For Quick Alerts
  ALLOW NOTIFICATIONS  
  For Daily Alerts

  'ಮದುವೆ ಮನೆ'ಯಲ್ಲಿ ಗೋಲ್ಡನ್ ಸ್ಟಾರ್

  By Rajendra
  |

  ತಮ್ಮ ಚೊಚ್ಚಲ ನಿರ್ಮಾಣದ 'ಮಳೆಯಲಿ ಜೊತೆಯಲಿ' ಚಿತ್ರದ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಗೆಲುವಿನ ನಗೆ ಬೀರಿದ್ದಾರೆ. ಇದೀಗ ಗಣೇಶ್ ಅಭಿನಯದ ಎರಡು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಒಂದು 'ಉಲ್ಲಾಸ ಉತ್ಸಾಹ' ಮತ್ತೊಂದು 'ಏನೋ ಒಂಥರಾ'. ಎರಡೂ ರೀಮೇಕ್ ಚಿತ್ರಗಳು ಎಂಬುದು ವಿಶೇಷ. ಗಣೇಶ್ ಒಪ್ಪಿಕೊಂಡಿರುವ ಮತ್ತೊಂದು ಚಿತ್ರ 'ಮದುವೆ ಮನೆ' ಚಿತ್ರೀಕರಣ ಶೀಘ್ರದಲ್ಲೆ ನಡೆಯಲಿದೆ.

  1995ರಲ್ಲಿ ತೆರೆಕಂಡ 'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ'(ಡಿಡಿಎಲ್ ಜೆ) ಚಿತ್ರ ಮುಂಬೈನ ಮರಾಠಾ ಮಂದಿರ ಚಿತ್ರಮಂದಿರದಲ್ಲಿ 700 ವಾರಗಳ ಪ್ರದರ್ಶನ ಕಂಡಿದೆ. ಶಾರುಖ್ ಖಾನ್ ಮತ್ತು ಕಾಜೊಲ್ ಅಭಿನಯದ ಈ ಚಿತ್ರ ಇಂದಿಗೂ ಚಿತ್ರರಸಿಕರನ್ನು ಸೆಳೆಯುತ್ತಿದೆ. ಈ ಚಿತ್ರವನ್ನು ಕನ್ನಡಕ್ಕೆ ತರುತ್ತಿರುವವರು ನಿರ್ಮಾಪಕ ಎಚ್ ಎ ರಹಮಾನ್. ಚಿತ್ರಕ್ಕೆ ಈಗಾಗಲೆ ಮದುವೆ ಮನೆ ಎಂದು ಹೆಸರಿಡಲಾಗಿದೆ.

  ಮದುವೆ ಮನೆ ಚಿತ್ರದ ತಾಂತ್ರಿಕ ವರ್ಗವನ್ನು ಪ್ರಕಟಿಸಲಾಗಿದ್ದು, ಕಿರುತೆರೆಯಲ್ಲಿ ಹೆಸರು ಮಾಡಿರುವ ಸುನಿಲ್ ಕುಮಾರ್ ಸಿಂಗ್ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿದ್ದಾರೆ. ಕತೆ, ಚಿತ್ರಕತೆ, ಸಂಭಾಷಣೆಯ ಜವಾಬ್ದಾರಿಯನ್ನು ಅವರು ಹೊತ್ತಿದ್ದಾರೆ.ಛಾಯಾಗ್ರಹಣದ ಜವಾಬ್ದಾರಿಯನ್ನು ಶೇಖರ್ ಚಂದ್ರ ಅವರ ಹೆಗಲಿಗೆ ಹೊರಿಸಲಾಗಿದ್ದು ಪಿ ಆರ್ ಸೌಂದರ್ ರಾಜ ಸಂಕಲನ 'ಮದುವೆ ಮನೆ' ಚಿತ್ರಕ್ಕಿದೆ.

  ಈ ಹಿಂದೆ ರಹಮಾನ್ ಅವರು 'ಯಜಮಾನ' ಮತ್ತು 'ಹುಚ್ಚ' ಚಿತ್ರಗಳನ್ನು ನಿರ್ಮಿಸಿದ್ದರು. ಬಾಲಿವುಡ್ ನಲ್ಲಿ ಅದ್ಭುತ ಯಶಸ್ಸು ದಾಖಲಿಸಿರುವ ಡಿಡಿಎಲ್ ಜೆ ಚಿತ್ರವನ್ನು ಕನ್ನಡಕ್ಕೆ ತರಬೇಕು ಎಂಬುದು ರಹಮಾನ್ ಅವರ ಮಹದಾಸೆ. ಕನ್ನಡದಲ್ಲೂ ಈ ಚಿತ್ರ ಖಂಡಿತ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿ ರಹಮಾನ್ ಇದ್ದಾರೆ.

  ಹಿಂದಿ ಚಿತ್ರದಲ್ಲಿ ಮದುವೆ ವಾತಾವರಣವೇ ಬೇರೆ ರೀತಿ ಇದೆ. ಕರ್ನಾಟಕದ ಸಾಂಪ್ರಾದಾಯಿಕ ಮದುವೆ ರೀತಿಯಲ್ಲಿ ಚಿತ್ರ ತೆರೆಗೆ ತರುತ್ತೇವೆ ಎನ್ನುತ್ತಾರೆ ರಹಮಾನ್.ಕಾಜೋಲ್ ತಂಗಿ ತನಿಷಾ ಅವರನ್ನು ನಾಯಕಿಯಾಗಿ ಕರೆತರುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ಇನ್ನೂ ಯಾವುದೂ ಅಂತಿಮವಾಗಿಲ್ಲ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X