»   » ಕಂಠೀರವ ಸ್ಟುಡಿಯೋ ಉದ್ಯಾನಕ್ಕೆ ಅಶ್ವತ್ಥ್ ಹೆಸರು

ಕಂಠೀರವ ಸ್ಟುಡಿಯೋ ಉದ್ಯಾನಕ್ಕೆ ಅಶ್ವತ್ಥ್ ಹೆಸರು

Posted By:
Subscribe to Filmibeat Kannada
ಬೆಂಗಳೂರು ಕಂಠೀರವ ಸ್ಟುಡಿಯೋದ ಉದ್ಯಾನವನಕ್ಕೆ ನಟ ಕೆಎಸ್ ಅಶ್ವತ್ಥ್ ಅವರ ಹೆಸರಿಡಲಾಗುತ್ತದೆ ಎಂದು ಸ್ಟುಡಿಯೋದ ಅಧ್ಯಕ್ಷ ಗಿರೀಶ್ ಮಟ್ಟೆಣ್ಣವರ ಸೋಮವಾರ ತಿಳಿಸಿದರು. ಉದ್ಯಾನವನಕ್ಕೆ ಯಾವಾಗ ಅಶ್ವತ್ಥ್ ಅವರ ಹೆಸರಿಡಲಾಗುತ್ತದೆ ಎಂಬುದನ್ನು ಅಧಿಕೃತವಾಗಿ ಮುಂದೆ ಪ್ರಕಟಿಸಲಾಗುತ್ತಾದೆ ಎಂದು ಮಟ್ಟೆಣ್ಣವರ್ ತಿಳಿಸಿದರು.

ಈಗಾಗಲೇ ಉದ್ಯಾನವನವನ್ನು ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಲಾಗುತ್ತಿದೆ. ರಾಜ್ಯ ಸರ್ಕಾರ 55 ಲಕ್ಷ ರು.ಗಳ ಅನುದಾನದಲ್ಲಿಉದ್ಯಾನವನವನ್ನು ನಿರ್ಮಿಸುತ್ತಿದೆ ಎಂದು ಮಟ್ಟೆಣ್ಣವರ್ ವಿವರ ನೀಡಿದರು. ಬಿಬಿಎಂಪಿ ಚುನಾವಣೆ ಮುಗಿದ ಬಳಿಕ ಉದ್ಯಾನವನಕ್ಕೆ ಅಶ್ವತ್ಥ್ ಅವರ ಹೆಸರಿಡಲಾಗುತ್ತದೆ ಎಂದರು.ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಉದ್ಯಾನವನಕ್ಕೆ ಅಶ್ವತ್ಥ್ ಅವರ ಹೆಸರಿಡಲು ಚುನಾವಣೆ ಮುಗಿಯುವವರೆಗೂ ಕಾಯಬೇಕಾಗುತ್ತದೆ ಎಂದರು.

ಮೇರುನಟ ಅಶ್ವಥ್ ಚಿತ್ರಸಂಪುಟ

ಅಶ್ವತ್ಥ್ ಅವರು ಹಿರಿಯ ನಾಗರೀಕರ ಪ್ರತಿನಿಧಿಯಾಗಿದ್ದರು. ತಮ್ಮ ವಿಭಿನ್ನ ಪಾತ್ರಗಳ ಮೂಲಕ, ಚಿತ್ರಗಳ ಮೂಲಕ ಹಿರಿಯ ನಾಗರೀಕರನ್ನು ಪ್ರತಿನಿಧಿಸುವ ಕೆಲಸವನ್ನು ಮಾಡಿದ್ದಾರೆ. ಉದ್ಯಾನವನಕ್ಕೆ ಅಶ್ವತ್ಥ್ ಹೆಸರಿಡುವ ಮೂಲಕ ಅವರ ಹೆಸರು ಅಜರಾಮರವಾಗಿರುತ್ತದೆ ಎಂದರು. ಸ್ಟುಡಿಯೋದ ಫ್ಲೋರ್ ಒಂದಕ್ಕೆ ಡಾ.ವಿಷ್ಣುವರ್ಧನ್ ಅವರ ಹೆಸರಿಡುವುದಾಗಿಯೂ ಅವರು ತಿಳಿಸಿದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada