For Quick Alerts
  ALLOW NOTIFICATIONS  
  For Daily Alerts

  ಮಾತು ಮರೆತ ನಿಖಿತಾ; ದರ್ಶನ್ ಜೊತೆ ಐಟಂ ಸಾಂಗ್

  |
  <ul id="pagination-digg"><li class="next"><a href="/news/19-kannada-movie-snehitaru-darshan-nikita-item-song-aid0172.html">Next »</a></li></ul>

  ಕೆಲವೊಮ್ಮೆ ಮಾತ್ರ ಆಕಸ್ಮಿಕಗಳು ಸಂಭವಿಸುತ್ತವೆ. ಕಳೆದ ವರ್ಷದ ವಿವಾದಕ್ಕೀಡಾಗಿದ್ದ ತಾರಾಜೋಡಿ ದರ್ಶನ್ ಮತ್ತು ನಿಖಿತಾ ಮತ್ತೆ ಒಂದಾಗಿದ್ದಾರೆ. ಅಂದರೆ ಸ್ನೇಹಿತರು' ಚಿತ್ರದಲ್ಲಿ ಮತ್ತೆ ಅವರಿಬ್ಬರೂ ಒಟ್ಟಿಗೆ ನಟಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ಚಿತ್ರ ವಿವಾದಕ್ಕಿಂತ ಮೊದಲೇ ಪ್ರಾರಂಭವಾದ ಚಿತ್ರವಾಗಿತ್ತು. ಆದರೆ ಸ್ನೇಹಿತರು ನಂತರ ಒಪ್ಪಿಕೊಂಡ ಚಿತ್ರ.

  ವಿವಾದ ಹೊಗೆಯಾಡುತ್ತಿದ್ದ ವೇಳೆ ನಿಖಿತಾ ಹೇಳಿದ್ದು "ಒಪ್ಪಿಕೊಂಡದ್ದನ್ನು ಮುಗಿಸುತ್ತೇನೆ, ಮತ್ತೆ ದರ್ಶನ್ ಸಹವಾಸವೇ ಬೇಡ" ಎಂಬ ಮಾತು. ಆದರೆ ಆ ಮಾತೀಗ ಕಾಲಗರ್ಭದೊಳಕ್ಕೆ ಜಾರಿದೆ. ನಿಖಿತಾ ಮತ್ತೆ ದರ್ಶನ್ ಜೊತೆ ಹೆಜ್ಜೆಹಾಕಿದ್ದಾರೆ. ಅದೂ 'ಐಟಂ ಸಾಂಗ್' ನಲ್ಲಿ ಎಂಬುದು ಸಿಕ್ಕ ಮಾಹಿತಿ ಹಾಗೂ ವಿಶೇಷ ಸಂಗತಿ.

  ಗೀತಸಾಹಿತಿ ರಾಮ್ ನಾರಾಯಣ್ ನಿರ್ದೇಶನದ 'ಸ್ನೇಹಿತರು' ಚಿತ್ರದಲ್ಲಿ ನಿಖಿತಾರದ್ದು ವಿಶೇಷ ಪಾತ್ರ, ಅವರು ನಾಯಕಿಯಲ್ಲ. ಅಷ್ಟೇ ಅಲ್ಲ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಇದರಲ್ಲಿ ನಾಯಕರಲ್ಲ. ಆದರೆ, ಅವರದ್ದೂ ವಿಶೇಷ ಪಾತ್ರವೇ. ವಿಜಯ್ ರಾಘವೇಂದ್ರ, ಸೃಜನ್ ಲೋಕೇಶ್, ತರುಣ್, ರವಿಶಂಕರ್ ಇಲ್ಲಿ ನಾಯಕರು. ಇವರಿಗೆಲ್ಲ ಒಬ್ಬಳೇ ನಾಯಕಿ ಪ್ರಣೀತಾ. ಮುಂದಿನ ಪುಟ ನೊಡಿ...

  <ul id="pagination-digg"><li class="next"><a href="/news/19-kannada-movie-snehitaru-darshan-nikita-item-song-aid0172.html">Next »</a></li></ul>
  English summary
  Challenging Star Darshan and Actress Nikita Thukral steps together for a Item Song in Snehitaru Movie. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X