»   » ರಾಷ್ಟ್ರಪ್ರಶಸ್ತಿ ವಿಜೇತ ತುಳು ಚಿತ್ರ ಗಗ್ಗರ ನೋಡಿಲ್ಲವೆ?

ರಾಷ್ಟ್ರಪ್ರಶಸ್ತಿ ವಿಜೇತ ತುಳು ಚಿತ್ರ ಗಗ್ಗರ ನೋಡಿಲ್ಲವೆ?

Posted By:
Subscribe to Filmibeat Kannada

ರಾಷ್ಟ್ರಪ್ರಶಸ್ತಿ ಪಡೆದ ಚಿತ್ರಗಳನ್ನು ನೋಡಬೇಕೆಂದು ತಹತಹಿಸುವ ಚಿತ್ರ ಪ್ರೇಮಿಗಳಿಗಾಗಿ ಇಲ್ಲಿದೆ ಒಂದು ಗಮ್ಮತ್ತಾದ ಸುದ್ದಿ. ಇದೇ ಶನಿವಾರ (ಜೂ.19) ಹಾಗೂ ಭಾನುವಾರ (ಜೂ.20) ಸಂಜೆ 6.30ಕ್ಕೆ ತುಳು ಭಾಷೆಯ 'ಗಗ್ಗರ' ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಶಿವಧ್ವಜ್ ನಿರ್ದೇಶನದ ಚಿತ್ರವಿದು.

ಭೂತ ಕಟ್ಟುವ ಮಂದಿಯ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿತ್ರ ಬೆಳಕು ಚೆಲ್ಲುತ್ತದೆ. ಭೂತಾರಾಧನೆಯ ಬಗ್ಗೆ ಮನಮುಟ್ಟುವಂತೆ ಚಿತ್ರೀಕರಿಸಿದ್ದಾರೆ ಚಿತ್ರದ ನಿರ್ದೇಶಕರ ಶಿವಧ್ವಜ್.ನಿರ್ಮಾಪಕರು ಗುರುದತ್ ಮತ್ತು ಧರ್ಮಾನಂದ. ಸ್ಥಳ ಸುಚಿತ್ರಾ ಫಿಲಂ ಸೊಸೈಟಿ, ಬನಶಂಕರಿ ಎರಡನೇ ಹಂತ. ದೂರವಾಣಿ ಸಂಖ್ಯೆ 2671 1785.

ತುಳು ಭಾಷೆ, ಸಂಸ್ಕೃತಿ, ಪರಂಪರೆ ರಾಷ್ಟ್ರ ಮಟ್ಟದಲ್ಲಿ ಮತ್ತೊಮ್ಮೆ ಮಿಂಚುವಂತೆ ಮಾಡಿದ ಚಿತ್ರವಿದು. 2008 ರ ಶ್ರೇಷ್ಠ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡ ಚಿತ್ರ. ರು.13 ಲಕ್ಷ ವೆಚ್ಚದಲ್ಲಿ ಕೇವಲ 13 ದಿನಗಳಲ್ಲಿ ಚಿತ್ರೀಕರಿಸಿರುವ ಚಿತ್ರ ಇದಾಗಿದೆ. ಇಷ್ಟೆಲ್ಲಾ ವಿಶೇಷತೆಗಳ ಚಿತ್ರವನ್ನು ನೋಡಲೇಬೇಕೆಂಬ ಹಂಬಲ ಪ್ರೇಕ್ಷಕರದು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada