»   » 'ಸುಗ್ರೀವ'ನಿಗೆ ಯು/ಎ ; ಫೆ.26ರಂದು ಬಿಡುಗಡೆ

'ಸುಗ್ರೀವ'ನಿಗೆ ಯು/ಎ ; ಫೆ.26ರಂದು ಬಿಡುಗಡೆ

Posted By:
Subscribe to Filmibeat Kannada

ಅಣಜಿ ಫಿಲಂಸ್ ಲಾಂಛನದಲ್ಲಿ ಅಣಜಿ ನಾಗರಾಜ ನಿರ್ಮಿಸಿರುವ, 18 ಗಂಟೆಗಳಲ್ಲಿ ಚಿತ್ರೀಕರಣಗೊಂಡಿರುವ ಕಮರ್ಷಿಯಲ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 'ಸುಗ್ರೀವ' ಚಿತ್ರ ಮುಂದಿನ ವಾರ (ಫೆ.26)ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಕಳೆದ ವಾರ ಸೆನ್ಸಾರ್ ಮಂಡಳಿ ಮುಂದೆ ಪ್ರದರ್ಶನಗೊಂಡು ಯು/ಎ ಪ್ರಮಾಣ ಪತ್ರ ಪಡೆದುಕೊಂಡಿತು.

ಬೆಳಿಗ್ಗೆ 6 ಗಂಟೆಗೆ ಪ್ರಾರಂಭಿಸಿ ರಾತ್ರಿ 11.55 ರವರೆಗೆ ನಡೆದ ಚಿತ್ರೀಕರಣದಲ್ಲಿ ಹಾಡು, ಸಾಹಸ ದೃಶ್ಯಗಳು ಹಾಗೂ ಸಾಂಸಾರಿಕ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಗುರುಕಿರಣ್‌ರ ಸಂಗೀತ ಸಂಯೋಜನೆ, ಪ್ರಮೋದ್ ಚಕ್ರವರ್ತಿ ಮತ್ತು ರಾಮ್‌ನಾರಾಯಣ ಚಿತ್ರಕಥೆ, ತಿರುಪತಿರೆಡ್ಡಿ ಸಂಕಲನ, ಪಳನಿರಾಜ್ ಸಾಹಸ ಇದೆ. ಪ್ರಶಾಂತ್ ಮಾಂಬಳ್ಳಿ ಪ್ರಧಾನ ನಿದೇಶನವಿದೆ.

ಶೇಖರ್ ಚಂದ್ರ, ವೀನಸ್ ಮೂರ್ತಿ, ಕೃಷ್ಣ ಮೊದಲಾದವರು ಛಾಯಾಗ್ರಹಣ ಕೆಲಸ ಮಾಡಿದ್ದಾರೆ. ಶಿವರಾಜ್‌ಕುಮಾರ್, ಯಜ್ಞ ಶೆಟ್ಟಿ, ವಿಜಯ ಸಾರಥಿ, ನೀನಾಸಂ ಅಶ್ವತ್ಥ್, ಗುರುರಾಜ ಹೊಸಕೋಟೆ, ಮಂಜುಭಾಷಿಣಿ, ಪಟ್ರೆ ಪವಿತ್ರ ಮುಂತಾದವರು ತಾರಾಗಣದಲ್ಲಿದ್ದಾರೆ.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X