»   » ನಟ ಅಮಿತಾಭ್‌ ಬಚ್ಚನ್‌ ಆಸ್ತಿ ಕೇಳಿ ಬೆಚ್ಚಿ ಬೀಳದಿರಿ

ನಟ ಅಮಿತಾಭ್‌ ಬಚ್ಚನ್‌ ಆಸ್ತಿ ಕೇಳಿ ಬೆಚ್ಚಿ ಬೀಳದಿರಿ

Posted By:
Subscribe to Filmibeat Kannada

ಲಕ್ನೋ, ಮಾ.18: ಸದ್ಯಕ್ಕೆ ರಾಷ್ಟ್ರ ರಾಜಕಾರಣದಲ್ಲಿ ರಾಜ್ಯಸಭೆಗೆ ಚುನಾವಣೆ, ನಾಮಕರಣಗಳ ಕಲರವ. ಅದರಂತೆ ಬಾಲಿವುಡ್ ನ ಹಿರಿಯ ನಟಿ ಜಯಾ ಬಚ್ಚನ್‌ ಸಮಾಜವಾದಿ ಪಾರ್ಟಿಯಿಂದ ಕಣಕ್ಕಿಳಿದಿದ್ದಾರೆ. ಹಾಗಾಗಿ, ರಾಜ್ಯಸಭೆಗೆ ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಚರ ಮತ್ತು ಸ್ಥಿರ ಆಸ್ತಿ ಬಗ್ಗೆ ಜಯಾ ಅಫಿಡವಿಟ್ ಸಲ್ಲಿಸಿದ್ದಾರೆ.

ಗಮನಾರ್ಹವೆಂದರೆ ಜಯಾ ತಮ್ಮ ಚರ ಮತ್ತು ಸ್ಥಿರಾಸ್ತಿಯಾದ ಮೇರು ನಟ ಅಮಿತಾಭ್‌ ಬಚ್ಚನ್‌ 400 ಕೋಟಿ ರುಪಾಯಿಗೂ ಹೆಚ್ಚು ಆಸ್ತಿಯನ್ನು ಗುಡ್ಡೆ ಹಾಕಿಕೊಂಡಿದ್ದಾರೆ ಎಂದು ಘೋಷಿಸಿದ್ದಾರೆ. ಇನ್ನು, ಸ್ವತಃ ತಾವು 91.65 ಕೋಟಿ ರೂ.ಗಳ ಚರ ಮತ್ತು ಸ್ಥಿರ ಆಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. ಅಲ್ಲಿಗೆ ಈ ದಂಪತಿ ಅಧಿಕೃತವಾಗಿ ಸುಮಾರು ಐದು ನೂರು ಕೋಟಿ ರು. ಒಡೆಯರು.

ಜಯಾ ಅವರು 30 ಲಕ್ಷ ರೂ. ಮೌಲ್ಯದ ಟೊಯೊಟಾ ಲೆಕ್ಸಸ್‌ ಸಹಿತ ಎರಡು ವಾಹನಗಳನ್ನು ಹೊಂದಿದ್ದರೆ ಅಮಿತಾಭ್‌ ಬಳಿ 9 ವಾಹನಗಳಿವೆ. ಅವರು 1.35 ಕೋಟಿ ರೂ.ಗಳ ಒಂದು ಮರ್ಸಿಡಿಸ್‌ 350, 3.08 ಕೋಟಿ ರೂ.ಗಳ ರಾಲ್ಸ್‌ ರಾಯ್ಸ, 85.63 ಲಕ್ಷ ರೂ.ಗಳ ಮರ್ಸಿಡಿಸ್‌ 350 ಎಲ್‌, 61.48 ಲಕ್ಷ ರೂ.ಗಳ ಪೋರ್ಚ್‌ ಕೇಮನ್‌ ಮತ್ತು ಒಂದು ಟ್ರಾಕ್ಟರ್‌ ಹೊಂದಿದ್ದಾರೆ.

ಸೊಸೆ ಐಶ್ವರ್ಯಾಳಿಂದಲೂ ಸಾಲ, 1.7 ಕೋಟಿ ರೂ ವಾಚುಗಳು: ಜಯಾ ಬಳಿ 13.34 ಕೋಟಿ ರೂ.ಗಳ ಚಿನ್ನಾಭರಣ, ಬೆಳ್ಳಿ ವಸ್ತುಗಳು ಇವೆ. ಅಮಿತಾಭ್‌ ಬಳಿ 26.23 ಕೋಟಿ ರೂ. ಮೌಲ್ಯದ ಚಿನ್ನಾಭರಣ ಇದೆ. ಖಾಸಗಿ ವಸ್ತುಗಳಲ್ಲಿ ಅಮಿತಾಭ್‌ 9.11 ಲಕ್ಷ ರೂ.ಗಳ ಪೆನ್ನು ಮತ್ತು 1.71 ಕೋಟಿ ರೂ.ಗಳ ಕೈಗಡಿಯಾರಗಳನ್ನು ಹೊಂದಿದ್ದಾರೆ.

ಅಮಿತಾಭ್‌ 4.61 ಕೋಟಿ ರೂ.ಗಳ ಸಾಲ ಹೊಂದಿದ್ದಾರೆ ಮತ್ತು ಪುತ್ರ ಅಭಿಷೇಕ್‌ ಬಚ್ಚನ್‌ ಹಾಗೂ ಸೊಸೆ ಐಶ್ವರ್ಯಾ ರೈ ಬಚ್ಚನ್‌ ಸೇರಿದಂತೆ ವ್ಯಕ್ತಿಗಳಿಂದ 99.87 ಕೋಟಿ ರೂ.ಗಳ ಸಾಲ ಪಡೆದಿದ್ದಾರೆ. ಜಯಾ ಅವರು ಮುಂಬಯಿಯ ಜಾಲ್ಸಾದಲ್ಲಿ ಒಂದು ಮತ್ತು ಭೋಪಾಲದಲ್ಲಿ ಎರಡು ಫ್ಲಾಟ್‌ಗಳನ್ನು ಹೊಂದಿದ್ದಾರೆ. ಅಮಿತಾಭ್‌ ಮುಂಬೈ, ಗುರಗಾಂವ್ ಮತ್ತು ಫ್ರಾನ್ಸ್‌ನ ಪ್ಲೇಜ್‌ನಲ್ಲಿ 3 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಅಮಿತಾಭ್‌ ಜುಹುವಿನಲ್ಲಿ 20 ಕೋಟಿ ರೂ. ಮೌಲ್ಯದ ವಾಣಿಜ್ಯ ಕಟ್ಟಡವೊಂದನ್ನು ಹೊಂದಿದ್ದಾರೆ. ಜಯಾ ಕೂಡ ಭೋಪಾಲ ಮತ್ತು ಲಕ್ನೋಗಳಲ್ಲಿ ಕೃಷಿ ಭೂಮಿ ಹೊಂದಿದ್ದಾರೆ.

ಅಮಿತಾಭ್‌ಗೆ ಬಾರಾಬಂಕಿ ಜಿಲ್ಲೆಯ ದೌಲತ್‌ಪುರ್‌ನಲ್ಲಿ ಮತ್ತು ಲಕ್ನೋ ಜಿಲ್ಲೆಯ ಮುಜಾಫ‌ರ್‌ ನಗರ್‌ನಲ್ಲಿ ಎರಡು ಕೃಷಿ ಭೂಮಿ ಇವೆ. 2010-11ರ ವಿತ್ತ ವರ್ಷ ಜಯಾ ಅವರು ತನ್ನ ಆದಾಯ ತೆರಿಗೆ ವಿವರ ಸಲ್ಲಿಕೆಯಲ್ಲಿ 14.52 ಲಕ್ಷ ರೂ. ಹಾಗೂ ಅಮಿತಾಭ್‌ ಅವರು 72.5 ಕೋಟಿ ರೂ.ಗಳ ಆದಾಯವನ್ನು ತೋರಿಸಿದ್ದಾರೆ.

English summary
According to the affidavit filed while submitting nomination papers for the Rajya Sabha, Actor-turned-politician Jaya Bachchan owns moveable and immoveable assets worth Rs 91.65 crore while her husband and Bollywood megastar Amitabh Bachchan has fortunes to the tune of Rs 402.21 crore.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X