»   »  ಮತ್ತೆ ಬಾಗಿಲು ಮುಚ್ಚಿದ ಭೂಮಿಕ ಚಿತ್ರಮಂದಿರ

ಮತ್ತೆ ಬಾಗಿಲು ಮುಚ್ಚಿದ ಭೂಮಿಕ ಚಿತ್ರಮಂದಿರ

Subscribe to Filmibeat Kannada

ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿರುವ ಸ್ಟೇಟ್ಸ್ ಚಿತ್ರಮಂದಿರ ಇತ್ತೀಚೆಗಷ್ಟೇ ನವೀಕರಣಗೊಂಡಿತ್ತು. ಈ ಚಿತ್ರಮಂದಿರಕ್ಕೆ ಹೊಸದಾಗಿ ಭೂಮಿಕ ಎಂದು ಹೆಸರಿಡಲಾಗಿತ್ತು.ಇದೀಗ ಈ ಚಿತ್ರಮಂದಿರವನ್ನು ಮತ್ತ್ತೆ ಮುಚ್ಚಿಲಾಗಿದೆ. ಚಿತ್ರಮಂದಿರದಲ್ಲಿನ ಅಸಮರ್ಪಕ ಸೀಟಿನ ವ್ಯವಸ್ಥೆಯೇ ಇದಕ್ಕೆ ಕಾರಣ.

ಭೂಮಿಕ ಚಿತ್ರಮಂದಿರದಲ್ಲಿನ ಅಸಮರ್ಪಕ ಆಸನ ವ್ಯವಸ್ಥೆಯಿಂದ ಪ್ರೇಕ್ಷಕರು ಕಿರಿಕಿರಿ ಅನುಭವಿಸುವಂತಾಗಿತ್ತು. ಹಿಂದಿನ ಸಾಲಿನ ಪ್ರೇಕ್ಷಕರು ಚಿತ್ರವನ್ನು ಸರಿಯಾಗಿ ವೀಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ. ಮುಖ್ಯವಾಗಿ ಬಾಲ್ಕನಿ ಮತ್ತು ಸೆಕೆಂಡ್ ಕ್ಲಾಸಿನ ಕೊನೆಯ ಸಾಲಿನ ಪ್ರೇಕ್ಷಕರು ಪರದಾಡ ಬೇಕಾಗಿತ್ತು. ಇದೀಗ ಸೀಟಿನ ವ್ಯವಸ್ಥೆಯನ್ನು ಸರಿಪಡಿಸಲಾಗುತ್ತಿದೆ. ಹಾಗಾಗಿ ಚಿತ್ರಮಂದಿರದ ಬಾಗಿಲನ್ನು ಸದ್ಯಕ್ಕೆ ಮುಚ್ಚಲಾಗಿದೆ.

ನವೀಕರಣಗೊಂಡ ನಂತರ ದರ್ಶನ್ ಅಭಿನಯದ 'ಯೋಧ' ಚಿತ್ರದೊಂದಿಗೆ ಆರಂಭವಾಗಿತ್ತು. ತಾಕತ್ ಚಿತ್ರದ ನಂತರ ಭೂಮಿಕ ಚಿತ್ರಮಂದಿರಕ್ಕೆ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. 1942ರಲ್ಲಿ ನಿರ್ಮಾಣವಾಗಿದ್ದ ಈ ಚಿತ್ರಮಂದಿರದಲ್ಲಿ ಎರಡನೇ ಮಹಾಯುದ್ಧದ ತನಕ ಚಿತ್ರ ಪ್ರದರ್ಶನವಿರಲಿಲ್ಲ. ಅಲ್ಲಿಯವರೆಗೂ ಈ ಕಟ್ಟಡ ಬ್ರಿಟೀಷ್ ಸೈನಿಕರ ಮದ್ದು ಗುಂಡುಗಳನ್ನು ಅಡಗಿಸಿಡುವ ತಾಣವಾಗಿತ್ತು.

ಕೆಎಫ್ ಸಿಸಿ ಮಾಜಿ ಅಧ್ಯಕ್ಷ ತಲ್ಲಂ ನಂಜುಂಡಶೆಟ್ಟಿ ಅವರಿಗೆ ಹಸ್ತಾಂತರವಾದ ಬಳಿಕ ಚಿತ್ರಮಂದಿರವನ್ನು ಹಲವಾರು ಸಲ ನವೀಕರಣಗೊಳಿಸಲಾಗಿತ್ತು. ಇಂದಿಗೂ ಮರೆಯಲಾಗದ ಡಾ.ರಾಜ್ ಅಭಿನಯದ 'ಬಂಗಾರದ ಮನುಷ್ಯ' ಸತತ ಎರಡು ವರ್ಷಗಳ ಕಾಲ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿದ್ದು ಈ ಚಿತ್ರಮಂದಿರದಲ್ಲೇ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada