»   » ಐವತ್ತೇಳರಲ್ಲೂ ದಣಿಯದ ಸಿಂಹ ಕನ್ನಡದ ಧಣಿಯಾಗಲಿ

ಐವತ್ತೇಳರಲ್ಲೂ ದಣಿಯದ ಸಿಂಹ ಕನ್ನಡದ ಧಣಿಯಾಗಲಿ

Posted By: Staff
Subscribe to Filmibeat Kannada
Vishnu
ಇಂದು 'ಮಾತಾಡ್ ಮಾತಾಡು ಮಲ್ಲಿಗೆ' ಚಿತ್ರದ ಹೂವಯ್ಯನ ಹುಟ್ಟಿದ ಹಬ್ಬ. ಅಭಿಮಾನಿಗಳ ಪಾಲಿನ ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಇಂದು 57ರ ಸಂಭ್ರಮ.

'ವಂಶವೃಕ್ಷ'ಚಿತ್ರದ ಪುಟ್ಟ ಪಾತ್ರಕ್ಕಾಗಿ ಬಣ್ಣ ಹಚ್ಚಿಕೊಂಡ ವಿಷ್ಣು, 1972ರ 'ನಾಗರಹಾವು'ಚಿತ್ರದಿಂದ 2007ರ 'ಮಾಮಾಮ'ತನಕ ನಿರ್ವಹಿಸಿದ ಪಾತ್ರಗಳು ವೈವಿಧ್ಯಮಯ. ಹೀಗಾಗಿಯೇ ಅಭಿಮಾನಿಗಳ ಸಂಖ್ಯೆಸಹಾ ದೊಡ್ಡದು. ಸೆಪ್ಟೆಂಬರ್ 18,1950ರಲ್ಲಿ ಜನಿಸಿದ ಕುಮಾರ್ ಎಂಬಾತ, ವಿಷ್ಣುವರ್ಧನ್ ಆಗಲು ಪಟ್ಟ ಶ್ರಮ ಕಡಿಮೆಯೇನಿಲ್ಲ.

ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಪಳಗಿದ ವಿಷ್ಣು, 180ಚಿತ್ರಗಳಲ್ಲಿ ನಟಿಸಿದ್ದಾರೆ. ನಟಿಸುತ್ತಲೇ ಇದ್ದಾರೆ.. ಮಾತಲ್ಲಿ ದಣಿವಿದ್ದರೂ, ಕ್ರಿಯೆಯಲ್ಲಿ ಇಂದಿಗೂಎಂದಿಗೂ ಮುಗಿಯದ ಲವಲವಿಕೆ. ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪಡೆದಿರುವ ವಿಷ್ಣು, ನಾಗರಹಾವು (1972), ಗಂಧದಗುಡಿ (1973), ಭೂತಯ್ಯನ ಮಗ ಅಯ್ಯು (1974), ಹೊಂಬಿಸಿಲು (1977), ಸಾಹಸ ಸಿಂಹ (1982), ಬಂಧನ (1984), ಜೀವನ ಚಕ್ರ (1985), ಮಲಯ ಮಾರುತ (1985), ಸುಪ್ರಭಾತ (1988), ಹೃದಯಗೀತೆ (1989), ಮುತ್ತಿನ ಹಾರ (1990), ಮತ್ತೆ ಹಾಡಿತು ಕೋಗಿಲೆ (1990), ನಿಷ್ಕರ್ಷ (1993), ಯಜಮಾನ (2000), ಆಪ್ತಮಿತ್ರ (2004), ವಿಷ್ಣುಸೇನಾ (2005)ಸೇರಿದಂತೆ ಅನೇಕ ಚಿತ್ರಗಳಲ್ಲಿ ಸ್ಮರಣೀಯ ಅಭಿನಯ ನೀಡಿದ್ದಾರೆ.

ಎಂದಿನ ಸಾಮಾಜಿಕ ಚಿತ್ರಗಳು, ಮಸಾಲೆ ಚಿತ್ರಗಳ ಮಧ್ಯೆ ಸಾಹಸಸಿಂಹ ಕಳೆದುಹೋಗದಿರಲಿ. ಪೌರಾಣಿಕ, ಐತಿಹಾಸಿಕ ಚಿತ್ರಗಳಲ್ಲಿ ವಿಷ್ಣು ಕಾಣಿಸಿಕೊಳ್ಳಲಿ ಎಂಬುದು ಅಭಿಮಾನಿಗಳ ಒತ್ತಾಯ.

ವಿಷ್ಣುಗೆ ಶುಭಾಶಯ ಹೇಳಲು ದಯವಿಟ್ಟು ಇಲ್ಲಿ ಕ್ಲಿಕ್ಕಿಸಿ

English summary
Vishnu turns 57

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada