»   »  ಪ್ರೇಮಾ ವಿಶೇಷ ಪಾತ್ರದ ಶಿಶಿರಕ್ಕೆ ಪ್ರಥಮ ಪ್ರತಿ

ಪ್ರೇಮಾ ವಿಶೇಷ ಪಾತ್ರದ ಶಿಶಿರಕ್ಕೆ ಪ್ರಥಮ ಪ್ರತಿ

Posted By:
Subscribe to Filmibeat Kannada

ನಾಗತಿಹಳ್ಳಿ ಚಂದ್ರಶೇಖರ್ ಗರಡಿಯ ಹುಡುಗ ಮಂಜು ಸ್ವರಾಜ್ ನಿರ್ದೇಶನದ 'ಶಿಶಿರ' ಚಿತ್ರದಲ್ಲಿ ಹೆಜ್ಜೆಹೆಜ್ಜೆಗೂ ಕುತೂಹಲ ಕೆರಳಿಸುವ ದೃಶ್ಯಗಳು ಹೆಚ್ಚಾಗಿದ್ದು, ಈ ಚಿತ್ರದಲ್ಲಿ ವಿಶೇಷ ಶಬ್ದ ಜೋಡಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

ತೆಲುಗಿನ ಅರುಂಧತಿಗೆ ಸ್ಪೆಷಲ್ ಎಫೆಕ್ಟ್ಸ್ ಮಾಡಿದ್ದ ರಾಜಶೇಖರ್ ರಾವ್ ಮತ್ತು ರಘು ಈಗ ಶಿಶಿರ ಚಿತ್ರಕ್ಕೂ ವಿಶೇಷ ಶಬ್ದ ಜೋಡಿಸುವ ಕೆಲಸ ನಿರ್ವಹಿಸಿದ್ದಾರೆ. ಶಿಶಿರ ಎಂದರೆ ವರ್ಷದ 6ನೇ ಋತು ಅಥವಾ ಪೂರ್ಣಚಂದ್ರ ಎಂಬ ಎರಡೂ ಅರ್ಥ ಇದೆ. ಈ ಎರಡೂ ಅಂಶಗಳು ಚಿತ್ರದಲ್ಲಿ ಆಗಾಗ ಬಂದುಹೋಗುತ್ತವೆ.

ಈಗಾಗಲೇ ಡಬ್ಬಿಂಗ್, ರೀ ರೆಕಾರ್ಡಿಂಗ್ ಕಾರ್ಯಗಳೆಲ್ಲಾ ಪೂರ್ಣಗೊಂಡು ಚಿತ್ರದ ಪ್ರಥಮ ಪ್ರತಿ ಕಳೆದ ವಾರ ಹೊರಬಂದಿದೆ. ಸದ್ಯದಲ್ಲೇ ಸೆನ್ಸಾರ್ ಅನುಮತಿ ಪಡೆದು, ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರಲು ಸಕಲ ಸಿದ್ಧತೆಗಳನ್ನು ನಿರ್ಮಾಪಕರು ಮಾಡಿಕೊಂಡಿದ್ದಾರೆ. ನಟಿ ಪ್ರೇಮ ವಿಶೇಷ ಪಾತ್ರದಲ್ಲಿ ನಟಿಸಿರುವ ಈ ಚಿತ್ರದ 5 ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಸುರೇಶ್ ಬಾಬುರವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್‌ರ ಸಂಕಲನ ಇದೆ. ಬಿ.ಮಹದೇವ್ ಹಾಗೂ ಬಿ.ಟಿ. ಮಂಜು ನಿರ್ಮಾಣದ ಈ ಚಿತ್ರದಲ್ಲಿ ಯಶಸ್-ಮೇಘನಾ, ಯುವ ಜೋಡಿಯಾಗಿ ಅಭಿನಯಿಸಿದ್ದು, ಜೊತೆಗೆ 2 ಪುಟಾಣಿಗಳು ಹಾಗೂ 7.5 ಅಡಿ ಎತ್ತರದ ಸಂತೋಷ್ ಎಂಬ ಯುವಕ ವಿಶೇಷವಾಗಿ ಅಭಿನಯಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada