»   »  ನವರಸ ನಾಯಕ ಜಗ್ಗೇಶ್ ಗೆ ಹುಟ್ಟುಹಬ್ಬದ ಸಂಭ್ರಮ

ನವರಸ ನಾಯಕ ಜಗ್ಗೇಶ್ ಗೆ ಹುಟ್ಟುಹಬ್ಬದ ಸಂಭ್ರಮ

Subscribe to Filmibeat Kannada
Wish Jaggesh a Happy B'day
ಜಡೆಮಾಯಸಂದ್ರದ ಮೋಡಿಗಾರ, ಸ್ಯಾಂಡಲ್‌ವುಡ್‌ಗೊಬ್ಬ ನಟ ಜಗ್ಗೇಶ್ ! ಮುವ್ವತ್ತು ವರ್ಷಗಳ ಹಿಂದೆ 300 ರುಪಾಯಿ ಸಂಪಾದಿಸಲಿಕ್ಕೆ ಹೆಣಗಾಡುತ್ತಿದ್ದಂತಹ ಕಲಾವಿದ. ಆ ದಿನಗಳನ್ನು ಯಾವತ್ತಿಗೂ ಮರೆಯಲಿಕ್ಕೆ ಸಾಧ್ಯವಿಲ್ಲ ಎನ್ನುವ ವಿನಯವಂತ. ನವರಸಗಳನ್ನು ಸ್ಪುರಿಸುವ ಮೂಲಕ ಕುಟುಂಬಕ್ಕೆ ಸಾಕಾಗಿ ಮಿಕ್ಕುವಷ್ಟು ಸಂಪಾದನೆ ಮಾಡಿ ಖ್ಯಾತಿಯ ಉತ್ತುಂಗಕ್ಕೇರಿದ ನಟ. ಸಂಪಾದನೆಯಲ್ಲಿ ಸಮಾಜಸೇವೆಗೂ ಪಾಲಿದೆ ಎಂದು ಜಗ್ಗೇಶ್‌ ಭಾವುಕರಾಗಿ ಹೇಳುತ್ತಾರೆ. ಇಂದು ಅವರಿಗೆ 49ನೇ ಹುಟ್ಟುಹಬ್ಬದ ಸಂಭ್ರಮ.

ಪ್ರಸ್ತುತ ರಾಜಕೀಯದಲ್ಲಿ ಸಕ್ರಿಯರಾಗಿರುವ ಜಗ್ಗೇಶ್, ಚಿತ್ರರಂಗಕ್ಕೆ ಬಂದದ್ದು ಖಳ ನಟರಾಗಿ. ತರ್ಲೆ ನನ್ಮಗ ಚಿತ್ರದ ಮೂಲಕ ನಾಯಕನ ಪಟ್ಟಕ್ಕೇರಿದವರು. ಮಠ ಚಿತ್ರ ಜಗ್ಗೇಶ್ ನಟನೆಯ ನೂರನೇ ಚಿತ್ರ. ಮೂಲ ಹೆಸರು ಈಶ್ವರ್ ಎಂದು, ಚಿತ್ರರಂಗಕ್ಕೆ ಬಂದ ನಂತರ ಜಗ್ಗೇಶ್ ಎಂದೇ ಖ್ಯಾತರಾದರು.

ಪತ್ನಿ ಪರಿಮಳ ಮತ್ತು ಪುತ್ರರಾದ ಗುರುರಾಜ್ ಮತ್ತು ಯತಿರಾಜ್ ರನ್ನು ಒಳಗೊಂಡ ಪುಟ್ಟ ಕುಟುಂಬ ಜಗ್ಗೇಶ್ ಅವರದು. ಗುರುರಾಜ್ ರನ್ನು ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಜಗ್ಗೇಶ್ ಪರಿಚಯಿಸುತ್ತಿದ್ದಾರೆ. ಜಗ್ಗೇಶ್ ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುತ್ತಿರುವ 'ಎದ್ದೇಳು ಮಂಜುನಾಥ' ಶೀಘ್ರ ತೆರೆಗೆ ಬರಲಿ ಎಂದು, ಅವರು ಹೀಗೆ ನೂರು ಹುಟ್ಟು ಹಬ್ಬ ಆಚರಿಸಿಕೊಳ್ಳಲಿ ಎಂದು ದಟ್ಸ್ ಕನ್ನಡ ಹಾರೈಸುತ್ತದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಗಿಲ್ಲಿ ಚಿತ್ರಕ್ಕೆ ನಾಯಕನಾಗಿ ಜಗ್ಗೇಶ್ ಪುತ್ರರತ್ನ
ಎದ್ದೇಳು ಮಂಜುನಾಥ ಚಿತ್ರದ ವಿಡಿಯೊ
ಜಗ್ಗೇಶ್ ಸೇರಿ ಬಿಜೆಪಿ ಸೇರಿರುವ ಎಲ್ಲ ಪಕ್ಷಾಂತರಿಗಳಿಗೆ ಧಿಕ್ಕಾರ!
ಜಗ್ಗೇಶ್ ಸಾಲ ಕೇಳಿದರೆ ನಾನು ಕೊಟ್ಟು ಬಿಡ್ತೀನಾ?
ನಾ ಕಂ‌ಡ ರಾಜಕೀಯ:ನಟ ಶಾಸಕ ಜಗ್ಗೇಶ್ ಪುಸ್ತಕ
ಬಾಕ್ಸಾಫೀಸ್ ಕಿಂಗ್ ಅಪ್ಪುಗೆ ಹುಟ್ಟುಹಬ್ಬದ ಸಂಭ್ರಮ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada