»   » ಜವರೇಗೌಡ ಪಾರ್ಕ್ ನಲ್ಲಿ ಅಶ್ವತ್ಥ್ ಅಂತಿಮ ದರ್ಶನ

ಜವರೇಗೌಡ ಪಾರ್ಕ್ ನಲ್ಲಿ ಅಶ್ವತ್ಥ್ ಅಂತಿಮ ದರ್ಶನ

Posted By:
Subscribe to Filmibeat Kannada
ಮೈಸೂರು ಸರಸ್ವತಿಪುರಂನ 9ನೇ ಮುಖ್ಯರಸ್ತೆಯಲ್ಲಿರುವ ಜವರೇಗೌಡ ಪಾರ್ಕ್ ನಲ್ಲಿ ಹಿರಿಯ ನಟ ಕೆ ಎಸ್ ಅಶ್ವತ್ಥ್ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ಅಶ್ವತ್ಥ್ ಅವರ ಅಂತಿಮ ದರ್ಶನ ಪಡೆದುಕೊಳ್ಳಲು ಮಧ್ಯಾಹ್ನ 1ಗಂಟೆಯವರೆಗೂ ಪಾರ್ಥೀವ ಶರೀರವನ್ನು ಅಲ್ಲೆ ಇಡಲಾಗುತ್ತದೆ.

ಚಾಮಯ್ಯ ಮೇಷ್ಟ್ರ ಅಂತಿಮ ದರ್ಶನ ಪಡೆಯಲು ಚಿತ್ರರಂಗದ ಹಲವಾರು ಕಲಾವಿದರು, ಗಣ್ಯರು, ಅಭಿಮಾನಿಗಳು ಸಾಲುಗಟ್ಟಿನಿಂತ ದೃಶ್ಯ ಜವರೇಗೌಡ ಪಾರ್ಕ್ ನಲ್ಲಿ ಕಂಡುಬಂತು. ಅಶ್ವತ್ಥ್ ಅವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪ್ರತಿನಿಧಿಯಾಗಿ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರುದ್ರಭೂಮಿಯಲ್ಲಿ ಅಶ್ವತ್ಥ್ ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada