»   »  ಚಿತ್ರನಟಿ ಡಾ.ಲೀಲಾವತಿ ಚುನಾವಣಾ ಕಣಕ್ಕೆ

ಚಿತ್ರನಟಿ ಡಾ.ಲೀಲಾವತಿ ಚುನಾವಣಾ ಕಣಕ್ಕೆ

Subscribe to Filmibeat Kannada
Veteran actress Leelavathi all set to contest LS
ಹಿರಿಯ ಚಿತ್ರನಟಿ ಡಾ.ಲೀಲಾವತಿ ಅವರನ್ನುಚುನಾವಣಾ ಕಣಕ್ಕಿಳಿಸಲು ಕರ್ನಾಟಕ ಜನತಾ ಪಕ್ಷ ನಿರ್ಧರಿಸಿದೆ. ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪ್ರಸನ್ನ ಕುಮಾರ್ ತಿಳಿಸಿದರು.

ಚುನಾವಣೆಗೆ ಸ್ಪರ್ಧಿಸುವ ಕುರಿತು ಲೀಲಾವತಿ ಅವರೊಂದಿಗೆ ಹಲವು ಸುತ್ತಿನ ಮಾತುಕತೆ ಸಹ ನಡೆದಿದೆ. ಚುನಾವಣೆಗೆ ಸ್ಪರ್ಧಿಸಲು ಅವರು ಬಹುತೇಕ ಒಪ್ಪಿಗೆ ನೀಡಿದ್ದಾರೆ. ತಾವು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪ್ರಸನ್ನ ಕುಮಾರ್ ಹೇಳಿದರು. ಅಂದಹಾಗೆ ಪ್ರಸನ್ನ ಕುಮಾರ್ ಅವರು ಹೊಟ್ಟೆಪಕ್ಷ ರಂಗಸ್ವಾಮಿ ಅವರ ಮಗ. ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಅಪ್ಪನ ಗಿನ್ನಿಸ್ ದಾಖಲೆಯನ್ನು ಮುರಿಯಬೇಕು ಎಂಬಛಲವನ್ನು ಪ್ರಸನ್ನ ಕುಮಾರ್ ಹೊಂದಿದ್ದಾರೆ.

ಲೀಲಾವತಿ ಅವರು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಇತ್ತೀಚೆಗೆ ನೆಲಮಂಗಲ ಬಳಿಯ ಸೋಲದೇವನಹಳ್ಳಿಯಲ್ಲಿ ಆಸ್ಪತ್ರೆಯನ್ನು ಕಟ್ಟಿಸಿದ್ದರು. ಎಂಟು ಬಾರಿ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಪ್ರಸ್ತುತ ಅವರು ತಮ್ಮ ಮಗ ವಿನೋದ್ ರಾಜ್ ಅವರ 'ಯಾರದು' ನಿರ್ಮಾಣ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಲೀಲಾವತಿ ಮತ್ತು ವಿನೋದ್ ರಾಜ್ ಕೊಲೆಗೆ ಯತ್ನ
ಸದ್ದಿಲ್ಲದ ಸಮಾಜ ಸೇವಕಿ ನಟಿ ಲೀಲಾವತಿ
ಯಾರದು ಚಿತ್ರದಲ್ಲಿ ಮೇರಿಯಾಗಿ ಲೀಲಾವತಿ
ವಿನೋದ್ ಮೇಲೆ ಗುಂಡಿನ ದಾಳಿ ನಡೆದಿಲ್ಲ : ಬಿದರಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada