For Quick Alerts
  ALLOW NOTIFICATIONS  
  For Daily Alerts

  ದುಷ್ಕರ್ಮಿಗಳಿಂದ ಸಿನಿ ತಾರೆ ಮೀನಾಕ್ಷಿ ಬರ್ಬರ ಹತ್ಯೆ

  By Rajendra
  |

  ಇಬ್ಬರು ಜೂನಿಯರ್ ಚಿತ್ರನಟರು ಸಿನಿಮಾ ತಾರೆಯೊಬ್ಬರನ್ನು ಬರ್ಬರವಾಗಿ ಕೊಂದು ಆಕೆಯ ಶವವನ್ನು ನೀರಿನ ಟ್ಯಾಂಕೊಂದಕ್ಕೆ ಎಸೆದು ಪರಾರಿಯಾಗಿದ್ದರು. ಈ ಪ್ರಕರಣವನ್ನು ಭೇದಿಸಿರುವ ಮುಂಬೈ ಪೊಲೀಸರು ಅಪರಾಧಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

  ಕೊಲೆಯಾದ ಸಿನಿಮಾ ತಾರೆಯ ಹೆಸರು ಮೀನಾಕ್ಷಿ ಥಾಪಾ. ಈಕೆ ಹೀರೋಯಿನ್ ಸೇರಿದಂತೆ ಹಲವು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದರು. ಮಾ.30ರಂದು ಈಕೆಯನ್ನು ದುಷ್ಕರ್ಮಿಗಳು ಅಪಹರಿಸಿದ್ದರು. 'ಹೀರೋಯಿನ್' ಚಿತ್ರದ ಸೆಟ್ಸ್‌ನಲ್ಲಿ ಈಕೆಯೊಂದಿಗೆ ಸ್ನೇಹ ಸಂಪಾದಿಸಿದ ಆರೋಪಿಗಳು ಬಳಿಕ ಈಕೆಯನ್ನು ಅಪಹರಿಸಿ ಕೊಲೆ ಮಾಡಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.

  ಶ್ರೀಮಂತ ಕುಟುಂಬಕ್ಕೆ ಸೇರಿದ್ದ ಈಕೆಯನ್ನು ಅಪಹರಿಸಿ ರು.15 ಲಕ್ಷ ಒತ್ತೆಹಣಕ್ಕೆ ಬೇಡಿಕೆ ಇಟ್ಟಿದ್ದರು. ಒತ್ತೆಹಣ ಕೊಡುವುದಿಲ್ಲ ಎಂದು ಗೊತ್ತಾದ ಬಳಿಕ ಈಕೆಯನ್ನು ಕೊಂದು ಹಾಕಿ ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ನೀರಿನ ಟ್ಯಾಂಕ್ ಒಂದಕ್ಕೆ ಎಸೆದು ಪರಾರಿಯಾಗಿದ್ದರು. ಅಮಿತ್ ಜೈಸ್ವಾನ್ ಹಾಗೂ ಪ್ರೀತಿ ಸರಿನ್ ಬಂಧಿತ ಆರೋಪಿಗಳು. ನಟಿ ಮೀನಾಕ್ಷಿಯ ತಲೆ ಇನ್ನೂ ಪತ್ತೆಯಾಗಿಲ್ಲ. (ಏಜೆನ್ಸೀಸ್)

  English summary
  Bollywood actress Meenakshi Thapa's headless torso found at Allahabad, who was abducted on 30th March . The murder accused -Amit Jaiswal and Preeti Sarin -have confessed to killing Thapa lured by ransom Mumbai police said.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X