»   » ಮರೆಯಲಾರೆ ಎಂದು ಬರುತ್ತಿದ್ದಾರೆ ಚೇತನ್

ಮರೆಯಲಾರೆ ಎಂದು ಬರುತ್ತಿದ್ದಾರೆ ಚೇತನ್

Posted By:
Subscribe to Filmibeat Kannada

'ಆ ದಿನಗಳು' ಚೇತನ್ ಕೊಂಚ ಬ್ರೇಕ್ ನ ಬಳಿಕ ಬೆಳ್ಳಿತೆರೆಗೆ ಮರಳಿದ್ದಾರೆ. ಅವರ ಹೊಸ ಚಿತ್ರ 'ಮರೆಯಲಾರೆ' ಭಾನುವಾರ ಸಂಜೆ ಸೆಟ್ಟೇರಿದೆ. ಸಿಂಧು ಲೋಕನಾಥ್ ಎಂಬ ಕೊಡಗಿನ ಬೆಡಗಿ ಚಿತ್ರದ ನಾಯಕಿ. ಈಕೆ ಈ ಹಿಂದೆ 'ಪರಿಚಯ' ಚಿತ್ರದ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಮರೆಯಲಾರೆ' ಚಿತ್ರದ ಮೂಲಕ ಸಿಂಧು ಪೂರ್ಣ ಪ್ರಮಾಣದ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ.

ದಿವಂಗತ ಖಾದ್ರಿ ಶಾಮಣ್ಣನವರ ಸಹೋದರ ಖಾದ್ರಿ ಅಚ್ಯುತನ್ ರವರ ಪುತ್ರ ಶರತ್ ಖಾದ್ರಿ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.ನೋಕಿಯಾ ಸಂಸ್ಥೆಯಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಶರತ್ ಈಗ ನಾಗರಭಾವಿಯಲ್ಲಿ ಸ್ಟುಡಿಯೋ ಸ್ಥಾಪಿಸಿದ್ದಾರೆ. ಹಲವಾರು ಕಿರುಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ಶರತ್ ಅವರಿಗೆ ಹಿರಿತೆರೆಯಲ್ಲಿ ಇದು ಮೊದಲ ಅನುಭವ.

ಪತ್ರಿಕಾಗೋಷ್ಠಿಯಲ್ಲಿ ಶರತ್ ಮಾತನಾಡುತ್ತಾ, ಕೆಲವೆ ದಿನಗಳಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು ಬೆಂಗಳೂರು, ಚಿಕ್ಕಮಗಳೂರು, ಮೇಲುಕೋಟೆ, ಉತ್ತರ ಕರ್ನಾಟಕ, ಅಂಡಮಾನ್, ಹಾಕಾಂಗ್ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ರವರ ಸಂಗೀತ ಹಾಗೂ ನಾರಾಯಣರ ಛಾಯಾಗ್ರಹಣವಿದೆ ಎಂದು ವಿವರ ನೀಡಿದರು.

ತಮ್ಮ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಚೇತನ್ ನಿರ್ದೇಶಕರು ಮೂರುವರ್ಷಗಳ ಹಿಂದೆ ಚಿತ್ರದ ಕಥೆಯನ್ನು ಸಿದ್ದ ಪಡಿಸಿಕೊಂಡಿದ್ದರು. ಆರು ತಿಂಗಳ ಹಿಂದೆ ಕಥೆ ಕೇಳಿದ ನಾನು ಶರತ್ ಅವರಿಗೆ ಚಿತ್ರಕಥೆಗೆ ಅನುಕೂಲವಾದ ಕೆಲವು ಅಂಶಗಳನ್ನು ಸೇರಿಸುವಂತೆ ಹೇಳಿದೆ ಎಂದರು. ನಾಯಕಿ ಸಿಂಧೂ ಕೂಡ ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ವಿವರಣೆ ನೀಡಿದರು.

ಮುಹೂರ್ತ ಸಮಾರಂಭಕ್ಕೂ ಮುನ್ನ ನಿರ್ದೇಶಕರು ಮಕ್ಕಳಿಗಾಗಿ ಹಲವು ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ವಿಜೇತರಾದವರಿಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ ಅವರಿಂದ ಬಹುಮಾನ ವಿತರಣೆ ಮಾಡಿಸಿದರು. ಈ ಚಿತ್ರವನ್ನು ಸುರಭಿ ಟಾಕೀಸ್ ಲಾಂಛನದಲ್ಲಿ ನಿರ್ಮಿಸಲಾಗುತ್ತಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada