸೌಲಭ್ಯಗಳನ್ನು ಪಡೆಯುವುದರ ಜೊತೆಗೆ ಯೂ ಟ್ಯೂಬ್ ನಂತಹ ಜಾಲತಾಣಗಳಿಗೂ ಭೇಟಿ ನೀಡಬಹುದು. ಯುಎಸ್ ಬಿ ಸ್ಲಾಟ್ ಹೊಂದಿದ್ದು ಡಿಜಿಟಲ್ ಕ್ಯಾಮೆರಾಗಳನ್ನು ಸಂಪರ್ಕ ಕಲ್ಪಿಸಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada