Just In
Don't Miss!
- Sports
ಭಾರತ vs ಇಂಗ್ಲೆಂಡ್: ಅಭಿಮಾನಿಗಳಿಗೆ ಸ್ಟೇಡಿಯಂಗೆ ಪ್ರವೇಶವಿಲ್ಲ
- News
'ಕೌನ್ ಬನೇಗಾ...' ವಿಡಿಯೋ ಹಂಚಿಕೊಂಡು ಖುಷಿಪಟ್ಟ ಗೀತಾ ಗೋಪಿನಾಥ್
- Finance
ಬಜೆಟ್ 2021: ವಿವಿಧ ಮಲ್ಟಿಪ್ಲೆಕ್ಸ್ ಪ್ರತಿನಿಧಿಗಳಿಂದ ನಿರ್ಮಲಾ ಸೀತಾರಾಮನ್ ಗೆ ಮನವಿ
- Automobiles
ಬಿಡುಗಡೆಯಾಗಲಿದೆ 27 ಕಿ.ಮೀಗಿಂತ ಹೆಚ್ಚು ಮೈಲೇಜ್ ನೀಡುವ ಹೋಂಡಾ ಸಿಟಿ ಹೈಬ್ರಿಡ್ ಆವೃತ್ತಿ
- Lifestyle
ನಿಮ್ಮ ಚರ್ಮದ ಆರೈಕೆಗೆ ಬೆಲ್ಲ ಆಗಲಿದೆ ಒಂದೊಳ್ಳೆ ಪಾಟ್ನರ್..
- Education
KIOCL Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನನ್ನ ಕನಸು...ನನಸಾಗಲು ಬನ್ನಿ ಕೈ ಜೋಡಿಸಿ...
"ಇವನ್ಯಾವನೋ ಎಲ್ಲಿಂದ ಬಂದ, ಒಂದ್ಚೂರು ಕಾಮನ್ ಸೆನ್ಸ್ ಬೇಡ್ವಾ ಅಂತ ಸ್ವಲ್ಪ ಮುಂದಕ್ಕೆ ಹೋಗಿ ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ನೋಡಿದ್ರೆ, ಮುಂದುಗಡೆ ಆ ಗಾಡಿ ತರಚಿದ್ದರ ಪರಿಣಾಮ ಹೊಸ ಕಾರಿನ ಬಣ್ಣ ಅಲ್ಲಲ್ಲಿ ಹೋಗಿದ್ದು ಎದ್ದು ಕಾಣುತ್ತಿತ್ತು. ಇಂಥವರಿಗೆಲ್ಲಾ ಯಾವಾಗ ಬುದ್ಧಿ ಬರುತ್ತೋ ಅಂತ ಗೊಣಗುತ್ತಾ ಹತ್ತದಿರಲು ಮನಸ್ಸು ಬಿಡಲಿಲ್ಲ.
"ಅಲ್ಲ... ಇವರೆಲ್ಲಾ ಶಾಲಾ-ಕಾಲೇಜುಗಳಲ್ಲಿ ಏನ್ ಓದುಕೊಂಡು ಬರ್ತಾರೆ ಅಂತ, ಸಾಮಾಜಿಕ ಕಳಕಳಿ ಅನ್ನೋದು ಎಳ್ಳಷ್ಟೂ ಇರಲ್ವಲ್ಲ, ನಮ್ಮಿಂದ ಇನ್ನೊಬ್ರಿಗೆ ತೊಂದರೆಯಾಗಬಾರದು, ಒಂದು ವೇಳೆ ಆದರೆ ಅವರಿಗೆ ಕ್ಷಮೆ ಕೇಳಬೇಕು ಅನ್ನೋದೆ ಗೊತ್ತಿಲ್ಲ ಅಂದ್ರೆ, ಏನ್ ಓದಿ ಏನ್ ಉಪಯೋಗ?, ಸುಮ್ಮನೆ ಮನೆಯ ಷೋಕೇಸಿನ ತುಂಬಾ ಪ್ರಶಸ್ತಿಗಳು ಹಾಗೂ ಪ್ರಶಸ್ತಿ ಪತ್ರಗಳು. ಮಾನವೀಯತೆ, ಸಾಮಾಜಿಕ ಕಳಕಳಿ ಹರಿಯದ ರಕ್ತ ಭೂಮಿಗೆ ಭಾರವಲ್ಲದೆ ಮತ್ತಿನ್ನೇನು." ಮನಸ್ಸಿನಲ್ಲಿ ಆಲೋಚನೆಗಳು ನನ್ನ ಕಾರಿಗಿಂತ ವೇಗವಾಗಿ ಓಡ್ತಾನೆ ಇದ್ದವು.
ಈ ತರಹದ ಘಟನೆಗಳು ಪ್ರತಿದಿನ ಒಂದಿಲ್ಲ-ಇನ್ನೊಂದೆಡೆ ನಡಿತಾನೆ ಇರುತ್ವೆ. "ದಿನಾ ಸಾಯೋರಿಗೆ,ಅಳೋರ್ಯಾರು" ಅಂತ ಅನ್ನುವಂತೆ, ಎಲ್ಲರೂ ಹೀಗೆಯೆ ಮಾಡ್ತಿರಬೇಕಾದ್ರೆ, ಸರಿಪಡಿಸೋರು ಯಾರು ಅಂತ ಎಲ್ಲರೂ ತಪ್ಪು ಮಾಡ್ತಾನೆ ಹೋಗ್ತಾರೆ ಸರಿ ಪಡಿಸಲು ಮನಸ್ಸು ಮಾಡದೆ!. ಅಂಥ ತಪ್ಪನ್ನು ನಾವು ಮಾಡಬಾರದು ಅಂತ ಆಲೋಚಿಸಿದ್ದರಿಂದ ಜನ್ಮ ತಾಳಿದ್ದು "ನನ್ನ ಕನಸು".
"ಬೆಳೆಯುವ ಸಿರಿ ಮೊಳಕೆಯಲ್ಲಿ" ಅನ್ನೋ ಗಾದೆ ಮಾತಿನಂತೆ, ನಾವು ಚಿಕ್ಕಮಕ್ಕಳಲ್ಲಿ ಇಂಥಾ ಸಾಮಾಜಿಕ ಕಳಕಳಿ ಮೂಡಿಸಲು ಪ್ರಯತ್ನ ಪಟ್ಟರೆ, ಈ ಕ್ಷಣ ಅಲ್ಲದಿದ್ದರೂ ಮುಂದೊಂದಿನ ಅದು ಪ್ರತಿಫಲ ಕೊಟ್ಟೇಕೊಡುತ್ತೆ ಅಂತ, "ದೃಶ್ಯ ಮಾಧ್ಯಮ ಮುಖಾಂತರ ಶಿಕ್ಷಣ" ವನ್ನು ಮತ್ತು ನಮ್ಮ ಕೈಲಾದ ಸೌಲಭ್ಯಗಳನ್ನು "ನನ್ನ ಕನಸು" ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಕೊಡುತ್ತಿದ್ದೇವೆ.
ಕಡೇ ಪಕ್ಷ ಮಕ್ಕಳಿಗೆ ಕೊಟ್ಟರೆ ಮುಂದೊಂದಿನ ಭವ್ಯ ಭಾರತ ಸಾಮಾಜಿಕ ಕಳಕಳಿಯ ಶ್ರೀಮಂತಿಕೆ ಪಡೆಯಬಹುದು ಅನ್ನೋ ಸದ್ದುದ್ದೇಶದಿಂದ. ಬೈಟು ಕಾಫೀ ಫಿಲ್ಮ್ಸ್(http://www.by2coffeefilms.com ) ಮತ್ತು ನಿರಂತರ (http://www.nirantarafoundation.org.in ) ತಂಡಗಳ ಸಹಯೋಗದಲ್ಲಿ ನಡೆಯುವ ಮುಂದಿನ "ನನ್ನ ಕನಸು" ಕಾರ್ಯಕ್ರಮಗಳ ಮುಖಾಂತರ ಶಾಲೆಗೆ ದೇಣಿಗೆ ಕೊಡಲಿಚ್ಛಿಸುವವರು, ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಅಥವಾ ಈ-ಮೇಲ್ ವಿಳಾಸ ಸಂಪರ್ಕಿಸಿ: 98866 44123, 96119 09052
ಈ-ಮೇಲ್ ವಿಳಾಸ: contactus@by2coffeefilms.com
ಮುಂದಿನ ನನ್ನ ಕನಸು ಕಾರ್ಯಕ್ರಮ ನಡೆಯುವ ವಿವರಗಳು ಹೀಗಿವೆ:
ದಿನಾಂಕ: 27 ನವೆಂಬರ್ 2010
ಸ್ಥಳ: ಗಾಂಧಿನಗರ ಪ್ರೌಢಶಾಲೆ, ಕುಮಾರಪಾರ್ಕ್ ಪಶ್ಚಿಮ, ಬೆಂಗಳೂರು
ಬೈಟು ಕಾಫೀ ಫಿಲ್ಮ್ಸ್ ಪರವಾಗಿ...
ಅಮರನಾಥ್ ವಿ.ಬಿ